ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿರುವ ರಮ್ಯಾರಿಂದ ಸೈಬರ್ ಪೊಲೀಸ್​ಗೆ ದೂರು ನೀಡುವ ನಿರ್ಧಾರ

Updated on: Jul 28, 2025 | 11:58 AM

ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ರಮ್ಯಾ ಹೇಳಿದ್ದಕ್ಕೆ ದರ್ಶನ್ ಅಭಿಮಾನಿಗಳಿಗೆ ಕೋಪ ಬಂದಿದೆ. ಓಕೆ ಕೋಪ ಬಂದರೆ ಅವರು ಸೌಜನ್ಯತೆಯಿಂದ ಮೇಡಂ, ಪ್ರಕರಣ ನ್ಯಾಯಾಲಯದಲ್ಲಿದೆ, ನೀವು ರೇಣುಕಾಸ್ವಾಮಿ ಪರ ವಹಿಸಿಕೊಂಡು ದಯವಿಟ್ಟು ಮಾತಾಡಬೇಡಿ ಅಂತ ಹೇಳಿದ್ದರೆ ಸಾಕಿತ್ತು. ವೈಯಕ್ತಿಕ ಬದುಕಿನ ಬಗ್ಗೆ ಇವರೆಲ್ಲ ಕಾಮೆಂಟ ಮಾಡುತ್ತ ಅಶ್ಲೀಲ ಮೇಸೇಜ್​ಗಳನ್ನು ಕಳಿಸಿದ್ದು ಸಹಜವಾಗೇ ರಮ್ಯಾ ಸಿಟ್ಟಿಗೇಳುವಂತೆ ಮಾಡಿದೆ.

ಬೆಂಗಳೂರು, ಜುಲೈ 28: ಚಿತ್ರನಟ ದರ್ಶನ್ (actor Darshan Toogudeepa ) ಅಭಿಮಾನಿಗಳ ವಿರುದ್ಧ ನಟಿ ಮತ್ತು ರಾಜಕಾರಣಿ ರಮ್ಯಾ ರೊಚ್ಚಿಗೆದ್ದಿದ್ದಾರೆ. ಮೊದಲು ತಮ್ಮ ಎಕ್ಸ್ ಹ್ಯಾಂಡಲ್​​ನಲ್ಲಿ ಆಕ್ರೋಶ ಹೊರಹಾಕಿದ ರಮ್ಯಾ ಈಗ ದೂರು ನೀಡುವ ನಿರ್ಧಾರಕ್ಕೂ ಬಂದಿದ್ದಾರೆ. ತಮ್ಮ ವಕೀಲರ ಜೊತೆ ಚರ್ಚೆ ನಡೆಸಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ಸಲ್ಲಿಸುವುದಾಗಿ ಟಿವಿ9 ಸಿನಿಮಾ ವರದಿಗಾರನೊಂದಿಗೆ ಮಾತಾಡಿರುವ ರಮ್ಯಾ ಹೇಳಿದ್ದಾರೆ. ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಕೊಲೆಯಾದ ರೇಣುಕಾಸ್ವಾಮಿ ಕಳಿಸುತ್ತಿದ್ದ ಟೆಕ್ಸ್ಟ್​ ಸಂದೇಶಗಳು ಮತ್ತು ದರ್ಶನ್ ಅಭಿಮಾನಿಗಳು ತನಗೆ ಕಳಿಸುತ್ತಿರುವ ಸಂದೇಶಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಟ್ವೀಟ್ ಮಾಡಿದ್ದ ರಮ್ಯಾ, ಮಹಿಳೆಯರ ಬಗ್ಗೆ ಇಂಥ ಕೀಳು ಮನಸ್ಥಿತಿ ಹೊಂದಿರುವುದರಿಂದಲೇ ಅವರ ಮೇಲೆ, ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದರು.

ಇದನ್ನೂ ಓದಿ:  ವಿಜಯಲಕ್ಷ್ಮಿ ದರ್ಶನ್ ನನ್ನ ಗೆಳತಿ, ಹಾಗೆಂದು ನಾನು ಸುಮ್ಮನಿರಲ್ಲ: ರಮ್ಯಾ

ವಿಡಿಯೋ ಸುದ್ದಿಗಳಿಗಾಗೊ ಕ್ಲಿಕ್ ಮಾಡಿ