AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಹೇಳಿದಂತೆ ಆಗಲ್ಲ ಎಂದಿದ್ದೇನೆ: ತೇಜಸ್ವಿ ಸೂರ್ಯ ಜತೆಗಿನ ಮಾತುಕತೆ ಬಿಚ್ಚಿಟ್ಟ ಡಿಕೆಶಿ

ನೀನು ಹೇಳಿದಂತೆ ಆಗಲ್ಲ ಎಂದಿದ್ದೇನೆ: ತೇಜಸ್ವಿ ಸೂರ್ಯ ಜತೆಗಿನ ಮಾತುಕತೆ ಬಿಚ್ಚಿಟ್ಟ ಡಿಕೆಶಿ

ರಮೇಶ್ ಬಿ. ಜವಳಗೇರಾ
|

Updated on: Oct 28, 2025 | 4:15 PM

Share

ಲಾಲ್​ ಬಾಗ್​​ನಲ್ಲಿ ಟನಲ್ ರಸ್ತೆ ನಿರ್ಮಾಣದ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಉಸ್ತುವಾರಿ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆದಿದ್ದು, ಇದರ ನಡುವೆ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದ್ರೆ, ಈ ವೇಳೆ ತೇಜಸ್ವಿ ಸೂರ್ಯ ಅವರ ಕೆಲ ಮಾತಿಗೆ ಡಿಕೆಶಿ ಸಮ್ಮತಿಸಿಲ್ಲ.

ಬೆಂಗಳೂರು, (ಅಕ್ಟೋಬರ್ 28): ಲಾಲ್​ ಬಾಗ್​​ನಲ್ಲಿ ಟನಲ್ ರಸ್ತೆ ನಿರ್ಮಾಣದ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಉಸ್ತುವಾರಿ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆದಿದ್ದು, ಇದರ ನಡುವೆ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದ್ರೆ, ಈ ವೇಳೆ ತೇಜಸ್ವಿ ಸೂರ್ಯ ಅವರ ಕೆಲ ಮಾತಿಗೆ ಡಿಕೆಶಿ ಸಮ್ಮತಿಸಿಲ್ಲ.

ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ ಅವರು ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ. ಟನಲ್ ರಸ್ತೆ ಬದಲಿಗೆ ಮೆಟ್ರೋ ಬರಬೇಕು ಎಂದಿದ್ದಾರೆ. ಪ್ರೈವೆಟ್ ಬಸ್ಗಳಿಗೂ ಅವಕಾಶ ನೀಡಬೇಕು. ಬಿಎಂಎಲ್ ಟಿ ಫೀಡರ್ ಬಸ್ ಮಾಡಬೇಕು ಎಂದಿದ್ದಾರೆ. ಮೆಟ್ರೋ ಕಾಮಗಾರಿ ಮಾಡುತ್ತಿದ್ದೇವೆ. ಆದ್ರೆ ಹಣ ಕೂಡ ಬೇಕು ಅಲ್ವಾ ಎಂದು ಪ್ರಶ್ನಿಸಿದ ಎಂದು ಹೇಳಿದರು.

ದೆಹಲಿಯಿಂದ‌ ಎಷ್ಟು ಹಣ ಬಂದಿದೆ ಎಂದು ಕೇಳಿದೆ. ನಾನು ಕೂಡ ಪಿಎಂ ಅವರನ್ನ ಭೇಟಿ ಮಾಡಲು ಬರುತ್ತೇನೆ.  ಹಣ ಕೊಡಿಸಿ ಎಂದಿದ್ದೇನೆ. ಲಾಲ್ ಬಾಗ್ ನಲ್ಲಿ ಸಣ್ಣ ಜಾಗ ಅಷ್ಟೇ ಬೇಕು ಇಲ್ಲಂದ್ರೆ ನೀವೇ ಜಾಗ ತೋರಿಸಬೇಕು ಎಂದಿದ್ದೇನೆ. ಟನಲ್ ರಸ್ತೆ ಬೇಡವೇ ಬೇಡ ಎಂದಿದ್ದಾರೆ. ಆದ್ರೆ ನೀನು ಹೇಳಿದಂತೆ ಆಗಲ್ಲ ಎಂದಿದ್ದೇನೆ ಎಂದು ತೇಜಸ್ವಿ ಸೂರ್ಯ ಜತೆಗಿನ ಮಾತುಕತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.

ಅವರು ಏನೂ ಬೇಕಾದರೂ ಪಿಐಎಲ್ ಹಾಕಲಿ. ನಾವು ಮರುಪರಿಶೀಲನೆ ಮಾಡುತ್ತೇವೆ ಎಂದಿದ್ದೇವೆ. ಎಲ್ಲಾ ಸ್ಟಡಿ ಮಾಡಿದ್ದೀನಿ ಎಂದಿದ್ದಾರೆ ಅದ್ರೆ ನಾನು ಅವರ ಸಲಹೆಗೆ ಗೌರವ ನೀಡುತ್ತೇನೆ. ಖಾಲಿ ಟ್ರಂಕ್ ಅಂದ್ರೆ ಹಣ ತರಬೇಕು. ಪಿಎಂಗೆ ಹೇಳಿ ಹಣ ಕೇಳಬೇಕು. ಎಲ್ಲರೂ ಸಲಹೆ ಕೊಡ್ತಾರೆ ಟ್ವೀಟ್ ಮಾಡ್ತಾರೆ. ಆದ್ರೆ ಹಣ ತರಬೇಕು ಎಂದು ತೇಜಸ್ವಿ ಸುರ್ಯಗೆ ಟಾಂಗ್ ಕೊಟ್ಟರು.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More