Puneeth Rajkumar: ಪುನೀತ್- ಪ್ರೇಮ್ ಕಾಂಬಿನೇಷನ್​ನಲ್ಲಿ ಐತಿಹಾಸಿಕ ಚಿತ್ರ ಮೂಡಿಬರಬೇಕಿತ್ತು, ಆದರೆ..

| Updated By: shivaprasad.hs

Updated on: Nov 13, 2021 | 9:43 AM

Director Prem: ನಿರ್ದೇಶಕ ಪ್ರೇಮ್ ಹಾಗೂ ಪುನೀತ್ ರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಐತಿಹಾಸಿಕ ಸಿನಿಮಾವೊಂದು ಮೂಡಿಬರಬೇಕಿತ್ತು. ಆ ಸಂದರ್ಭದ ಮಾತುಕತೆಯನ್ನು ಪ್ರೇಮ್ ಟಿವಿ9ನೊಂದಿಗೆ ಹಂಚಿಕೊಂಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ‘ಏಕ್​ ಲವ್ ಯಾ’ ಚಿತ್ರತಂಡ ನಿನ್ನೆ (ನವೆಂಬರ್ 12) ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ನಿರ್ದೇಶಕ ಪ್ರೇಮ್, ರಕ್ಷಿತಾ ಪ್ರೇಮ್, ನಟಿಯರಾದ ರಚಿತಾರಾಮ್​ ಸೇರಿದಂತೆ ನಟ, ನಟಿಯರು ಭಾಗವಹಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ಪ್ರೇಮ್ ಪುನೀತ್ ರಾಜ್​ಕುಮಾರ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಚಾರವೊಂದನ್ನು ಬಹಿರಂಗಪಡಿಸಿದ ಅವರು, ಪುನೀತ್ ಜೊತೆಗೆ ಐತಿಹಾಸಿಕ ಚಿತ್ರವೊಂದನ್ನು ಮಾಡಲು ಯೋಜಿಸಿದ್ದಾಗಿ ತಿಳಿಸಿದರು. ಆ ಸಂದರ್ಭದ ಘಟನೆಯನ್ನು ವಿವರಿಸಿದ ಪ್ರೇಮ್, ‘‘ಪುನೀತ್ ಮತ್ತು ನಾನು ಮಾತನಾಡುತ್ತಿದ್ದೆವು. ಆಗ ಪುನೀತ್ ಬಾಸ್, ಒಂದು ಹಿಸ್ಟಾರಿಕಲ್ ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂದು ಕೇಳಿದರು. ಸೂಪರ್ ಆಗಿರುತ್ತದೆ ಎಂದು ಉತ್ತರಿಸಿದೆ. ಆಗ ಅವರು, ನಂಗೆ ಐತಿಹಾಸಿಕ ಚಿತ್ರ ಮಾಡಿ ಬಾಸ್ ಎಂದರು’’ ಎಂದು ಪ್ರೇಮ್ ತಿಳಿಸಿದ್ದಾರೆ. ‘‘ಆ ಕ್ಷಣ ನನಗೆ ರೋಮಾಂಚನವಾಯಿತು. ಹಿಸ್ಟಾರಿಕಲ್ ಬೇಡ ಎಂದು ನಾನು ಮತ್ತೊಂದು ಐಡಿಯಾ ಹೇಳಿದೆ. ಆದರೆ ಅವರು, ಇಲ್ಲಾ ಹಿಸ್ಟಾರಿಕಲ್ ಸಿನಿಮಾ ಮಾಡೋಣ. ಚೆನ್ನಾಗಿರತ್ತೆ ಅಂದರು. ಇಬ್ಬರೂ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ನಂತರ ಮಾಡುವುದೆಂದು ಮಾತಾಡಿಕೊಂಡಿದ್ದೆವು’’ ಎಂದು ಪ್ರೇಮ್ ವಿವರಿಸಿದ್ದಾರೆ.

ಈ ಘಟನೆಯ ನಂತರ ಪುನೀತ್ ಪತ್ನಿ ಅಶ್ವಿನಿಯವರನ್ನು ಕರೆದು, ಪ್ರೇಮ್ ಐತಿಹಾಸಿಕ ಚಿತ್ರ ಮಾಡುತ್ತಾರೆ ಎಂದಿದ್ದರು ಎಂದು ಪ್ರೇಮ್ ನೆನಪಿಸಿಕೊಂಡಿದ್ದಾರೆ. ಈ ಆಸೆ ಉಳಿದುಕೊಂಡಿದೆ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ. ಪುನೀತ್ ಅವರ ಆಸೆಯನ್ನು ಇನ್ನೊಬ್ಬರ ಮುಖಾಂತರ ನೆರವೇರಿಸಲು ಪ್ರಯತ್ನಿಸುತ್ತೇನೆ ಎಂದು ಪ್ರೇಮ್ ಇದೇ ವೇಳೆ ನುಡಿದಿದ್ದಾರೆ.

ಇದನ್ನೂ ಓದಿ:

Singer Mangli: ‘ಏಕ್​ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪುನೀತ್​ ನೆನೆದು ಕಣ್ಣೀರು ಹಾಕಿದ ಗಾಯಕಿ ಮಂಗ್ಲಿ

ಮದುವೆ ಬಳಿಕ ಹನಿಮೂನ್​ಗೆ ಹೋಗಲ್ಲ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​; ಕಾರಣ ಏನು?