ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್
ಡಿ.11ಕ್ಕೆ ರಿಲೀಸ್ ಆದ ‘ದಿ ಡೆವಿಲ್’ ಚಿತ್ರದಲ್ಲಿ ರಾಜಕೀಯದ ಕಹಾನಿ ಇದೆ. ಈ ಚಿತ್ರವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಬಹುತೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಆಗಿದೆ. ನಿಜ ಜೀವನದಲ್ಲಿ ದರ್ಶನ್ ರಾಜಕೀಯಕ್ಕೆ ಬರುತ್ತಾರಾ ಎಂಬ ಕೌತುಕ ಇದೆ. ಈ ಬಗ್ಗೆ ಸಹೋದರ ದಿನಕರ್ ತೂಗುದೀಪ್ ಅವರು ಉತ್ತರ ನೀಡಿದ್ದಾರೆ.
ಡಿಸೆಂಬರ್ 11ರಂದು ಬಿಡುಗಡೆ ಆಗಿರುವ ‘ದಿ ಡೆವಿಲ್’ (The Devil) ಸಿನಿಮಾದಲ್ಲಿ ರಾಜಕೀಯದ ಕಥೆ ಇದೆ. ಈ ಸಿನಿಮಾವನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಮೊದಲ ದಿನ ಬಹುತೇಕ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಂಡಿದೆ. ನಿಜ ಜೀವನದಲ್ಲಿ ದರ್ಶನ್ (Darshan) ಅವರು ರಾಜಕೀಯಕ್ಕೆ ಬರುತ್ತಾರಾ ಎಂಬ ಕೌತುಕದ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಇದೆ. ಈ ಬಗ್ಗೆ ಸಹೋದರ ದಿನಕರ್ ತೂಗುದೀಪ್ ಅವರಿಗೆ ಕೇಳಲಾಗಿದೆ. ಅವರು ಉತ್ತರ ನೀಡಿದ್ದಾರೆ. ‘ದರ್ಶನ್ ಅವರು ನಿಜಜೀವನದಲ್ಲಿ ರಾಜಕೀಯಕ್ಕೆ ಬರಬೇಕೋ ಅಥವಾ ಬೇಡವೋ ಎಂಬುದನ್ನು ಅವರ ಅಭಿಮಾನಿಗಳೇ ನಿರ್ಧಾರ ಮಾಡುತ್ತಾರೆ. ಅಭಿಮಾನಿಗಳು ಹೇಗೆ ಹೇಳುತ್ತಾರೋ ಹಾಗೆ ದರ್ಶನ್ ಮಾಡುತ್ತಾರೆ. ದರ್ಶನ್ ಅವರಿಗೆ ರಾಜಕೀಯಕ್ಕೆ ಬರಬೇಕು ಎಂಬ ಆಸೆ ಇಲ್ಲ. ತಮ್ಮನಾಗಿ ಆ ಬಗ್ಗೆ ನನಗಂತೂ ಮಾಹಿತಿ ಇಲ್ಲ. ರಾಜಕೀಯಕ್ಕೆ ಬರುತ್ತೇನೆ ಅಂತ ಅವರು ನನ್ನ ಬಳಿ ಎಂದಿಗೂ ಹೇಳಿಲ್ಲ. ಅಭಿಮಾನಿಗಳು ಇಷ್ಟಪಟ್ಟರೆ ದರ್ಶನ್ ಅವರು ಏನು ಬೇಕಾದರೂ ಮಾಡುತ್ತಾರೆ’ ಎಂದು ದಿನಕರ್ ತೂಗುದೀಪ (Dinakar Thoogudeepa) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
