ಡಿಎ ಪ್ರಕರಣ: ವಿಚಾರಣೆಗೆ ಲೋಕಾಯುಕ್ತ ಅಧಿಕಾರಿಗಳ ಎದುರು ಹಾಜರಾದ ಡಿಕೆ ಶಿವಕುಮಾರ್

|

Updated on: Aug 22, 2024 | 7:16 PM

ಶಿವಕುಮಾರ್ ಅವರ ಡಿಎ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅದನ್ನೀಗ ಲೋಕಾಯುಕ್ತಗೆ ಟ್ರಾನ್ಸ್​​ಫರ್ ಮಾಡಿದೆಯೆಂದು ಖುದ್ದು ಡಿಸಿಎಂ ಹೇಳುತ್ತಾರೆ. ಹಾಗೆ ಮಾಡಲು ಅವಕಾಶವಿದೆಯೇ? ಎರಡೂ ಸ್ವಾಯತ್ತ ಸಂಸ್ಥೆಗಳಾದರೂ ಸಿಬಿಯ ಕೇಂದ್ರ ಸರ್ಕಾರದ ಅಡಿ ಬರುತ್ತದೆ.

ಬೆಂಗಳೂರು: ಆದಾಯಕ್ಕೂ ಮೀರಿದ ಪ್ರಕರಣ ಡಿಕೆ ಶಿವಕುಮಾರ ಅವರನ್ನು ಬಿಡುವ ಲಕ್ಷಣಗಳಿಲ್ಲ. ಇಂದು ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಿವಾರಣೆಗೆ ಕರೆದು ಸುಮಾರು ಮೂರು ಗಂಟೆಗಳ ಕಾಲ ಪ್ರಶ್ನಿಸಿದರು. ಅಸಲಿಗೆ ಅವರು ನಿನ್ನೆಯೇ ಲೋಕಾಯುಕ್ತ ಕಚೇರಿಯಲ್ಲಿ ಹಾಜರಾಗಬೇಕಿತ್ತು, ಆದರೆ ಅಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸಲು ಹೋಗಬೇಕಿದ್ದ ಕಾರಣ ಇವತ್ತು ವಿಚಾರಣೆಗೆ ಹಾಜರಾಗುವುದಾಗಿ ವಿನಂತಿಸಿಕೊಂಡಿದ್ದರಂತೆ. ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಲೋಕಾಯುಕ್ತಗಿಂತ ಸಿಬಿಐನವರೇ ವಾಸಿ. ಲೋಕಾಯುಕ್ತಸವರು ನೂರಾರು ಪ್ರಶ್ನೆ ಕೇಳಿ ಹಿಂಸೆ ಕೊಡುತ್ತಾರೆ ಎಂದು ಹೇಳಿದರು. ಒಂದಷ್ಟು ದಾಖಲಾತಿಗಳನ್ನು ಕೇಳಿದ್ದಾರೆ ಅವುಗಳನ್ನು ಒದಗಿಸಬೇಕು, ಯಾವ ದಾಖಲಾತಿಗಳು ಅಂತ ಮಾಧ್ಯಮದವರ ಮುಂದೆ ಹೇಳಲಾಗಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಸಿಬಿಐ ಪ್ರಕರಣವನ್ನು ಲೋಕಾಯುಕ್ತಗೆ ವರ್ಗಾವಣೆ ಮಾಡಿದರೂ ಕೇಂದ್ರೀಯ ತನಿಖಾ ಏಜೆನ್ಸಿ ತನ್ನ ತನಿಖೆಯನ್ನು ಮುಂದುವರಿಸಿದೆ, ಅದರ ಆಧಿಕಾರಿಗಳು ತನ್ನ ಕುಟುಂಬದ ಜನರನ್ನು, ಸ್ನೇಹಿತರನ್ನು ಒಂದೇ ಸಮ ಪೀಡಿಸುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರನ್ನು ಬೇಕಾದರೂ ಟೀಕಿಸಬಹುದು: ಡಿಕೆ ಶಿವಕುಮಾರ್

Follow us on