ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೆಗಲ ಮೇಲೆ ಹೊತ್ತು 2 ಕಿ.ಮೀ ನಡೆದ ಬಾಲಕಿ!

ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೆಗಲ ಮೇಲೆ ಹೊತ್ತು 2 ಕಿ.ಮೀ ನಡೆದ ಬಾಲಕಿ!

ಸುಷ್ಮಾ ಚಕ್ರೆ
|

Updated on: Oct 21, 2024 | 8:00 PM

ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಬಳಿಕ ಅಲ್ಲಿನ ಚಿತ್ರಣವೇ ಬದಲಾಗಿದೆ. ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ದಾಳಿ ನಡೆಸಿದ್ದ ಇಸ್ರೇಲ್ ಕೆಲವು ದಿನಗಳ ಹಿಂದಷ್ಟೇ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್​ನನ್ನು ಕೂಡ ಹತ್ಯೆ ಮಾಡಿತ್ತು. ಗಾಜಾದಲ್ಲಿ ಉಲ್ಬಣಗೊಂಡಿರುವ ಯುದ್ಧಭೀತಿಯಿಂದ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ಬೀದಿ ಬೀದಿ ಅಲೆಯುವಂತಾಗಿದೆ.

ಗಾಜಾದ ರಸ್ತೆಯಲ್ಲಿ ಗಾಯಗೊಂಡಿದ್ದ ತನ್ನ ತಂಗಿಯನ್ನು ಹೊತ್ತು ನಡೆಯುತ್ತಿರುವ ಬಾಲಕಿಯೊಬ್ಬಳ ವಿಡಿಯೋ ಎಕ್ಸ್​ನಲ್ಲಿ ವೈರಲ್ ಆಗಿದೆ. ಆ ಬಾಲಕಿಯನ್ನು ನೋಡಿದ ಕಾರಿನ ಪ್ರಯಾಣಿಕ ಆಕೆಗೆ ನಿನ್ನ ತಂಗಿಯನ್ನು ಏಕೆ ಹೊತ್ತುಕೊಂಡು ಹೋಗುತ್ತಿದ್ದಿ? ಎಂದು ಕೇಳಿದ್ದಾರೆ. ಅದಕ್ಕೆ ಆ ಹುಡುಗಿ ಅವಳನ್ನು ತುಳಿದು ಗಾಯಗೊಳಿಸಿದ್ದಾರೆ. ಆಕೆಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಟೆಂಟ್​ಗೆ ಆಕೆಯನ್ನು ಹೊತ್ತುಕೊಂಡು ಹೋಗುತ್ತಿದ್ದೇನೆ ಎಂದಿದ್ದಾಳೆ. ಬಿಸಿಲಲ್ಲಿ ತಂಗಿಯನ್ನು ಹೊತ್ತು ನಡೆದು ಸುಸ್ತಾಗಿದ್ದ ಆಕೆಯನ್ನು ಕಾರಿನ ಪ್ರಯಾಣಿಕ ತನ್ನ ಕಾರಿನಲ್ಲಿ ಆಕೆಯ ಟೆಂಟ್​ಗೆ ತಲುಪಿಸಿದ್ದಾರೆ. ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಆ ಬಾಲಕಿ ತಂಗಿಯ ಜವಾಬ್ದಾರಿ ತೆಗೆದುಕೊಂಡು, ಆರೈಕೆ ಮಾಡುತ್ತಿದ್ದಾಳೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ