ಸಿಎಂ ಗಂಗಾ ನಿವಾಸ ನವೀಕರಣಕ್ಕೆ 100 ಕೋಟಿ ವೆಚ್ಚ ಆರೋಪ: ವಿಜಯೇಂದ್ರ ಆರೋಪಕ್ಕೆ ಸಿಎಂ ಕೌಂಟರ್!
ಗಂಗಾ ಹೌಸ್ ನವೀಕರಣಕ್ಕೆ 100 ಕೋಟಿ ರೂ. ಖರ್ಚಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲೇ ತನಿಖಾ ಸಮಿತಿ ರಚಿಸಿ, ಸತ್ಯಾಂಶ ಹೊರತರಲು ಸಿದ್ಧ ಎಂದು ಸಿಎಂ ಸವಾಲು ಹಾಕಿದ್ದಾರೆ.
ಚಿತ್ರದುರ್ಗ, ನವೆಂಬರ್ 21: ತಮ್ಮ ಗೃಹ ಗಂಗಾ ಹೌಸ್ ನವೀಕರಣಕ್ಕೆ 100 ಕೋಟಿ ರೂಪಾಯಿ ಖರ್ಚಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿ.ವೈ. ವಿಜಯೇಂದ್ರ ಅವರಿಗೆ ತನಿಖಾ ಸವಾಲು ಹಾಕಿದ್ದಾರೆ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿಯೇ ತನಿಖಾ ಸಮಿತಿಯನ್ನು ರಚಿಸಲು ಸಿದ್ಧ ಎಂದು ಸಿಎಂ ಹೇಳಿದ್ದಾರೆ.
“ನನ್ನ ಗೃಹಕ್ಕೆ ನೂರು ಕೋಟಿ ಖರ್ಚು ಮಾಡಿಬಿಟ್ಟಿದ್ದಾರೆ ಎಂದು ವಿಜಯೇಂದ್ರ ಅವರು ಹೇಳಿದರು” ಎಂದು ಉಲ್ಲೇಖಿಸಿದ ಡಿಕೆಶಿ, “ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲೇ ಒಂದು ತನಿಖಾ ತಂಡ ಮಾಡ್ತೀನಿ. ನಮ್ಮ ಪಾರ್ಟಿಯವರು ಒಬ್ಬರು ಬೇಡ. ಜನತಾದಳದವರು, ಬಿಜೆಪಿ ಅವರು, ಎನ್‌ಡಿಎನವರು, ಇನ್ನು ಬೇಕಾದ್ರೆ ಇಂಡಿಪೆಂಡೆಂಟ್ ಅವರನ್ನ ಯಾರನ್ನಾದ್ರೂ ಸೇರಿಸಿಕೊಳ್ಳಿ. ಸೇರಿಸಿಕೊಂಡು ಒಂದು ಐದು ಜನರದ್ದು ಒಂದು ಕಮಿಟಿ ಮಾಡ್ತೀನಿ. ಅವರೇ ಎನ್‌ಕ್ವೈರಿ ಮಾಡಲಿ” ಎಂದು ಹೇಳಿದ್ದಾರೆ.
ಸಮಿತಿಯು ಎಲ್ಲಾ ಪುಸ್ತಕಗಳನ್ನು ಪರಿಶೀಲಿಸಿ, ನೂರು ಕೋಟಿ ರೂಪಾಯಿ ಎಲ್ಲಿ ಮತ್ತು ಹೇಗೆ ಖರ್ಚಾಗಿದೆ ಎಂಬುದನ್ನು ದಯವಿಟ್ಟು ಪರಿಶೀಲಿಸಲಿ. ಬಳಿಕ ಒಂದು ವಾರದೊಳಗೆ ಅಸೆಂಬ್ಲಿಗೆ ವರದಿ ಸಲ್ಲಿಸಿ, ಚರ್ಚೆ ಮಾಡಲಿ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
