ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಯಾವತ್ತೂ ಗೂಂಡಾ ಕಾಯ್ದೆ ಹೇರಿರಲಿಲ್ಲ ಅದನ್ನು ಶುರುಮಾಡಿದ್ದು ಆರ್ ಅಶೋಕ: ಪ್ರಮೋದ್ ಮುತಾಲಿಕ್

ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಯಾವತ್ತೂ ಗೂಂಡಾ ಕಾಯ್ದೆ ಹೇರಿರಲಿಲ್ಲ ಅದನ್ನು ಶುರುಮಾಡಿದ್ದು ಆರ್ ಅಶೋಕ: ಪ್ರಮೋದ್ ಮುತಾಲಿಕ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 23, 2024 | 4:33 PM

ಅಶೋಕ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಾಯ್ದೆ ಹೇರಲಾರಂಭಿಸಿದ ಬಳಿಕ ಕಾಂಗ್ರೆಸ್ ಸರಕಾರಗಳು ಅದನ್ನು ಮುಂದುವರಿಸಿದವು ಎಂದು ಮುತಾಲಿಕ್ ಕಿಡಿ ಕಾರಿದ್ದಾರೆ. ಅಷ್ಟು ಮಾತ್ರವಲ್ಲ, ಅಶೋಕ ಗೃಹ ಮಂತ್ರಿಯಾಗಿದ್ದಾಗ ಪಿಎಫ್ಐ ಪುಂಡಾಟ ಜೋರಾಗಿದ್ದರೂ ಒಂದೇ ಒಂದು ಪತ್ರವನ್ನು ಅವರು ಕೇಂದ್ರಕ್ಕೆ ಬರೆದಿರಲಿಲ್ಲ ಎಂದು ಮುತಾಲಿಕ್ ಹೇಳಿದರು.

ಉಡುಪಿ: ಮೊದಲು ಬಜರಂಗ ದಳದ ಕಾರ್ಯಕರ್ತರು (Bajrang Dal activists) ಈಗ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik). ವಿರೋಧ ಪಕ್ಷದ ನಾಯಕ ಆರ್ ಅಶೋಕಗೆ (R Ashoka) ಹಿಂದೂ ಸಂಘಟನೆಗಳಿಂದಲೇ ಖಂಡನೆ, ಟೀಕೆ ಎದುರಾಗುತ್ತಿದೆ. ಅಸಲಿಗೆ ಬುಧವಾರದಂದು ಅವರು ಸದನದಲ್ಲಿ ವೀರಾವೇಶದಿಂದ ಮಾತಾಡುತ್ತಾ ಹಿಂದೆ ತಾನು ಗೃಹ ಸಚಿವನಾಗಿದ್ದಾಗ ಬಜರಂಗ ದಳದ ಕಾರ್ಯಕರ್ತರು ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರಿದ್ದೆ ಅಂತ ಹೇಳಿದ್ದು ಮುಳುವಾಗಿದೆ. ಈಗಾಗಲೇ ಅವರು ಬಜರಂಗ ದಳ ಕಾರ್ಯಕರ್ತರ ಕ್ಷಮೆಯಾಚಿಸಿದ್ದಾರೆ. ಇವತ್ತು ಉಡುಪಿಯಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಮುತಾಲಿಕ್ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಌಕ್ಟ್ ಹೇರುವ ಪರಿಪಾಠ ಶುರುಮಾಡಿದ್ದೇ ಅಶೋಕ, ಕಾಂಗ್ರೆಸ್ ಸರ್ಕಾರ ಯಾವತ್ತೂ ಅದನ್ನು ಮಾಡಿರಲಿಲ್ಲ, ಆದರೆ ಅಶೋಕ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಾಯ್ದೆ ಹೇರಲಾರಂಭಿಸಿದ ಬಳಿಕ ಕಾಂಗ್ರೆಸ್ ಸರಕಾರಗಳು ಅದನ್ನು ಮುಂದುವರಿಸಿದವು ಎಂದು ಮುತಾಲಿಕ್ ಕಿಡಿ ಕಾರಿದ್ದಾರೆ. ಅಷ್ಟು ಮಾತ್ರವಲ್ಲ, ಅಶೋಕ ಗೃಹ ಮಂತ್ರಿಯಾಗಿದ್ದಾಗ ಪಿಎಫ್ಐ ಪುಂಡಾಟ ಜೋರಾಗಿದ್ದರೂ ಒಂದೇ ಒಂದು ಪತ್ರವನ್ನು ಅವರು ಕೇಂದ್ರಕ್ಕೆ ಬರೆದಿರಲಿಲ್ಲ ಎಂದು ಮುತಾಲಿಕ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ