‘ಬ್ರ್ಯಾಟ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಇಮೇಜ್ ಡ್ಯಾಮೇಜ್ ಆಯ್ತಾ?

Updated on: Oct 28, 2025 | 8:30 PM

ಡೈರೆಕ್ಟರ್ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್​ನಲ್ಲಿ ‘ಬ್ರ್ಯಾಟ್’ ಸಿನಿಮಾ ಸಿದ್ಧವಾಗಿದೆ. ಅ.31ರಂದು ಈ ಚಿತ್ರ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಟಿವಿ9 ಸಂದರ್ಶನದಲ್ಲಿ ಡಾರ್ಲಿಂಗ್ ಕೃಷ್ಣ, ಶಶಾಂಕ್ ಹಾಗೂ ನಟಿ ಮನಿಷಾ ಕಂದಕೂರ್ ಅವರು ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್​ನಲ್ಲಿ ‘ಬ್ರ್ಯಾಟ್’ ಸಿನಿಮಾ (Brat Movie) ಸಿದ್ಧವಾಗಿದೆ. ಅಕ್ಟೋಬರ್ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಟಿವಿ9 ಸಂದರ್ಶನದಲ್ಲಿ ಶಶಾಂಕ್, ಕೃಷ್ಣ ಮತ್ತು ನಟಿ ಮನಿಷಾ ಕಂದಕೂರ್ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಅವರ ಇಮೇಜ್ ಬದಲಾಗಿದೆ. ಆ ಕುರಿತು ನಿರ್ದೇಶಕ ಶಶಾಂಕ್ (Director Shashank) ತಿಳಿಸಿದ್ದಾರೆ. ‘ಕೃಷ್ಣ ಒಳ್ಳೆಯ ಹುಡುಗ ಎಂಬ ಇಮೇಜ್ ಇತ್ತು. ಅದನ್ನು ಹೇಗಾದ್ರೂ ಮಾಡಿ ಡ್ಯಾಮೇಜ್ ಮಾಡಬೇಕು ಎಂಬ ಆಸೆ ಇತ್ತು. ರಿಯಲ್ ಲೈಫ್​​ನಲ್ಲಿ ಕೃಷ್ಣ ಅವರನ್ನು ನೋಡಿದರೆ ತುಂಬಾ ಒಳ್ಳೆಯ ಹುಡುಗನ ರೀತಿ ಕಾಣಿಸಲ್ಲ. ಅವರ ಲುಕ್​​ಗೆ ಹೊಂದಿಕೆ ಆಗುವ ರೀತಿಯಲ್ಲಿ ಬ್ರ್ಯಾಟ್ ಸಿನಿಮಾ ಮಾಡಿದ್ದೇವೆ. ನನಗೆ ಕೃಷ್ಣ ಎಂದಿಗೂ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಲ್ಲ’ ಎಂದು ಶಶಾಂಕ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 28, 2025 05:14 PM