Bengaluru News: ಸಿಂಗಪೂರದಲ್ಲಿ ಕುಳಿತು ಕುಮಾರಸ್ವಾಮಿ ನಡೆಸುತ್ತಿರುವ ತಂತ್ರಗಾರಿಕೆ ಬಗ್ಗೆ ಮಾಹಿತಿ ಇದೆಯೆಂದ ಡಿಕೆ ಶಿವಕುಮಾರ್
ಸರ್ಕಾರ ಉರುಳಿಸುವ ತಂತ್ರಗಾರಿಕೆ ಒಂದು ಬಹಳ ಗಂಭೀರವಾದ ಸಂಗತಿಯಾದರೂ ಶಿವಕುಮಾರ್ ಅಷ್ಟೇ ಕೂಲಾಗಿ ಪ್ರತಿಕ್ರಿಯಿಸಿದ್ದು ಸುದ್ದಿಗಾರರಲ್ಲಿ ಆಶ್ಚರ್ಯ ಮೂಡಿಸಿತು.
ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಿಂಗಪೂರ್ ನಲ್ಲಿ (Singapore) ಕುಳಿತು ರಾಜ್ಯದಲ್ಲಿ ಕಳೆದರೆಡು ತಿಂಗಳುಗಳಿಂದ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರನ್ನು ಉರುಳಿಸುವ ತಂತ್ರ ಹೆಣೆಯುತ್ತಿದ್ದಾರೆಂಬ ವದಂತಿಯೊಂದು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಎಷ್ಟು ನಿಜಾಂಶವಿದೆ ಅಂತ ಸುದ್ದಿ ಹರಡಿದವರೇ ಹೇಳಬೇಕು. ವಿಷಯದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ, ಬೆಂಗಳೂರಲ್ಲಿ ಮಾಡಬೇಕಿದ್ದ ಕೆಲಸವನ್ನು ಅವರು ಸಿಂಗಪೂರ್ ನಲ್ಲಿ ಕೂತು ಮಾಡುತ್ತಿದ್ದಾರೆ, ತಮಗೆ ಅದರ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು. ಸರ್ಕಾರ ಉರುಳಿಸುವ ತಂತ್ರಗಾರಿಕೆ ಒಂದು ಬಹಳ ಗಂಭೀರವಾದ ಸಂಗತಿಯಾದರೂ ಶಿವಕುಮಾರ್ ಅಷ್ಟೇ ಕೂಲಾಗಿ ಪ್ರತಿಕ್ರಿಯಿಸಿದ್ದು ಸುದ್ದಿಗಾರರಲ್ಲಿ ಆಶ್ಚರ್ಯ ಮೂಡಿಸಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ