ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

Updated on: Dec 20, 2025 | 7:30 PM

​​ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್​​ ನಿವಾಸಕ್ಕೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಿಂದ ಆಗಮಿಸಿದ ಹತ್ತಕ್ಕೂ ಹೆಚ್ಚು ನಾಗಾಸಾಧುಗಳು ಆಶೀರ್ವಾದ ನೀಡಿದ್ದಾರೆ. ಈ ಹಿಂದೆ ಸಹ ಡಿಕೆಗೆ ಆಶೀರ್ವದಿಸಿದ್ದ ಸಾಧುಗಳು, ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.

ಬೆಂಗಳೂರು, ಡಿಸೆಂಬರ್​​ 20: ಶುಕ್ರವಾರ ಗೋಕಾರ್ಣದ ದೇಗುಲಕ್ಕೆ ಡಿಸಿಎಂ ಡಿಕೆ ಶಿಕವಕುಮಾರ್​ ತೆರಳಿದ್ದರು. ಈ ವೇಳೆ ಪ್ರಾರ್ಥನೆ ಸಲ್ಲಿಸುವಾಗ ಗಣಪತಿಯ ಬಲಗಡೆಯಿಂದ ಹೂ ಬಿದ್ದಿತ್ತು. ಜಗದೀಶ್ವರಿ ದೇಗುಲದಲ್ಲಿ ಬೇಡಿಕೆ ಇಟ್ಟಾಗಲೂ ಒಳ್ಳೆಯ ಮುನ್ಸೂಚನೆ ಸಿಕ್ಕಿತ್ತು. ಈ ಮಧ್ಯೆ ಇಂದು ಸದಾಶಿವನಗರದ ನಿವಾಸಕ್ಕೆ ಉತ್ತರ ಪ್ರದೇಶ, ಉತ್ತರಾಖಂಡ್​ನಿಂದ 10ಕ್ಕೂ ಹೆಚ್ಚು ನಾಗಾಸಾಧುಗಳು ಆಗಮಿಸಿ ಡಿಕೆ ಶಿವಕುಮಾರ್​ಗೆ ಆಶೀರ್ವಾದ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.