Bengaluru:  ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್

Bengaluru:  ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 25, 2023 | 2:28 PM

ಇದು ರಾಜಕಾರಣ ಅವನಿಗೆ ನಮ್ಮ ವಿರುದ್ಧ ಆರೋಪಗಳಿದ್ದರೆ ಸಿಬಿಐಗೆ ದೂರು ನೀಡಲಿ ಅಂತ ಕೋಪದಿಂದಲೇ ಶಿವಕುಮಾರ್ ಹೇಳಿದರು.

ಬೆಂಗಳೂರು:  ಬೇರೆ ಪಕ್ಷಗಳ ನಾಯಕರು ಮತ್ತು ತನ್ನ ಎದುರಾಳಿಗಳ ವಿರುದ್ಧ ಮಾತಾಡುವಾಗ ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಏಕವಚನದ ಸಂಬೋಧನೆ ಮಾಡುವುದಿಲ್ಲ. ಇಂದು ಬೆಂಗಳೂರಲ್ಲಿ ಸುದ್ದಿಗಾರರು ರಮೇಶ್ ಜಾರಕಿಹೊಳಿ (Ramesh Jarkiholi) ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಿರುವ ಅರೋಪಗಳ ಬಗ್ಗೆ ಕೇಳಿದಾಗ ಅವರು ಗೋಕಾಕ (Gokak) ಶಾಸಕನ ವಿರುದ್ಧ ಕೆಂಡ ಕಾರಿದರು. ನಮ್ಮ ಪಕ್ಷವನ್ನು ಹಾಳು ಮಾಡಿದವನೇ ಅವನು, ಪ್ರತಿ ವೋಟಿಗೆ ರೂ. 6,000 ಕೊಡು ಅಂತ ನಾವು ಅವನಿಗೆ ಹೇಳಿದ್ದೆವಾ? ಅಂತ ಕೇಳಿದ ಶಿವಕುಮಾರ್ ಪರೋಕ್ಷವಾಗಿ ಜಾರಕಿಹೊಳಿ ಅವರ ಲೈಂಗಿಕ ಸಿಡಿಯ ಬಗ್ಗೆಯೂ ಪ್ರಸ್ತಾಪಿಸಿದರು. ಇದು ರಾಜಕಾರಣ ಅವನಿಗೆ ನಮ್ಮ ವಿರುದ್ಧ ಆರೋಪಗಳಿದ್ದರೆ ಸಿಬಿಐಗೆ ದೂರು ನೀಡಲಿ ಅಂತ ಕೋಪದಿಂದಲೇ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 25, 2023 02:27 PM