ಹಿಂದಿನ ಎರಡೂ ರಾಜ್ಯಸಭೆ ಚುನಾವಣೆಗಳಲ್ಲಿ ನಾವು ಪೆಟ್ಟು ತಿಂದಿದ್ದೇವೆ: ಲೆಕ್ಕ ಚುಕ್ತಾ ಮಾತುಗಳನ್ನಾಡಿದ ಎಚ್​ಡಿಕೆ

ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಐದನೇ ಅಭ್ಯರ್ಥಿ ಕಣಕ್ಕಿಳಿದ್ದಿದ್ದು, ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಸಂಖ್ಯಾಬಲ ಕಡಿಮೆ ಇದ್ದರೂ ಸಹ ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್​​ನ ಕುಪೇಂದ್ರ ರೆಡ್ಡಿ ಅವರನ್ನು ಕುಮಾರಸ್ವಾಮಿ ಕಣಕ್ಕಿಳಿಸಿದ್ದಾರೆ. ಈ ಮೂಲಕ ಕಳೆದ ಎರಡೂ ರಾಜ್ಯಸಭಾ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಎಚ್​ಡಿಕೆ ಬಿಜೆಪಿ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಹಿಂದಿನ ಎರಡೂ ರಾಜ್ಯಸಭೆ ಚುನಾವಣೆಗಳಲ್ಲಿ ನಾವು ಪೆಟ್ಟು ತಿಂದಿದ್ದೇವೆ: ಲೆಕ್ಕ ಚುಕ್ತಾ ಮಾತುಗಳನ್ನಾಡಿದ ಎಚ್​ಡಿಕೆ
ಕುಮಾರಸ್ವಾಮಿ, ಸಿದ್ದರಾಮಯ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Feb 16, 2024 | 6:03 PM

ಬೆಂಗಳೂರು, (ಫೆಬ್ರವರಿ 16): ಕಳೆದ ಎರಡೂ ರಾಜ್ಯಸಭಾ(Rajya Sabha Election) ಸೋಲಿನ ಸೇಡನ್ನು ಕಾಂಗ್ರೆಸ್ ವಿರುದ್ಧ ತೀಸಿಕೊಳ್ಳಲು ಎಚ್​ಡಿ ಕುಮಾರಸ್ವಾಮಿ ಸ್ಕೆಚ್ ಹಾಕಿದ್ದಾರೆ. ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್​​ ನಾಯಕ ಎಚ್​ಡಿ ಕುಮಾರಸ್ವಾಮಿ (HD Kumaraswamy) ಮಹತ್ವದ ಸಭೆ ನಡೆಸಿದ್ದು, ಎರಡೂ ಲೆಕ್ಕ ಚುಕ್ತಾ ಮಾಡಲು ತಂತ್ರ ರೂಪಿಸಿದ್ದಾರೆ. ಇನ್ನು ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಹಿಂದಿನ ಎರಡೂ ರಾಜ್ಯಸಭೆ ಚುನಾವಣೆಗಳಲ್ಲಿ  ನಾವು ಪೆಟ್ಟು ತಿಂದಿದ್ದೇವೆ. ಜೆಡಿಎಸ್​ನ 7 ಸದಸ್ಯರಿಂದ ವಿರುದ್ಧ ಮತಹಾಕಿಸಿದ್ರು, ನಾವು ನಿರೀಕ್ಷಿಸಿರಲಿಲ್ಲ. ಕಳೆದ ವರ್ಷವೂ ಕುಪೇಂದ್ರರೆಡ್ಡಿ ವಿರುದ್ಧ ಇಬ್ಬರು ಅಡ್ಡ ಮತದಾನ ಮಾಡಿದ್ರು. ಎರಡೂ ಲೆಕ್ಕ ಚುಕ್ತಾ ಮಾಡುವುದು ಭಗವಂತನಿಗೆ ಬಿಟ್ಟಿದ್ದು ಎಂದಿದ್ದಾರೆ.

ಕುಪೇಂದ್ರರೆಡ್ಡಿ ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ, ಫಲಾಫಲ ದೇವರಿಗೆ ಬಿಟ್ಟಿದ್ದು. ಜೆಡಿಎಸ್​ನ ಯಾರೂ ಅಡ್ಡ ಮತದಾನ ಮಾಡಲ್ಲ. ಕಾಂಗ್ರೆಸ್​ನವರು ತಮ್ಮ ಶಾಸಕರ ರಕ್ಷಣೆಗೆ ರೆಸಾರ್ಟ್​​ಗೆ ಹೋಗಲೇಬೇಕಲ್ಲ. ಎಸ್​.ಟಿ.ಸೋಮಶೇಖರ್ ನಮ್ಮ ಅಭ್ಯರ್ಥಿಗೆ ಮತ ಹಾಕುತ್ತಾರೆ. ಇವತ್ತು ಪ್ರತಿಭಟನೆಗೆ ಬರದಿರುವುದು ಬೇರೆ, ಮತ ಹಾಕುವುದು ಬೇರೆ ಎಂದು ಕಾಂಗ್ರೆಸ್​ನ ಲೆಕ್ಕ ಚುಕ್ತಾ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ: 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ತಾರಾ ಕುಮಾರಸ್ವಾಮಿ?

ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಹಾಕಲಾಗಿದೆ. ಎರಡೂ ಪಕ್ಷದವರೂ ಇವತ್ತು ಚರ್ಚೆ ಮಾಡಿದ್ದೇವೆ. ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಕುಪೇಂದ್ರ ರೆಡ್ಡಿ ಪರ ಆತ್ಮಸಾಕ್ಷಿಯ ಮತ ಹಾಕಲು ನಾವು ಮನವಿ ಮಾಡಿದ್ದೇವೆ. ಯಾವುದೇ ಪಕ್ಷ ಇರಲಿ ಆತ್ಮಸಾಕ್ಷಿಯ ಮತ ಹಾಕಲು ಮನವಿ ಮಾಡಲಾಗಿದೆ. ನಮ್ಮಿಂದ ಈ ಸಲ ಯಾರೂ ಅಡ್ಡ ಮತದಾನ ಮಾಡಲ್ಲ. ಫಲಾಫಲ ದೇವರಿಗೆ ಬಿಟ್ಟಿದ್ದು. ಕಾಂಗ್ರೆಸ್ ನವರು ರೆಸಾರ್ಟ್ ಗೆ ಹೋಗಲೇಬೇಕಲ್ಲ. ಅವರ ಶಾಸಕರ ರಕ್ಷಣೆ ಮಾಡಿಕೊಳ್ಳಲು ರೆಸಾರ್ಟ್ ಗೆ ಹೋಗಲೇಬೇಕು ಎಂದು ಹೇಳಿದರು.

ಖಾಲಿ ಇರುವ ನಾಲ್ಕು ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಜೆಡಿಎಸ್​​ನ ಕುಪೇಂದ್ರ ರೆಡ್ಡಿ (Kupendra Reddy) ಅವರು 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯ ರಾಜಕಾರಣದಲ್ಲಿ ಮತ ಲೆಕ್ಕಾಚಾರ ಶುರುವಾಗಿದೆ. ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹಲವು ತಂತ್ರಗಳೊಂದಿಗೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಇದರೊಂದಿಗೆ ಎಂಟು ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆಡಳಿತರೂಢ ಕಾಂಗ್ರೆಸ್​​ಗೆ ಅಡ್ಡಮತದಾನದ ಭೀತಿ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ