ಮುಳುಗು ತಜ್ಞರ ಯಶಸ್ವೀ ಕಾರ್ಯಾಚರಣೆ, ಮಾಲವಿ ಜಲಾಶಯದಿಂದ ನೀರು ಸೋರಿಕೆ ಬಂದ್

ಎರಡು ಟಿಎಂಸಿ ಸಾಮರ್ಥ್ಯದ ಮಾಲವಿ ಡ್ಯಾಂನಿಂದ ನೀರು ಸೋರಿಕೆಯನ್ನು ತಡೆಗಟ್ಟಲು ಮುಳುಗು ತಜ್ಞರಿಂದ ಯಶಸ್ವೀ ಕಾರ್ಯಾಚರಣೆ ನಡೆಸಿದ ಬಗ್ಗೆ ಹಗರಿಬೊಮ್ಮನಹಳ್ಳಿಯ ಬಿಜೆಪಿ ಶಾಸಕ ನೇಮಿರಾಜ್ ನಾಯ್ಕ್ ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದ್ದಾರೆ. ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಗಿರುವ ಪ್ರಮಾದ ಎಂದು ಅವರು ಹೇಳುತ್ತಾರೆ.

ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಜಲಾಶಯಗಳ ನಸೀಬು ಸರಿ ಇದ್ದಂತಿಲ್ಲ. ಮೊದಲಿಗೆ ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿಯಿರುವ ಟಿಬಿ ಡ್ಯಾಂನ ಕ್ರಸ್ಟ್ ಗೇಟ್​ವೊಂದು ಕೊಚ್ಚಿಕೊಂಡು ಹೋಗಿದ್ದರಿಂದ ಮತ್ತೊಂದು ಗೇಟನ್ನು ಅಳವಡಿಸಲಾಯಿತು. ಈಗ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿರುವ ಮಾಲವಿ ಡ್ಯಾಂನಿಂದ ನೀರು ಸೋರಿಕೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುವುದು ಶುರುವಾಗಿತ್ತು. ಆದರೆ ಮುಳುಗು ತಜ್ಞರ ನೆರವಿನಿಂದ ಸೋರಿಕೆಯನ್ನು ತಡೆಗಟ್ಟಲಾಗಿದೆ ಎಂದು ನಮ್ಮ ವರದಿಗಾರ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಟಿಬಿ ಡ್ಯಾಂ ಗೇಟ್​ ದುರಸ್ತಿ ಕಾರ್ಯ ಯಶಸ್ವಿ: ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್