5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದ ಯತೀಂದ್ರ: ಮಾರ್ಮಿಕವಾಗಿ ಉತ್ತರ ಕೊಟ್ಟ ಡಿ.ಕೆ. ಶಿವಕುಮಾರ್​​

Updated By: ಪ್ರಸನ್ನ ಹೆಗಡೆ

Updated on: Dec 11, 2025 | 1:01 PM

ಸಿದ್ದರಾಮಯ್ಯನವರೇ 5 ವರ್ಷಗಳ ಕಾಲ ಸಿಎಂ ಎಂಬ ಎಂಎಲ್​​ಸಿ ಯತೀಂದ್ರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪುತ್ರನ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ನೀಡ್ತಾರೆ ಎಂದು ಡಿಕೆಶಿ ಹೇಳಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಪಕ್ಷದಲ್ಲಿನ ಡಿನ್ನರ್​​ ಮೀಟಿಂಗ್​​ಗಳ ಬಗ್ಗೆಯೂ ಮಾಧ್ಯಮ ಪ್ರತಿನಿಧಿಗಳು ಅವರನ್ನು ಈ ವೇಳೆ ಪ್ರಶ್ನಿಸಿದ್ದಾರೆ.

ಬೆಳಗಾವಿ, ಡಿಸೆಂಬರ್​​ 11: ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ವಿಧಾನ ಪರಿಷತ್​​ ಸದಸ್ಯ ಯತೀಂದ್ರ ಅವರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪುತ್ರನ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ನೀಡೋದಾಗಿ ಡಿಕೆಶಿ ಹೇಳಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಪಕ್ಷದಲ್ಲಿನ ಡಿನ್ನರ್​​ ಮೀಟಿಂಗ್​​ಗಳ ಬಗ್ಗೆಯೂ ಮಾಧ್ಯಮ ಪ್ರತಿನಿಧಿಗಳು ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದು, ಡಿಸಿಎಂ ಅವರ ಮೌನವೇ ಇದಕ್ಕೆ ಉತ್ತರವಾಗಿರೋದು ಕಂಡುಬಂತು. ಚುನಾವಣಾ ಅಕ್ರಮ ವಿಚಾರವಾಗಿಯೂ ಡಿ.ಕೆ. ಶಿವಕುಮಾರ್​​ ಅವರು ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 11, 2025 01:00 PM