ಮಾಧ್ಯಮ ಪ್ರತಿನಿಧಿಗಳ ಎದುರು ಸಚಿವ ಸಿ ಎನ್ ಅಶ್ವಥ್ ನಾರಾಯಣರನ್ನು ಲೇವಡಿ ಮಾಡಿದ ಡಿಕೆ ಶಿವಕುಮಾರ್

ರಾಮನಗರದಲ್ಲಿ ಆಶ್ವಥ್ ನಾರಾಯಣ ರಾಮಮಂದಿರ ಕಟ್ಟುತ್ತಾರಂತೆ ಅಂತ ಮಾಧ್ಯಮದವರೊಬ್ಬರು ಹೇಳಿದಾಗ ಶಿವಕುಮಾರ್ ಸಚಿವರನ್ನು ಏಕವಚನದಲ್ಲಿ ಜರಿಯಲು ಪ್ರಾರಂಭಿಸಿದರು

ಮಾಧ್ಯಮ ಪ್ರತಿನಿಧಿಗಳ ಎದುರು ಸಚಿವ ಸಿ ಎನ್ ಅಶ್ವಥ್ ನಾರಾಯಣರನ್ನು ಲೇವಡಿ ಮಾಡಿದ ಡಿಕೆ ಶಿವಕುಮಾರ್
|

Updated on: Feb 17, 2023 | 6:11 PM

ಬೆಂಗಳೂರು: 2023-24 ಸಾಲಿನ ರಾಜ್ಯ ಮುಂಗಡ ಪತ್ರ ಮಂಡನೆಯಾದ ಬಳಿಕ ವಿಧಾನ ಸೌಧದ ಹೊರಗಡೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರನ್ನು ಅಕ್ಷರಶಃ ಲೇವಡಿ ಮಾಡಿದರು. ರಾಮನಗರದಲ್ಲಿ ಆಶ್ವಥ್ ನಾರಾಯಣ ರಾಮಮಂದಿರ (Ram Mandir) ಕಟ್ಟುತ್ತಾರಂತೆ ಅಂತ ಮಾಧ್ಯಮದವರೊಬ್ಬರು ಹೇಳಿದಾಗ ಶಿವಕುಮಾರ್ ಸಚಿವರನ್ನು ಏಕವಚನದಲ್ಲಿ ಜರಿಯಲು ಪ್ರಾರಂಭಿಸಿದರು. ಅವನೇನು ರಾಮಮಂದಿರ ಕಟ್ಟೋದು, ಮೊದಲು ಅವನು ರಾಮನಗರದಲ್ಲಿ ತನ್ನ ಪಕ್ಷದ ಕಚೇರಿ ಕಟ್ಟಿಕೊಳ್ಳಲಿ ಅಂತ ಹೇಳಿ, ಎಲ್ಹೋದ ಆ ಗಂಡು, ನಮ್ಮ ನಾಯಕರನ್ನು ಗುಂಡಿಟ್ಟು ಸಾಯಿಸುತ್ತಾನಂತೆ, ಅಯ್ಯೋ ಇವನಾ… ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us