ಮಾಜಿ ರೌಡಿಶೀಟರ್ ಹರೀಶ್ ಗೌಡ ಇಂಜಾಡಿ ವಿಷಯದಲ್ಲಿ ದ್ವಂದ್ವ ನಿಲುವು ಪ್ರಕಟಿಸಿದ ದಿನೇಶ್ ಗುಂಡೂರಾವ್

Updated on: May 16, 2025 | 12:27 PM

ತಾನು ಬೇರೆ ಜಿಲ್ಲೆಯವನಾಗಿರುವ ಜೊತೆಗೆ ಖಾತೆಯೊಂದರ ಹೊಣೆಗಾರಿಕೆಯನ್ನೂ ಹೊತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ, ಹೆಚ್ಚು ಕಾಂಗ್ರೆಸ್ ಶಾಸಕರನ್ನು ಜಿಲ್ಲೆ ಆಯ್ಕೆ ಮಾಡಿದರೆ ಸ್ಥಳೀಯರೇ ಉಸ್ತುವಾರಿ ಸಚಿವರಾಗಿ ಸಿಗುತ್ತಾರೆ, ಮಂಗಳೂರಿಂದ ಆಯ್ಕೆಯಾಗಿರುವ ಯುಟಿ ಖಾದರ್ ಸ್ಪೀಕರ್ ಆಗಿರದೆ ಸಚಿವರಾಗಿದ್ದರೆ ಇಲ್ಲಿನ ಉಸ್ತುವಾರಿ ಸಚಿವರು ಆಗಿರುತ್ತಿದ್ದರು ಎಂದು ಗುಂಡೂರಾವ್ ಹೇಳಿದರು.

ಮಂಗಳೂರು, ಮೇಎ 16: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ಮಾಜಿ ರೌಡಿಶೀಟರ್ ಹರಿಶ್ ಗೌಡ ಇಂಜಾಡಿ (former rowdy sheeter Harish Gowda Injadi) ಅಧ್ಯಕ್ಷನಾಗಿ ಆಯ್ಕೆಯಾಗಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅರೆಮನಸ್ಸಿನಿಂದ ಅಂಗೀಕರಿಸಿದರು. ಸುಹಾಸ್ ಶೆಟ್ಟಿ ಮತ್ತು ಹರೀಶ್ ಇಂಜಾಡಿ ಬೇರೆ ಬೇರೆ ವ್ಯಕ್ತಿತ್ವಗಳು, ಹರೀಶ್ ಮಾಜಿ ರೌಡಿಶೀಟರ್ ಆಗಿರುವುದರಿಂದ ಅವರು ಸುಧಾರಣೆಯಾಗಿರುವ ಸಾಧ್ಯತೆ ಇದೆ, ಒಮ್ಮೆ ರೌಡಿಶೀಟರ್ ಆದವರು ಜೀವನದುದ್ದಕ್ಕೂ ಆದೇ ಆಗಿ ಮುಂದುವರಿಯಬೇಕು ಅಂತೇನೂ ಇಲ್ಲವಲ್ಲ, ರೌಡಿಶೀಟರ್ ಗಳು ಸಂಪೂರ್ಣವಾಗಿ ಬದಲಾಗಿ ಮೂಲವಾಹಿನಿಗೆ ಬರಲು ಪ್ರಯತ್ನಿಸಿದರೆ ತಡೆಯಲಾದೀತೇ ಎಂದು ಹೇಳುವ ದಿನೇಶ್ ಗುಂಡೂರಾವ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ತನಗೂ ಸಮಾಧಾನ ತಂದಿಲ್ಲ ಎಂದರು.

ಇದನ್ನೂ ಓದಿ:   ಅನಗತ್ಯ ಸಿಸೇರಿಯನ್ ಹೆರಿಗೆ ತಡೆಗೆ ಹೊಸ ಯೋಜನೆ: ದಿನೇಶ್ ಗುಂಡೂರಾವ್ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ