AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗೊತ್ತಿದೆ: ಡಿಕೆ ಶಿವಕುಮಾರ್ ಗಂಭೀರ ಆರೋಪ

ರಾಜ್ಯಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ 5ನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಪಾಳೆಯಕ್ಕೆ ತಲೆಬಿಸಿ ಉಂಟುಮಾಡಿದೆ. ಅಡ್ಡ ಮತದಾನದ ಭೀತಿಯೂ ಎದುರಾಗಿದೆ. ಆ ಮೂಲಕ ಕಳೆದ ಎರಡೂ ರಾಜ್ಯಸಭಾ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ ಎಂದಿದ್ದಾರೆ.

ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗೊತ್ತಿದೆ: ಡಿಕೆ ಶಿವಕುಮಾರ್ ಗಂಭೀರ ಆರೋಪ
ರಾಜ್ಯಸಭೆ ಚುನಾವಣೆ: ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ ಎಂದ ಡಿಕೆ ಶಿವಕುಮಾರ್
Anil Kalkere
| Edited By: |

Updated on:Feb 19, 2024 | 3:56 PM

Share

ಬೆಂಗಳೂರು, ಫೆ.19: ರಾಜ್ಯಸಭೆ ಚುನಾವಣೆಗೆ (Rajya Sabha Election) ಬಿಜೆಪಿ, ಜೆಡಿಎಸ್ ಮೈತ್ರಿ 5ನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ (Congress) ಪಾಳೆಯಕ್ಕೆ ತಲೆಬಿಸಿ ಉಂಟುಮಾಡಿದೆ. ಅಡ್ಡ ಮತದಾನದ ಭೀತಿಯೂ ಎದುರಾಗಿದೆ. ಆ ಮೂಲಕ ಕಳೆದ ಎರಡೂ ರಾಜ್ಯಸಭಾ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮುಂದಾಗಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್ (DK Shivakumar), ಕುಮಾರಸ್ವಾಮಿ ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಗೊತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಏನೇನೋ ಹೇಳಿದ್ದಾರೆ. ಕುಮಾರಸ್ವಾಮಿ ಯಾಱರಿಗೆ ಕಾಲ್ ಮಾಡುತ್ತಿದ್ದಾರೆ, ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ನನಗೆ ಎಲ್ಲರೂ ಹೇಳುತ್ತಿದ್ದಾರೆ. ಬಿಜೆಪಿ ಸ್ಟ್ರಾಟಜಿ ಏನು ಎಂದು ಎಲ್ಲವೂ ಗೊತ್ತಾಗಿದೆ ಎಂದರು. ಅಡ್ಡ ಮತದಾನಕ್ಕೆ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ಅರ್ಜಿ ಹಾಕ್ತಾರಾ ಎಂದು ಹೇಳುವ ಮೂಲಕ ಅಡ್ಡ ಮತದಾನಕ್ಕೇ ರಾಜ್ಯಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹಾಕಿದೆ ಎಂದರು. ಅಲ್ಲದೆ, ಏನೇನು ನಡೆಯುತ್ತಿದೆ ಅನ್ನೋದು ನಮಗೆಲ್ಲವೂ ಗೊತ್ತಿದೆ ಎಂದರು.

ಇದನ್ನೂ ಓದಿ: ಹಿಂದಿನ ಎರಡೂ ರಾಜ್ಯಸಭೆ ಚುನಾವಣೆಗಳಲ್ಲಿ ನಾವು ಪೆಟ್ಟು ತಿಂದಿದ್ದೇವೆ: ಲೆಕ್ಕ ಚುಕ್ತಾ ಮಾತುಗಳನ್ನಾಡಿದ ಎಚ್​ಡಿಕೆ

ಫೆಬ್ರವರಿ 27 ಕ್ಕೆ ನೋಡೋಣ ಎಂದ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾತಾಡಿದ್ದಾರೆ, ಕಾಲ್ ಮಾಡಿದ್ದಾರೆ, ಧಮ್ಕಿ ಹಾಕಿದ್ದಾರೆ. ಏನೇನು ನಡೆಯುತ್ತಿದೆ ಅನ್ನೋದು ನಮಗೆ ಗೊತ್ತು. ನಮಗೆ ಯಾರ ಅಗತ್ಯ ಇಲ್ಲ. ನಾವು 136 ಸೀಟು ಗೆದ್ದಿದ್ದೇವೆ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇದು ಅಲ್ಲದೇ ಇನ್ನೂ ಯಾರ್ಯಾರೋ‌ ಇದ್ದಾರೆ. ಎಲ್ಲವನ್ನೂ ತೋರಿಸಿ ಆಮೇಲೆ ಮಾತಾಡುತ್ತೇನೆ ಎಂದರು.

ತಮ್ಮ ಜೊತೆ ಬಿಜೆಪಿ ನಾಯಕ ಎಸ್.ಟಿ ಸೋಮಶೇಖರ್ ಹೆಚ್ಚು ಓಡಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಅವರು ಮೂರು ವರ್ಷ ಆ ಕಡೆ ಹೋಗಿದ್ದರು ಅಷ್ಟೇ. 35 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ್ದೀವಿ ನಡೀರಿ ಎಂದರು.

ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾವು ಕುವೆಂಪು ಅವರ ಆಚಾರ ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಭಾರತೀಯ ಜನನಿಯ ತನುಜಾತೆ, ಜಯಹೇ ಕರ್ನಾಟ ಮಾತೇ ಅಂತ ಹೇಳಿ, ಸರ್ವಜನಾಂಗದ ಶಾಂತಿಯ ತೋಟ ಅಂತೇಳಿ ನಾವೇ ಪ್ರತಿದಿನ ಕುವೆಂಪು ಅವರನ್ನ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿರುವುದು ಎಂದರು.

ಬಿಜೆಪಿಯವರಿಗೆ ಮಾಡಲು ‌‌ಕೆಲಸ ಇಲ್ಲ. ಬರಿ ತಪ್ಪು ಕಂಡುಹಿಡಿಯುದನ್ನೇ ಯೋಚನೆ ಮಾಡುತ್ತಿರುತ್ತಾರೆ. ಬದುಕಿನ ಬಗ್ಗೆ ಯೋಚನೆ ಇಲ್ಲ, ಬರೀ ಭಾವನೆ ಬಗ್ಗೆ ಯೋಚನೆ ಮಾಡುತ್ತಾರೆ. ನಾವು ಬದುಕಿನ ಬಗ್ಗೆ ಯೋಚನೆ ಮಾಡುತ್ತೇವೆ, ಅವರ ಸಮಾಜವನ್ನ ಕೆಡಿಸುವ ಕೆಲಸ ಮಾಡುತ್ತಾರೆ. ಕೈಮುಗಿದು ಬರುವುದಲ್ಲಿ‌ ತಪ್ಪೇನು ಇಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Mon, 19 February 24