ಕಲಬುರಗಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದಾಗ ಎದ್ದು ನಿಲ್ಲುವ ಸೌಜನ್ಯತೆ ತೋರದ ಡಿಕೆ ಶಿವಕುಮಾರ್!

|

Updated on: Aug 05, 2023 | 4:55 PM

ಎದ್ದು ನಿಲ್ಲೋದು ಮುಖ್ಯಮಂತ್ರಿ ಸ್ಥಾನಕ್ಕೆ ಸಲ್ಲಿಸುವ ಗೌರವ, ಶಿವಕುಮಾರ್ ಅದು ಗೊತ್ತಿಲ್ಲವೇ ಅಥವಾ ಗೊತ್ತಿದ್ದೂ ಗತ್ತು ಪ್ರದರ್ಶಿಸಲು ಹಾಗೆ ಮಾಡುತ್ತಾರೆಯೇ ಎಂಬ ಸಂದೇಹ ಜನರಲ್ಲಿ ಮೂಡದಿರದು.

ಕಲಬುರಗಿ: ಇದು ಮೊದಲ ಸಲವೇನಲ್ಲ, ಹಲವಾರು ಬಾರಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ಹೈಕಮಾಂಡ್ ಎಷ್ಟೇ ತೇಪೆ ಹಾಕಿದರೂ ಬಿರುಕು ಮುಚ್ಚಿಕೊಳ್ಳುತ್ತಿಲ್ಲ. ಸಾರ್ವಜನಿಕವಾಗಿ ಅವರು ಚೆನ್ನಾಗಿ ಬೆರೆಯುತ್ತಾರೆ, ಮುಗುಳ್ನಗುತ್ತಾ ಮಾತಾಡುತ್ತಾರೆ, ಕೈ ಕುಲುಕುತ್ತಾರೆ-ನೋಡಿದವರಿಗೆ ವೈಮನಸ್ಸು ತಿಳಿಯಾಗಿದೆ ಅಂತ ಅನಿಸಿಬಿಡುತ್ತದೆ. ಅದರೆ ಸಾರ್ವಜನಿಕವಾಗೇ ಇಂಥ ಸಂಗತಿಗಳೂ ಘಟಿಸುತ್ತಿವೆ. ಕಲಬುರಗಿಯಲ್ಲಿ ಇಂದು ಗೃಹ ಜ್ಯೋತಿ ಯೋಜೆನೆಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಏನು ನಡೆಯಿತು ಅಂತ ನೀವಿಲ್ಲಿ ನೋಡಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವೇದಿಕೆ ಮೇಲೆ ನಡೆದು ಬರುತ್ತಿದ್ದಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿದಂತೆ ಅಲ್ಲಿದ್ದವರೆಲ್ಲ ಎದ್ದು ನಿಲ್ಲುತ್ತಾರೆ-ಶಿವಕುಮಾರ್ ಒಬ್ಬರನ್ನು ಬಿಟ್ಟು! ಎದ್ದು ನಿಲ್ಲೋದು ಮುಖ್ಯಮಂತ್ರಿ ಸ್ಥಾನಕ್ಕೆ ಸಲ್ಲಿಸುವ ಗೌರವ, ಶಿವಕುಮಾರ್ ಅದು ಗೊತ್ತಿಲ್ಲವೇ ಅಥವಾ ಗೊತ್ತಿದ್ದೂ ಗತ್ತು ಪ್ರದರ್ಶಿಸಲು ಹಾಗೆ ಮಾಡುತ್ತಾರೆಯೇ ಎಂಬ ಸಂದೇಹ ಜನರಲ್ಲಿ ಮೂಡದಿರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ