ಎಸ್​ಎಸ್​ಎಲ್​ಸಿಯಲ್ಲಿ ಬಾಗಲಕೋಟೆಯ ರೈತನ ಮಗಳು ರಾಜ್ಯಕ್ಕೆ ಪ್ರಥಮ: ರ‍್ಯಾಂಕ್ ಹಿಂದಿನ ಗುಟ್ಟು ಬಿಚ್ಚಿಟ್ಟ ಅಂಕಿತಾ

2023-2024ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ವಿದ್ಯಾರ್ಥಿನಿ ಅಂಕಿತಾ ಬಸಪ್ಪ‌ ಕೊಣ್ಣೂರ‌‌‌ ಮೊದಲ ಸ್ಥಾನ ಪಡೆದಿದ್ದಾರೆ. ನಿತ್ಯ ಬೆಳಿಗ್ಗೆ ಐದು ಗಂಟೆ ಎದ್ದೇಳುವ ಅಂಕಿತಾ 2 ತಾನು ಮತ್ತು ಸಂಜೆ ಪುನಃ ನಾಲ್ಕು ತಾಸು ವಿದ್ಯಾಭ್ಯಾಸ ಮಾಡುತ್ತಾರೆ. ಸದ್ಯ ಅಂಕಿತಾಳ ಸಾಧನೆಗೆ ಬಾಗಲಕೋಟೆ ಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಎಸ್​ಎಸ್​ಎಲ್​ಸಿಯಲ್ಲಿ ಬಾಗಲಕೋಟೆಯ ರೈತನ ಮಗಳು ರಾಜ್ಯಕ್ಕೆ ಪ್ರಥಮ: ರ‍್ಯಾಂಕ್ ಹಿಂದಿನ ಗುಟ್ಟು ಬಿಚ್ಚಿಟ್ಟ ಅಂಕಿತಾ
ಎಸ್​ಎಸ್​ಎಲ್​ಸಿಯಲ್ಲಿ ಬಾಗಲಕೋಟೆಯ ರೈತನ ಮಗಳು ರಾಜ್ಯಕ್ಕೆ ಪ್ರಥಮ: ರ‍್ಯಾಂಕ್ ಹಿಂದಿನ ಗುಟ್ಟು ಬಿಚ್ಚಿಟ್ಟ ಅಂಕಿತಾ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: May 09, 2024 | 2:15 PM

ಬಾಗಲಕೋಟೆ, ಮೇ 09: 2023-2024ನೇ ಸಾಲಿನ ಎಸ್​ಎಸ್​ಎಲ್​ಸಿ (SSLC) ಪರೀಕ್ಷೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಬರೋಬ್ಬರಿ 6 ಲಕ್ಷದ 31 ಸಾವಿರದ 204 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಟಾಪರ್ಸ್​ಗಳ ಮನೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನು ಜಿಲ್ಲೆಯ ಮುಧೋಳ ವಿದ್ಯಾರ್ಥಿನಿ ಅಂಕಿತಾ ಬಸಪ್ಪ‌ ಕೊಣ್ಣೂರ‌‌‌(Ankita Konnuru) ಮೊದಲ ಸ್ಥಾನ ಪಡೆದಿದ್ದಾರೆ. 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೇ ಟಾಪರ್​ ಎನಿಸಿಕೊಂಡಿದ್ದಾಳೆ. ಆ ಮೂಲಕ ರೈತನ ಮಗಳು ರಾಜ್ಯದಲ್ಲಿ ಏಕೈಕ ಸಾಧನೆ ಮಾಡಿ ಕೀರ್ತಿ ಪತಾಕೆ ಹಾರಿಸಿದ್ದಾಳೆ.

ಅಂಕಿತಾ ಮಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ. ಸದ್ಯ ಮನೆಯಲ್ಲಿ ಪೋಷಕರು ಸಿಹಿತಿನಿಸಿ ಸಂಭ್ರಮಿಸಿದ್ದಾರೆ. ಟಿವಿ9 ಜೊತೆ ಕೂಡ ಎಸ್​ಎಸ್​ಎಲ್​ಸಿ ಟಾಪರ್​ ಅಂಕಿತಾ ಕೊನ್ನೂರು ಮಾತನಾಡಿದ್ದು,  ಐಎಎಸ್ ಆಗುವ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾಳೆ.

ನಿತ್ಯ ಆರು ಗಂಟೆ ಓದು

ನಿತ್ಯ ಬೆಳಿಗ್ಗೆ ಐದು ಗಂಟೆ ಎದ್ದೇಳುವ ಅಂಕಿತಾ 2 ಗಂಟೆ ಓದುತ್ತಾರೆ. ಮಧ್ಯೆ 10 ನಿಮಿಷ ಬ್ರೇಕ್​ ತೆಗೆದುಕೊಳ್ಳುತ್ತಾರೆ. ಇದೇ ರೀತಿ ಎರಡು ತಾಸು ಓದುತ್ತಾರೆ. ನಂತರ ಶಾಲೆಗೆ ತೆರಳುತ್ತಾರೆ. ಸಂಜೆ ಪುನಃ ನಾಲ್ಕು ತಾಸು ವಿದ್ಯಾಭ್ಯಾಸ ಮಾಡಿದ್ದಾರೆ. ಇದೆಲ್ಲದರ ಪರಿಶ್ರಮದಿಂದಾಗಿ ಅಂಕಿತಾ ಇಂದು ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಧ್ಯವಾಗಿದೆ.

ಇದನ್ನೂ ಓದಿ: Karnataka SSLC 2024 Toppers List: ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ, ಇಲ್ಲಿದೆ ಟಾಪರ್ಸ್​​ ಲಿಸ್ಟ್

ವಿದ್ಯಾರ್ಥಿನಿ ಅಂಕಿತಾ ತಂದೆ ಹೆಸರು ಬಸಪ್ಪ, ತಾಯಿ ಗೀತಾ. ಇವರದು ರೈತಾಪಿ ಕುಟ್ಟುಂಬ. ಬಸಪ್ಪ ಅವರು ಆರು ಎಕರೆ ನೀರಾವರಿ ಜಮೀನು ಹೊಂದಿದ್ದಾರೆ. ತಾಯಿ ಗೀತಾ ಅವರು ಕೃಷಿ ಹಾಗೂ ಮನೆ ಕೆಲಸ ಮಾಡುತ್ತಾರೆ. ಅಂಕಿತಾ ಮೊದಲ ಮಗಳಾಗಿದ್ದು, ಇನ್ನಿಬ್ಬರು ಕಿರಿಯ ಸಹೋದರರಿದ್ದಾರೆ.

ಅಂಕಿತಾ ಬಾಗಲಕೋಟೆ ಡಿಸಿ ಅಭಿನಂದನೆ

ಅಂಕಿತಾಳ ಈ ಸಾಧನೆಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಅಂಕಿತಾ 625ಕ್ಕೆ 625 ಅಂಕ ಪಡೆದು ಜಿಲ್ಲೆಯ ಪ್ರತಿಷ್ಠೆ ಹೆಚ್ಚಿಸಿದ್ದಾಳೆ. ಅವಳ ಪ್ರಯತ್ನಕ್ಕೆ ಜಿಲ್ಲಾಡಳಿತದಿಂದ ಹೃತ್ಪೂರ್ವಕ ಶುಭಾಶಯ ತಿಳಿಸುವೆ.

ಇದನ್ನೂ ಓದಿ: ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ಖುಷಿಯಾಗುತ್ತಿದೆ: ಟಾಪರ್​ ಅಂಕಿತಾ EXCLUSIVE ಮಾತು

ಅಂಕಿತಾ ಸಾಧನೆ ಈಗ ಓದುತ್ತಿರುವ 9ನೇ ತರಗತಿ ಹಾಗೂ ಹೈಸ್ಕೂಲ್ ಮಕ್ಕಳಿಗೆ ಪ್ರೇರಣೆ ಆಗಿದೆ. ಅವಳ ಸಾಧನೆಯಿಂದ ಸ್ಫೂರ್ತಿ ಪಡೆದು, ತಮ್ಮ ಶೈಕ್ಷಣಿಕ ಸಾಧನೆಗೆ ಸಹಾಯ ಮಾಡುತ್ತೆ. ಅಂಕಿತ ಇನ್ನೂ ಉನ್ನತ ಸಾಧನೆಗೆ ಅವರ ಕುಟುಂಬದ ಜೊತೆ ಜಿಲ್ಲಾಡಳಿತ ಸಹ ಸಹಕಾರ ನೀಡುತ್ತದೆ. ಮುಂದಿನ ವಿದ್ಯಾಭ್ಯಾಸ ಹೀಗೆಯೇ ಅಗ್ರಗಣ್ಯವಾಗಿರಲಿ. ಅವಳ ಕನಸು ನನಸಾಗಲು ಪ್ರಯತ್ನ ಹೀಗೆಯೇ ಸಾಗಲಿ ಎಂದು ಶುಭಹಾರೈಸಿದ್ದಾರೆ.

ವಿದ್ಯಾರ್ಥಿನಿ ಅಂಕಿತಾ ಮಾತು

ವಿದ್ಯಾರ್ಥಿನಿ ಅಂಕಿತಾ ಕೊನ್ನೂರು ಟಿವಿ9 ಜೊತೆ ಮಾತನಾಡಿದ್ದು, ತಂದೆ-ತಾಯಿ ಹಾಗೂ ಶಾಲೆಯ ಶಿಕ್ಷಕರಿಗೂ ಬಹಳ ಖುಷಿಯಾಗಿದೆ. ಇಷ್ಟೇ ಮಾರ್ಕ್ಸ್‌ ಪಡೆಯಬೇಕೆಂದು ನನಗೆ ಯಾವುದೇ ಒತ್ತಡ ಇರಲಿಲ್ಲ. ಓದುವ ವಿಚಾರದಲ್ಲಿ ಕುಟುಂಬಸ್ಥರು ಯಾವುದೇ ಒತ್ತಡ ಹಾಕಿಲ್ಲ. ಶಾಲೆಯಲ್ಲಿ ಓದಲು ಶಿಕ್ಷಕರು ಸಂಪೂರ್ಣವಾಗಿ ಸಹಾಯ ಮಾಡಿದ್ದಾರೆ. ನನ್ನ ತಂದೆ-ತಾಯಿ ಹೆಮ್ಮೆಪಡುವ ರೀತಿ ಮುಂದೆಯೂ ಓದಬೇಕಾಗಿದೆ. ಹಾರ್ಡ್‌ವರ್ಕ್ ಮಾಡಿದ್ರೆ ಸಕ್ಸಸ್‌ ಸಾಧ್ಯೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ