DK Shivakumar: ಇನ್ನೂ ಯುವಕರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್ಚು ಅರ್ಹರು: ಸೋಮನಾಥೇಶ್ವರ ಸ್ವಾಮೀಜಿ

DK Shivakumar: ಇನ್ನೂ ಯುವಕರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್ಚು ಅರ್ಹರು: ಸೋಮನಾಥೇಶ್ವರ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:May 15, 2023 | 2:28 PM

ಚುನಾವಣೆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವರನ್ನೇ ಸಿಎಂ ಮಾಡುವ ಪರಿಪಾಠ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಸೋಮನಾಥೇಶ್ವರ ಸ್ವಾಮೀಜಿ ಹೇಳಿದರು.

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ದಕ್ಕುವ ಹಿಂದೆ ಡಿಕೆ ಶಿವಕುಮಾರ್ (DK Shivakumar) ಅಪಾರ ಪ್ರರಿಶ್ರಮ ಅಡಗಿದೆ, ಅವರು ಕೆಪಿಸಿಸಿ (KPCC) ಅಧ್ಯಕ್ಷರಾದಾಗಿನಿಂದ ಪಕ್ಷವನ್ನು ಅದ್ಭುತವಾಗಿ ಸಂಘಟಿಸುತ್ತಿದ್ದಾರೆ ಹಾಗಾಗಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು ಆದಿಚುಂಚಗಿರಿ ಶಾಖಾಮಠ ಸೋಮನಾಥೇಶ್ವರ ಸ್ವಾಮೀಜಿ (Somanatheshwara Swamiji) ಹೇಳುತ್ತಾರೆ. ಚುನಾವಣೆಯಲ್ಲಿ ಗೆದ್ದವರಿಗೆಲ್ಲ ಮುಖ್ಯಮಂತ್ರಿಯಾಗುವ ಆಸೆ ಇರುತ್ತದೆ, ಆದರೆ ಕೆಲವರು ಮಾತ್ರ ಹುದ್ದೆ ಅಲಂಕರಿಸಲು ಅರ್ಹರಾಗಿರುತ್ತಾರೆ. ಶಿವಕುಮಾರ್ ಅವರು ಇನ್ನೂ ಯವಕರಾಗಿರುವುದರಿಂದ ಮುಖ್ಯಮಂತ್ರಿ ಹುದ್ದೆಗೆ ಹೆಚ್ಚು ಅರ್ಹರಾಗಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಅಷ್ಟು ಮಾತ್ರವಲ್ಲದೆ, ಚುನಾವಣೆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವರನ್ನೇ ಸಿಎಂ ಮಾಡುವ ಪರಿಪಾಠ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಸೋಮನಾಥೇಶ್ವರ ಸ್ವಾಮೀಜಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 15, 2023 02:24 PM