ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾನವೀಯತೆ ಪ್ರದರ್ಶಿಸಿ ಜನರ ಮನಗೆದ್ದ ಡಿಕೆ ಶಿವಕುಮಾರ್

ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾನವೀಯತೆ ಪ್ರದರ್ಶಿಸಿ ಜನರ ಮನಗೆದ್ದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 05, 2024 | 5:25 PM

ಮತ್ತೊಂದು ಸ್ವಾಗತಾರ್ಹ ಅಂಶವೆಂದರೆ, ಯಲಹಂಕ, ದಾಸರಹಳ್ಳಿ ಮತ್ತು ಬ್ಯಾಟರಾಯನಪುರದ ಶಾಸಕರಾದ ಕ್ರಮವಾಗಿ ಎಸ್ ಆರ್ ವಿಶ್ವನಾಥ, ಎಸ್ ಮುನಿರಾಜು ಮತ್ತು ಕೃಷ್ಣ ಭೈರೇಗೌಡ ಸಹ ಅಷ್ಟೇ ಉತ್ಸಾಹದಿಂದ ಇವತ್ತಿನ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು. ಜನರ ಸಮಸ್ಯೆಗಳ ವಿಚಾರ ಬಂದಾಗ ನಾಯಕರು ಪ್ರತಿನಿಧಿಸುವ ಪಕ್ಷಗಳು ಗೌಣವಾಗುತ್ತವೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ವಾಸವಾಗಿರುವ ಜನರ ತೊಂದರೆ, ಸಮಸ್ಯೆಗಳನ್ನು ಪರಿಹರಿಸಲು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಕಂಕಣಬದ್ದರಾಗಿರುವಂತೆ ಕಾಣುತ್ತದೆ. ನಿನ್ನೆಯಿಂದ ಅವರು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ (Janaspandana Programme) ನಡೆಸಿ ನಿವಾಸಿಗಳ ಹಲವಾರು ಸಮಸ್ಯೆಗಳಿಗೆ ಅಲ್ಲಿಂದಲ್ಲೇ ಮತ್ತು ಕೂಡಲೇ ಪರಿಹಾರಗಳನ್ನು ಸೂಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನಿನ್ನೆ ಮಹಾದೇವಪುರ ಕ್ಷೇತ್ರದ (Mahadevapura Assembly constituency) ಸಮಸ್ಯೆಗಳನ್ನು ಆಲಿಸಿದ ಅವರು ಇಂದು ಯಲಹಂಕ, ದಾಸರಹಳ್ಳಿ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳ ನಿವಾಸಿಗಳಿಗಾಗಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರ ಒಂದು ವರ್ತನೆ ಅಲ್ಲಿದ್ದವರ ಮನಗೆದ್ದಿತು. ದೃಶ್ಯಗಳಲ್ಲಿ ನೀವು ನೋಡಬಹುದು, ಹಿರಿಯ ನಾಗರಿಕರು ತಾನು ಕುಳಿತ ವೇದಿಕೆವರೆಗೆ ನಡೆದು ಬರಲಾರರು ಅನ್ನೋದನ್ನು ಮನಗಂಡ ಶಿವಕಕುಮಾರ್ ತಾವೇ ಖುದ್ದಾಗಿ ಅವರು ಕುಳಿತಲ್ಲಿಗೆ ಹೋಗಿ ಅರ್ಜಿಗಳನ್ನು ಇಸಿದುಕೊಳ್ಳುತ್ತಾರೆ. ಜನನಾಯಕರು ಹೀಗೆ ಮಾನವೀಯತೆ ಮೆರೆಯುವ ಸಂದರ್ಭಗಳು ಬಹಳ ಅಪರೂಪ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ