ಮಳೆಯಿಂದ ತತ್ತರಿಸಿರುವ ಜನರಿಗೆ ನೆರವಾಗುವ ಬದ್ಧತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲ: ಎಮ್ ಬಿ ಪಾಟೀಲ್, ಕಾಂಗ್ರೆಸ್ ಶಾಸಕ
. ಪ್ರವಾಹ ಪೀಡಿತ ಜನರಿಗೆ ಗಂಜಿಕೇಂದ್ರವೊಂದು ಬಿಟ್ಟರೆ ಬೇರೇನೂ ಸಿಕ್ಕಿಲ್ಲ, ಕಳೆದ ವರ್ಷದ ನೆರೆ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಪಾಟೀಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
Bengaluru: ಭೀಕರ ಮಳೆಯಿಂದ ತತ್ತರಿಸಿರುವ ಭಾಗಗಳ ಜನರ ನೆರವಿಗೆ ಧಾವಿಸಿ ಅವಶ್ಯವಿರುವ ಅನುಕೂಲತೆಗಳನ್ನು ಮಾಡಿಕೊಡುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಎಮ್ ಬಿ ಪಾಟೀಲ (MB Patil) ಮಂಗಳವಾರ ಬೆಂಗಳೂರಲ್ಲಿ ಹೇಳಿದರು. ಆರ್ ಅಶೋಕ (R Ashoka) ಅವರನ್ನು ಬಿಟ್ಟರೆ ಬೇರೆ ಯಾವುದೇ ಜಿಲ್ಲಾ ಉಸ್ತುವಾರಿ (district in charge) ಸಚಿವ ತನ್ನ ಜಿಲ್ಲೆಯ ಸ್ಥಿತಿಗತಿ ಅರಿಯುವ, ಭೇಟಿ ನೀಡಿ ಅಧಿಕಾರಿ ಮತ್ತು ಜನರೊಂದಿಗೆ ಮಾತಾಡುವ ಉಸಾಬರಿಗೆ ಹೋಗಿಲ್ಲ. ಪ್ರವಾಹ ಪೀಡಿತ ಜನರಿಗೆ ಗಂಜಿಕೇಂದ್ರವೊಂದು ಬಿಟ್ಟರೆ ಬೇರೇನೂ ಸಿಕ್ಕಿಲ್ಲ, ಕಳೆದ ವರ್ಷದ ನೆರೆ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಪಾಟೀಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Viral Video: ಮದುವೆ ದಿನ ವಿಭಿನ್ನ ಒಪ್ಪಂದಕ್ಕೆ ಸಹಿ ಹಾಕಿದ ನವಜೋಡಿ, ವಿಧಿಸಲಾದ ಷರತ್ತುಗಳು ಏನೇನು ಗೊತ್ತಾ?