ಡಾ ಸಿಎನ್ ಮಂಜುನಾಥ್ ಸ್ಪರ್ಧೆ ಡಿಕೆ ಸಹೋದರರ ಶಿಬಿರದಲ್ಲಿ ಆತಂಕ ಮೂಡಿಸಿದೆಯೇ? ಶಿವಕುಮಾರ್ ಪ್ರತಿಕ್ರಿಯೆ ಅದನ್ನು ಸೂಚಿಸುತ್ತದೆ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2024 | 10:20 AM

ಡಾ ಮಂಜುನಾಥ್ ಹೇಳಿರುವುದನ್ನು ಶಿವಕುಮಾರ್ ಗಮನಕ್ಕೆ ತಂದಾಗ ಉತ್ತರಿಸಲು ಸಮಯ ತೆಗೆದುಕೊಂಡರೂ ಪ್ರಶ್ನೆಯನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತಾಡಿದರು. ಚುನಾವಣೆ ಡೇಟ್ಸ್ ಪ್ರಕಟವಾದ ಬಳಿಕ ಅದನ್ನೆಲ್ಲ ಮಾತಾಡೋಣ, ಈಗ ನಮಗೆ ವೋಟು ನೀಡಿ ಆಧಿಕಾರ ನೀಡಿರುವ ಜನರ ಋಣ ತೀರಿಸಬೇಕಿದೆ, ಅದು ನಮಗೆ ಬಹಳ ಪ್ರಾಮುಖ್ಯವಾದದ್ದು, ಉಳಿದ ವಿಷಯಗಳನ್ನು ಆಮೇಲೆ ಮಾತಾಡೋಣ ಎಂದರು.

ರಾಮನಗರ: ಲೋಕಸಭಾ ಚುನಾವನೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bengaluru Rural constituency) ಬಿಜೆಪಿyu ಪ್ರಖ್ಯಾತ ವೈದ್ಯ ಡಾ ಸಿಎನ್ ಮಂಜುನಾಥ್ (Dr CN Manjunath) ಅವರನ್ನು ಫೀಲ್ಡಿಗಳಿಸಿರುವುದರಿಂದ ಡಿಕೆ ಸಹೋದರರ (DK brothers) ಕ್ಯಾಂಪ್ ನಲ್ಲಿ ಪ್ಯಾನಿಕ್ ಸೃಷ್ಟಿಯಾಗಿದೆಯೇ? ನಿನ್ನೆ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪ್ರಶ್ನೆಯೊಂದಕ್ಕೆ ನೀಡಿದ ಪ್ರತಿಕ್ರಿಯೆ ಅಂಥ ಅನುಮಾನ ಮೂಡಿಸುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯಲಿರುವುದು ಧರ್ಮಯುದ್ಧ, ಸತ್ಯವನ್ನು ಗೆಲ್ಲಿಸಿ ಅಂತ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಮತದಾರರಿಗೆ ಅಪೀಲ್ ಮಾಡುತ್ತಿರುವುದನ್ನು ಶಿವಕುಮಾರ್ ಗಮನಕ್ಕೆ ತಂದಾಗ ಅವರು ಉತ್ತರಿಸಲು ಸಮಯ ತೆಗೆದುಕೊಂಡರೂ ಪ್ರಶ್ನೆಯನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತಾಡಿದರು. ಚುನಾವಣೆ ಡೇಟ್ಸ್ ಪ್ರಕಟವಾದ ಬಳಿಕ ಅದನ್ನೆಲ್ಲ ಮಾತಾಡೋಣ, ಈಗ ನಮಗೆ ವೋಟು ನೀಡಿ ಆಧಿಕಾರ ನೀಡಿರುವ ಜನರ ಋಣ ತೀರಿಸಬೇಕಿದೆ, ಅದು ನಮಗೆ ಬಹಳ ಪ್ರಾಮುಖ್ಯವಾದದ್ದು, ಉಳಿದ ವಿಷಯಗಳನ್ನು ಆಮೇಲೆ ಮಾತಾಡೋಣ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗೊತ್ತಿದೆ: ಡಿಕೆ ಶಿವಕುಮಾರ್ ಗಂಭೀರ ಆರೋಪ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.