ನನ್ನ ಜೊತೆಗೆ ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ; ಹೊಸ ಬಾಂಬ್ ಸಿಡಿಸಿದ ಲಕ್ಷ್ಮಣ ಸವದಿ
ಬಿಜೆಪಿಯಲ್ಲಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ರಾಜ್ಯಾಧ್ಯಕ್ಷರು ಬದಲಾವಣೆ ಕೂಡ ಇಲ್ಲ, ಇವಾಗ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅಲ್ಲಿ ಹೇಳೋರು, ಕೇಳೋರು ಯಾರಿಲ್ಲ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಟೀಕಿಸಿದ್ದಾರೆ.
ಬೆಂಗಳೂರು, ಅ.10: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ವಿಳಂಬ ವಿಚಾರ ‘ನನ್ನ ಜೊತೆಗೆ ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Lakshman Savadi) ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಬಿಜೆಪಿ ಲೀಡರ್ ಲೆಸ್ ಪಾರ್ಟಿ ಆಗಿದೆ. ಅಲ್ಲಿ ನಾಯಕ ಇಲ್ಲದೇ ಇರುವುದರಿಂದ ಲೋಕಾಸಭಾ ಚುನಾವಣೆ ವೇಳೆಗೆ ಮತ್ತಷ್ಟು ನಾಯಕರು ಕಾಂಗ್ರೆಸ್ಗೆ ಸೇರುತ್ತಾರೆ. ಜೊತೆಗೆ ಪಕ್ಷ ಸೇರುವ ಮುನ್ನವೇ ಅವರ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸಲಾಗುತ್ತೆ. ಆ ನಂತರ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಆಗಲಿದೆ ಎಂದಿದ್ದಾರೆ.
ಕುಮಾರಸ್ವಾಮಿಯೇ ವಿರೋಧ ಪಕ್ಷದ ನಾಯಕರಾಗ್ತಾರೆ
ಬಿಜೆಪಿಯಲ್ಲಿ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ರಾಜ್ಯಾಧ್ಯಕ್ಷರು ಬದಲಾವಣೆ ಕೂಡ ಇಲ್ಲ, ಇವಾಗ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅಲ್ಲಿ ಹೇಳೋರು, ಕೇಳೋರು ಯಾರಿಲ್ಲ. ಇನ್ನು ಚುನಾವಣೆ ದೃಷ್ಟಿಯಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ನನಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ಜೊತೆ ಜೆಡಿಎಸ್ ವೀಲೀನ ಆಗುತ್ತದೆ. ಹೀಗಾದರೆ, ಕುಮಾರಸ್ವಾಮಿಯೇ ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಇದನ್ನೂ ಓದಿ:ಮೂರು ದಶಕಗಳಿಂದ ಮುಖ್ಯಮಂತ್ರಿಗಳ ಮಕ್ಕಳು ಮಾಡಿರುವ ಆಸ್ತಿಯನ್ನು ಗಮನಿಸಿದ್ದೇನೆ: ಲಕ್ಷ್ಮಣ ಸವದಿ, ಕಾಂಗ್ರೆಸ್ ಶಾಸಕ
ಇನ್ನು ಕೆಲ ದಿನಗಳ ಹಿಂದೆ ರಮೇಶ್ ಕತ್ತಿ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಮಾತುಗಳು ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿತ್ತು. ಈ ಕುರಿತು ಮಾತನಾಡಿದ್ದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ‘ಆ ಕಾಲ ಸಮೀಪಕ್ಕೆ ಬರಲಿ, ಇನ್ನೂ ಕಾಲ ಪಕ್ವವಾಗಿಲ್ಲ. ಕಾಲ ಪಕ್ವವಾದ ಮೇಲೆ ಯಾವ್ಯಾವ ಬಿಜೆಪಿ ನಾಯಕರು ಕಾಂಗ್ರೆಸ್ ಬರುತ್ತಾರೆ, ಅಭ್ಯರ್ಥಿಗಳಾಗುತ್ತಾರೆ ಗೊತ್ತಾಗುತ್ತದೆ ಎಂದಿದ್ದರು. ಜೊತೆಗೆ ರಮೇಶ್ ಕತ್ತಿ ಕೂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ್ದ ಅವರು ‘ರಾಜಕಾರಣ ನಿಂತ ನೀರಲ್ಲ ಎಂಬ ಮಾತು ಹೇಳಿದ್ದರು. ನಮ್ಮ ಮನೆಗೆ ಬಂದು ಟೀ ಕುಡಿದು ಹೋಗಿದ್ದಾರೆ. ಆಗ ಮಾಧ್ಯಮದವರು ಚುನಾವಣೆಯಲ್ಲಿ ಏನ್ ಮಾಡ್ತೀರಿ ಎಂದಾಗ ‘ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದಿದ್ದೀನಿ, ಟಿಕೆಟ್ ಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ರಮೇಶ್ ಕತ್ತಿ ತಿಳಿಸಿರುವುದಾಗಿ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ