ಕೆಲ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮಡುಗಟ್ಟಿದೆ, ಸ್ಪೋಟಗೊಳ್ಳುವುದೊಂದೇ ಬಾಕಿ: ಲಕ್ಷ್ಮಣ ಸವದಿ, ಶಾಸಕ
ಕಾಂಗ್ರೆಸ್ ಪಕ್ಷ ಯಾವುದೇ ಒಂದು ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಲ್ಲ, ಬಿಜೆಪಿಯ ತತ್ವ-ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಸಮಾಜದ ಎಲ್ಲ ವರ್ಗಗಳನ್ನು ಜೊತೆಗೆ ಕೊಂಡೊಯ್ಯುತ್ತದೆ ಎಂದರು. ಲೋಕ ಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಸವದಿ ಹೇಳಿದರು.
ಬಾಗಲಕೋಟೆ: ಕೆಲ ಬಿಜೆಪಿ ನಾಯಕರಲ್ಲಿ ಅಸಮಾಧಾನದ ಲಾವಾರಸ ಕುದಿಯುತ್ತಿದೆ, ಅದು ಜ್ವಾಲಾಮುಖಿಯಾಗಿ (volcano) ಸ್ಪೋಟಗೊಳ್ಳುವುದೊಂದೇ ಬಾಕಿಯಿದೆ ಎಂದು ಅಥಣಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Lakshman Savadi) ಹೇಳಿದರು. ಬಾಗಲಕೋಟೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕೆಲ ಹಿರಿಯ ಬಿಜೆಪಿ ನಾಯಕರು ತೀವ್ರ ಅಸಮಾಧಾನಗೊಂಡಿರುವ ಬಗ್ಗೆ ಕೇಳಿದಾಗ ಜನೆವರಿ 26 ನಂತರ ರಾಜ್ಯ ರಾಜಕಾರಣದ ಚಿತ್ರಣ ಬದಲಾಗಿದೆ, ಅದರ ಬಗ್ಗೆ ಈಗ ಯಾವುದೇ ಸುಳಿವು ನೀಡಲ್ಲ, ಕಾದು ನೋಡಿ ಅಂತ ಹೇಳಿದರು. ಅಂದರೆ, ಸೋಮಣ್ಣ, ರಮೇಶ್ ಜಾರಕಿಹೊಳಿ (Ramesh Jarkiholi), ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮೊದಲಾದವರು ನಿಷ್ಠೆ ಬದಲಾಗಲಿದೆಯೇ ಅಂತ ಕೇಳಿದಾಗ, ಲೋಕ ಸಭಾ ಚುನಾವಣೆಗಾಗಿ ಪಕ್ಷದ ಚಟುವಟಿಕೆಗಳು ಜನೆವರಿ 26 ರ ನಂತರ ಆರಂಭವಾಗಲಿವೆ ಅಲ್ಲಿಯವರೆಗೆ ಏನನ್ನೂ ಬಯಲು ಮಾಡಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಒಂದು ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಲ್ಲ, ಬಿಜೆಪಿಯ ತತ್ವ-ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಸಮಾಜದ ಎಲ್ಲ ವರ್ಗಗಳನ್ನು ಜೊತೆಗೆ ಕೊಂಡೊಯ್ಯುತ್ತದೆ ಎಂದರು. ಲೋಕ ಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಸವದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ