ಲೋಗೋ ಅನಾವರಣದ ಕಾರ್ಯಕ್ರಮದಲ್ಲಿ ಸೋಮಶೇಖರ್ ಸಣ್ಣಸ್ವರದಲ್ಲಿ ಏನೋ ಕೇಳಿದಾಗ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ

ಲೋಗೋ ಅನಾವರಣದ ಕಾರ್ಯಕ್ರಮದಲ್ಲಿ ಸೋಮಶೇಖರ್ ಸಣ್ಣಸ್ವರದಲ್ಲಿ ಏನೋ ಕೇಳಿದಾಗ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 23, 2024 | 3:50 PM

ವಿಧಾನ ಸಭೆಯ ಅಧಿವೇಶನದಲ್ಲಿ ಮೊನ್ನೆ ಸೋಮಶೇಖರ್ ನೂರ ಹತ್ತು ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರೂ ಅಗಿರುವ ಶಿವಕುಮಾರ್ ನೀಡಿದ ಉತ್ತರವನ್ನು ಬಲವಾಗಿ ಟೀಕಿಸಿದ್ದರು ಮತ್ತು ಯೋಜಯೆ ಬಗ್ಗೆ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲವೆಂದು ಹೇಳಿದ್ದರು.

ಬೆಂಗಳೂರು: ರಾಷ್ಟ್ರೀಯ ಜೀವನಪಾಯ ಅಭಿಯಾನದ ಭಾಗವಾಗಿ ನಮ್ಮ ಸರಸ್ ಅಕ್ಕ ಕೆಫೆ (Namma Saras Akka Café) ಕಾರ್ಯಕ್ರಮದ ಲೋಗೋವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಅನಾವರಣಗೊಳಿಸಿದರು. ಅದಕ್ಕೂ ಮೊದಲು ಅವರ ವೇದಿಕೆಯ ಮೇಲೆ ಕೂತಿರುವುದನ್ನು ಮತ್ತು ಅವರ ಎಡಭಾಗದಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಬಲಭಾಗದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ (Dr Sharan Prakash Patil) ಕುಳಿತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಷಯ ಅದಲ್ಲ. ವಿಧಾನ ಸಭೆಯ ಅಧಿವೇಶನದಲ್ಲಿ ಮೊನ್ನೆ ಸೋಮಶೇಖರ್ ನೂರ ಹತ್ತು ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರೂ ಅಗಿರುವ ಶಿವಕುಮಾರ್ ನೀಡಿದ ಉತ್ತರವನ್ನು ಬಲವಾಗಿ ಟೀಕಿಸಿದ್ದರು ಮತ್ತು ಯೋಜಯೆ ಬಗ್ಗೆ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲವೆಂದು ಹೇಳಿದ್ದರು.

ಅವರಿಬ್ಬರ ನಡುವೆ ಗಾಢ ಗೆಳೆತನ ಇರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಲ್ಲದೆ, ಸೋಮಶೇಖರ್ ಪುನಃ ಕಾಂಗ್ರೆಸ್ ಹೋಗಬಹುದೆಂದು ಬಹಳ ದಿನಗಳಿಂದ ವದಂತಿ ಹರಡಿದೆ. ವೇದಿಕೆಯಲ್ಲಿ ಸೋಮಶೇಖರ್ ಉಪ ಮುಖ್ಯಮಂತ್ರಿಯ ಕಿವಿಯಲ್ಲಿ ಏನೋ ಹೇಳುತ್ತಾರೆ. ಅದಕ್ಕೆ ಶಿವಕುಮಾರ್ ಕಾಗದದ ಮೇಲೆ ಏನೋ ಬರೆಯುವ ಮೂಲಕ ಪ್ರತಿಕ್ರಿಯಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 23, 2024 03:09 PM