ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್

Updated on: Apr 27, 2025 | 5:06 PM

ಡಾ. ರಾಜ್‍ಕುಮಾರ್ ಅವರ ಜನ್ಮದಿನಾಚರಣೆಯಂದು ಬೆಂಗಳೂರಿನಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗವಹಿಸಿ ಕನ್ನಡ ಚಿತ್ರರಂಗದ ಪ್ರಗತಿಯನ್ನು ಶ್ಲಾಘಿಸಿದರು. ರಾಜ್ ಕುಮಾರ್ ಕುಟುಂಬದ ಕೊಡುಗೆಯನ್ನು ಸ್ಮರಿಸಿದರು.ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬೆಂಗಳೂರು, ಏಪ್ರಿಲ್​ 27: ಬೆಂಗಳೂರು ಆರೋಗ್ಯ ಶಿಬಿರ, ಡಿಕೆ ಶಿವಕುಮಾರ್, ರಾಜ್ ಕುಮಾರ್ ಕುಟುಂಬ: ವರನಟ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಫಿಲ್ಮ್ ಚೇಂಬರ್​ನಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಟ ಸಾಧುಕೋಕಿಲಾ ಸೇರಿದಂತೆ ಹಲವರು ಇದ್ದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕನ್ನಡ ಇಂಡಸ್ಟ್ರಿ ಒಳ್ಳೆಯ ಸ್ಥಿತಿಯಲ್ಲಿದೆ. ಅದನ್ನು ಉಳಿಸ್ಕೊಂಡು ಹೋಗಿ. ರಾಜ್ಯದ ನಾಡು – ನುಡಿ ವಿಚಾರದಲ್ಲಿ ರಾಜ್ ಕುಟುಂಬದ ಕೊಡುಗೆ ದೊಡ್ಡದು. ರಾಜ್​ಕುಮಾರ್​ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.