ಪ್ರಿಯಾಂಕ್ ಖರ್ಗೆ ಭಾರತ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬದಲು ಚಿತ್ತಾಪುರ ಮತಕ್ಷೇತ್ರದ ಯಾತ್ರೆ ಮಾಡಲಿ: ಬಿಜೆಪಿ ಮುಖಂಡ
ಅವರು ಹೇಳಿರುವುದು ನಿಜ ಅನ್ನೋದಾದರೆ, ಅವರು ನನ್ನ ಮೇಲೆ ಗುಂಡು ಹಾರಿಸಲಿ, ಗುಂಡೇಟು ತಿನ್ನಲು ಸಿದ್ಧನಿದ್ದೇನೆ ಅಂತ ರಾಠೋಡ್ ಹೇಳಿದರು.
ಕಲಬುರಗಿ: ಚಿತಾಪುರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಜಗಳ ದಿನಕ್ಕೊಂದು ರೂಪ ಪಡೆಯುತ್ತ ಉಲ್ಬಣಗೊಳ್ಳುತ್ತಿದೆ. ಶನಿವಾರ ಕಲಬುರಗಿಯಲ್ಲಿ (Kalaburagi) ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿದ ಯುವ ಬಿಜೆಪಿ ನಾಯಕ ಮಣಿಕಂಠ ರಾಠೋಡ್, ಬಿಜೆಪಿ ನಾಯಕರು ತಮ್ಮನ್ನು ಕ್ಷೇತ್ರದಲ್ಲಿ ತಿರುಗಾಡಲು ಬಿಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರು ಹೇಳಿರುವುದು ನಿಜ ಅನ್ನೋದಾದರೆ, ಅವರು ತನ್ನ ಮೇಲೆ ಗುಂಡು ಹಾರಿಸಲಿ (shoot), ಗುಂಡೇಟು ತಿನ್ನಲು ಸಿದ್ಧನಿದ್ದೇನೆ ಅಂತ ಹೇಳಿದರು. ಪ್ರಿಯಾಂಕ್ ಖರ್ಗೆ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೊದಲು ಚಿತ್ತಾಪುರ ಮತಕ್ಷೇತ್ರದ ಯಾತ್ರೆ ಮಾಡಲಿ ಎಂದು ರಾಠೋಡ್ ಹೇಳಿದರು.
Published on: Nov 12, 2022 11:04 AM
Latest Videos