ಕುತೂಹಲ ಮೂಡಿಸಿದ ಡಾ ಜಿ ಪರಮೇಶ್ವರ ಮತ್ತು ಎಚ್ ಸಿ ಮಹಾದೇವಪ್ಪ ಖಾಸಗಿ ಭೇಟಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 12, 2022 | 12:12 PM

ದಲಿತ ಮೂವ್ಮೆಂಟ್ ಹೊಸ ಹುರುಪಿನೊಂದಿಗೆ ಆರಂಭಗೊಂಡರೆ, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಮೈಸೂರು: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ (AICC) ಅಧ್ಯಕ್ಷರಾದ ನಂತರ ಪಕ್ಷದ ದಲಿತ ಮುಖಂಡರಲ್ಲಿ ಹೊಸ ಚೇತನ, ಸಂಚಲನ ಮೂಡಿಸಿರುವುದು ಸತ್ಯ. ಇತ್ತೀಚಿಗೆ ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಅವರು ಖರ್ಗೆ ಅವರನ್ನು ಭೇಟಿಯಾಗಿದ್ದರು. ನಿನ್ನೆ ಅಂದರೆ ಶುಕ್ರವಾರ ಮಾಜಿ ಸಚಿವ ಹಾಗೂ ದಲಿತ ನಾಯಕ ಎಚ್ ಸಿ ಮಹಾದೇವಪ್ಪರ ಮನೆಗೆ ಪರಮೇಶ್ವರ್ ಭೇಟಿ ನೀಡಿ ಮಾತುಕತೆ ನಡೆಸಿದ್ದು ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ದಲಿತ ಮೂವ್ಮೆಂಟ್ ಹೊಸ ಹುರುಪಿನೊಂದಿಗೆ ಆರಂಭಗೊಂಡರೆ, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.