ಎಸ್​ಎಸ್​ಎಲ್​ಸಿಯಲ್ಲಿ ಮೊದಲ ರ‍್ಯಾಂಕ್ ಪಡೆದ ಅಂಕಿತಾಳನ್ನು ಸನ್ಮಾನಿಸಿ ರೂ. 5 ಲಕ್ಷ ಬಹುಮಾನ ನೀಡಿದ ಡಿಕೆ ಶಿವಕುಮಾರ್

|

Updated on: May 14, 2024 | 3:20 PM

ಅಂಕಿತಾ ತನ್ನ ವಿದ್ಯೆ ಹೇಳಿಕೊಟ್ಟ ಗುರುಗಳ ಬಗ್ಗೆ ಅದೆಷ್ಟು ಗೌರವ ಇಟ್ಟುಕೊಂಡಿದ್ದಾಳೆ ಅನ್ನೋದು ಆಕೆಯ ಜೆಸ್ಚರ್ ನಿಂದ ಗೊತ್ತಾಗುತ್ತದೆ. ಶಿವಕುಮಾರ್ ಆಕೆಯ ಪೋಷಕರನ್ನು ಸನ್ಮಾನಿಸುವಾಗ ಅಂಕಿತಾ ನನ್ನ ಪ್ರಿನ್ಸಿಪಾಲ್ ಸಹ ಬಂದಿದ್ದಾರೆ ಅನ್ನುತ್ತಾಳೆ. ಆಕೆಯಲ್ಲಿದ್ದ ಭಾವನೆಯನ್ನು ಅರ್ಥಮಾಡಿಕೊಂಡ ಶಿವಕುಮಾರ್ ಪ್ರಿನ್ಸಿಪಾಲರನ್ನು ಕರೆದು ಅವರ ಮೇಲೂ ಶಾಲು ಹೊದಿಸಿ ಹೂ ಹಾರ ಹಾಕಿ ಬೆನ್ನು ತಟ್ಟಿ ಅಭಿನಂದಿಸುತ್ತಾರೆ.

ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಂದ ಇದು ನಿಜಕ್ಕೂ ಅಭಿನಂದನಾರ್ಹ ಜೆಸ್ಚರ್. ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ (first rank) ಪಡೆದ ಬಾಗಲಕೋಟೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯಲ್ಲಿರುವ ಮೊರಾರ್ಜೀ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು (Ankita Basappa Konnur) ಮತ್ತು ಮೂರನೇ ರ‍್ಯಾಂಕ್ ಪಡೆದ ಮಂಡ್ಯದ ವಿದ್ಯಾರ್ಥಿಯನ್ನು ಸರ್ಕಾರದ ಪರವಾಗಿ ಸನ್ಮಾನಿಸಿದರಲ್ಲದೆ ವೈಯಕ್ತಿಕವಾಗಿ ಕ್ರಮವಾಗಿ ರೂ. 5 ಲಕ್ಷ ಮತ್ತು ರೂ. 2 ಲಕ್ಷ ನೀಡಿ ಪ್ರೋತ್ಸಾಹಿದರು. ಶಿವಕುಮಾರ್ ಮಾತಾಡುವಾಗ ಅವರ ಬಲಭಾಗದಲ್ಲಿ ಕೂತಿದ್ದ ಅಂಕಿತಾ ಸಂಕೋಚದ ಮುದ್ದೆಯಾಗಿದ್ದಳು. ಉಪ ಮುಖ್ಯಮಂತ್ರಿಯವರು ಅಂಕಿತಾಳ ಪೋಷಕರನ್ನೂ ಸನ್ಮಾನಿಸಿದರು. ಅಂಕಿತಾ ತನ್ನ ವಿದ್ಯೆ ಹೇಳಿಕೊಟ್ಟ ಗುರುಗಳ ಬಗ್ಗೆ ಅದೆಷ್ಟು ಗೌರವ ಇಟ್ಟುಕೊಂಡಿದ್ದಾಳೆ ಅನ್ನೋದು ಆಕೆಯ ಜೆಸ್ಚರ್ ನಿಂದ ಗೊತ್ತಾಗುತ್ತದೆ. ಶಿವಕುಮಾರ್ ಆಕೆಯ ಪೋಷಕರನ್ನು ಸನ್ಮಾನಿಸುವಾಗ ಅಂಕಿತಾ ನನ್ನ ಪ್ರಿನ್ಸಿಪಾಲ್ ಸಹ ಬಂದಿದ್ದಾರೆ ಅನ್ನುತ್ತಾಳೆ. ಆಕೆಯಲ್ಲಿದ್ದ ಭಾವನೆಯನ್ನು ಅರ್ಥಮಾಡಿಕೊಂಡ ಶಿವಕುಮಾರ್ ಪ್ರಿನ್ಸಿಪಾಲರನ್ನು ಕರೆದು ಅವರ ಮೇಲೂ ಶಾಲು ಹೊದಿಸಿ ಹೂ ಹಾರ ಹಾಕಿ ಬೆನ್ನು ತಟ್ಟಿ ಅಭಿನಂದಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka SSLC 2024 Toppers List: ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ, ಇಲ್ಲಿದೆ ಟಾಪರ್ಸ್​​ ಲಿಸ್ಟ್

Follow us on