‘ಮನೆ ಮನೆಗೆ ಹೋಗಿ ಚಿಕ್ಕಣ್ಣ ಧನ್ಯವಾದ ಹೇಳಬೇಕು’: ‘ಉಪಾಧ್ಯಕ್ಷ’ ಗೆಲುವಲ್ಲಿ ನಿರ್ದೇಶಕರ ಮಾತು

Updated on: Feb 07, 2024 | 7:11 PM

ಹಾಸ್ಯ ನಟ ಚಿಕ್ಕಣ್ಣ ಅವರು ಹೀರೋ ಆಗಿ ನಟಿಸಿದ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಈ ಖುಷಿಯಲ್ಲಿ ಚಿತ್ರತಂಡದವರು ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ. ಸಕ್ಸಸ್​ ಮೀಟ್​ನಲ್ಲಿ ನಿರ್ದೇಶಕ ಅನಿಲ್​ ಕುಮಾರ್​ ಮಾತನಾಡಿದ್ದಾರೆ. ಜನರು ಮತ್ತು ಸೆಲೆಬ್ರಿಟಿಗಳು ನೀಡಿದ ಬೆಂಬಲಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಸಿನಿಮಾದ ಗೆಲುವಿನಿಂದ ಚಿಕ್ಕಣ್ಣ ಅವರ ಖ್ಯಾತಿ ಹೆಚ್ಚಾಗಿದೆ.

ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಗೆದ್ದಿದೆ. ಈ ಚಿತ್ರಕ್ಕೆ ಅನಿಲ್​ ಕುಮಾರ್​ (Anil Kumar) ನಿರ್ದೇಶನ ಮಾಡಿದ್ದಾರೆ. ಜನರಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ. ದರ್ಶನ್​ ಅವರು ಸಿನಿಮಾ ವೀಕ್ಷಿಸಿ ಬೆನ್ನು ತಟ್ಟಿದ್ದಾರೆ. ಇದೆಲ್ಲದರ ಪರಿಣಾಮವಾಗಿ ‘ಉಪಾಧ್ಯಕ್ಷ’ (Upadhyaksha) ಗೆದ್ದಿದ್ದಾನೆ. ಚಿತ್ರದ ಸಕ್ಸಸ್​ ಮೀಟ್​ನಲ್ಲಿ ನಿರ್ದೇಶಕ ಅನಿಲ್​ ಕುಮಾರ್​ ಮಾತನಾಡಿದ್ದಾರೆ. ‘ಚಿಕ್ಕಣ್ಣ ಕರ್ನಾಟಕದ ಪ್ರತಿ ಮನೆಗೆ ಹೋಗಿ ಧನ್ಯವಾದ ಹೇಳಬೇಕು. ಅಷ್ಟು ಚೆನ್ನಾಗಿ ಈ ಸಿನಿಮಾಗೆ ಜನರು ಪ್ರೀತಿ ತೋರಿಸಿದ್ದಾರೆ. ಒಬ್ಬ ಸ್ನೇಹಿತವಾಗಿ ಚಿಕ್ಕಣ್ಣನ ಈ ಗೆಲುವು ಕಂಡು ನನಗೆ ಖುಷಿ ಆಗಿದೆ. ಈ ಗೆಲುವಿಗಾಗಿ ಅವರು ಪಟ್ಟಿರುವ ಕಷ್ಟ ಏನು ಎಂಬದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಮುಂದೆಯೂ ನಿಮಗೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಒಳ್ಳೆಯದು ಆಗಲಿ’ ಎಂದು ಅನಿಲ್​ ಕುಮಾರ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕಣ್ಣ (Chikkanna) ಅವರಿಗೆ ಜೋಡಿಯಾಗಿ ಮಲೈಕಾ ನಟಿಸಿದ್ದಾರೆ. ಅವರಿಗೂ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ. ‘ಉಪಾಧ್ಯಕ್ಷ’ ಸಿನಿಮಾಗೆ ದರ್ಶನ್​ ಕೊಟ್ಟ ಬೆಂಬಲಕ್ಕೂ ನಿರ್ದೇಶಕರು ಧನ್ಯವಾದ ಅರ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More