ರಾಮನಗರಕ್ಕೆ ಡಿಕೆಶಿ ಕೊಡುಗೆ: ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ ಶಿವಕುಮಾರ್ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧ ಎಂದರು!

|

Updated on: Apr 05, 2024 | 7:15 PM

ವೇದಿಕೆ ಯಾವುದೇ ಆಗಿರಲಿ ಎಂದ ಶಿವಕುಮಾರ್ ಟಿವಿ ಮಾಧ್ಯಮಗಳು ತಮ್ಮ ಚ್ಯಾನೆಲ್ ನಲ್ಲಿ ಚರ್ಚೆ ಏರ್ಪಡಿಸಿದರೂ ತಾನು ಸಿದ್ಧ ಮತ್ತು ಯಾವುದೇ ಪ್ರದೇಶದಲ್ಲಿ ಬಹಿರಂಗ ಚರ್ಚೆಗೂ ತಾನು ಸಿದ್ಧ ಎಂದರು. ಆದರೆ, ವೇದಿಕೆ ಸಿದ್ಧ ಮಾಡುವ ಮೊದಲು ತನಗೆ ಒಂದೆರಡು ದಿನಗಳ ಅವಕಾಶ ನೀಡಬೇಕು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ರಾಜ್ಯ ಒಕ್ಕಲಿಗ ಸಮುದಾಯದ ಎರಡು ಪ್ರತಿಷ್ಠಿತ ಕುಟುಂಬಗಳ ನಡುವಿನ ರಾಜಕೀಯ ಸಮರ ಕುತೂಹಲ ಕೆರಳಿಸುತ್ತಿದೆ. ಹೆಚ್ ಡಿ ದೇವೇಗೌಡ (HD Devegowda) ಮತ್ತು ಡಿಕೆ ಶಿವಕುಮಾರ್ (DK Shivakumar) ಕುಟುಂಬಗಳು 2018ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದ ನಂತರ ಎಷ್ಟು ಆತ್ಮೀಯವಾಗಿದ್ದವು ಅಂತ ಕನ್ನಡಿಗರೆಲ್ಲ ನೋಡಿದ್ದಾರೆ. ಆದರೆ ಈಗಿನ ಲೋಕಸಭ ಚುನಾವಣೆ (Lok Sabha polls 2024) ಸಮಯದಲ್ಲಿ ಅದಕ್ಕೆ ತದ್ವಿರುದ್ಧವಾದ ಸ್ಥಿತಿ ಇದೆ. ಮೊನ್ನೆ ಕುಮಾರಸ್ವಾಮಿಯವರು ರಾಮನಗರಕ್ಕೆ ಶಿವಕುಮಾರ್ ಕೊಡುಗೆ ಏನು? ಅವರೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ ಅಂತ ಸವಾಲೆಸೆದಿದ್ದರು. ಇಂದು ಬೆಂಗಳೂರಲ್ಲಿ ಶಿವಕುಮಾರ್; ಜೆಡಿಎಸ್ ರಾಜ್ಯಾಧ್ಯಕ್ಷನ ಸವಾಲು ಸ್ವೀಕರಿಸಿದರು. ವೇದಿಕೆ ಯಾವುದೇ ಆಗಿರಲಿ ಎಂದ ಶಿವಕುಮಾರ್ ಟಿವಿ ಮಾಧ್ಯಮಗಳು ತಮ್ಮ ಚ್ಯಾನೆಲ್ ನಲ್ಲಿ ಚರ್ಚೆ ಏರ್ಪಡಿಸಿದರೂ ತಾನು ಸಿದ್ಧ ಮತ್ತು ಯಾವುದೇ ಪ್ರದೇಶದಲ್ಲಿ ಬಹಿರಂಗ ಚರ್ಚೆಗೂ ತಾನು ಸಿದ್ಧ ಎಂದರು. ಆದರೆ, ವೇದಿಕೆ ಸಿದ್ಧ ಮಾಡುವ ಮೊದಲು ತನಗೆ ಒಂದೆರಡು ದಿನಗಳ ಅವಕಾಶ ನೀಡಬೇಕು ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಾಜ್ಯದಲ್ಲಿ ಕೇವಲ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಸಿಗ್ತಿದೆ ಅಂದಾಗ ಡಿಕೆ ಶಿವಕುಮಾರ್ ರಿಂದ ಅಸಮಂಜಸ ಸ್ಪಷ್ಟನೆ!