ತಿಹಾರ್ ಜೈಲಿಂದ ಹೊರಬಂದಾಗ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್​ಗೆ ನಾಚಿಕೆಯಾಗಲಿಲ್ಲವೇ? ಕೆ ಎಸ್ ಈಶ್ವರಪ್ಪ

Updated on: Sep 22, 2023 | 4:27 PM

ತಾನು ಯಾವತ್ತೋ ಉಪ ಮುಖ್ಯಮಂತ್ರಿಯಾದವನು, ಆದರೆ ಅವರು ಈಗಷ್ಟೇ ಆಗಿದ್ದಾರೆ ಮತ್ತು ಮೂರು ಜನ ಅವರ ಪೈಪೋಟಿಗೆ ಬರಲಿದ್ದಾರೆ ಎಂದ ಈಶ್ವರಪ್ಪ, ತಿಹಾರ್ ಜೈಲಿಂದ ಜಾಮೀನು ಪಡೆದು ಹೊರಬಂದಾಗ ಬೆಂಗಳೂರಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್ ಗೆ ನಾಚಿಕೆಯಾಗಲಿಲ್ಲವೇ? ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದು ಬಂದಿದ್ರಾ ಅಂತ ಪ್ರಶ್ನಿಸಿದರು.

ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಪ್ರಹಾರ ಮಡುವುದನ್ನು ಮುಂದುವರಿಸಿದ್ದಾರೆ. ಅವನ ನಡುವೆ ವ್ಯಕ್ತಿಗತ (personal) ಕಾದಾಟ ನಡೆಯುತ್ತಿರುವುದು ಮತ್ತು ಪದ ಬಳಕೆ ಎಲ್ಲೆ ಮೀರುತ್ತಿರುವುದು ನಿಜಕ್ಕೂ ದುರಂತ. ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಈಶ್ವರಪ್ಪನವರು ಶಿವಕುಮಾರ್ ವಿರುದ್ಧ ಏಕಚನದಲ್ಲೇ ದಾಳಿ ನಡೆಸಿ ಅವರ ವಿರುದ್ಧ ರಾಷ್ಟ್ರದ್ರೋಹಿ ಮತ್ತು ಇನ್ನಿತರ ಪದಗಳನ್ನು ಬಳಸಿರುವುದಾಗಿ ಹೇಳಿದರು. ಶಿವಕುಮಾರ್ ಜೈಲಿಗೆ ಹೋಗಿ ಜಾಮಿನು ಪಡೆದು ಹೊರಬಂದವರು, ಪುನಃ ಜೈಲಿಗೆ ಹೋಗೋದು ನಿಶ್ಚಿತ ಎಂದು ಅವರು ಹೇಳಿದರು. ತಾನು ಯಾವತ್ತೋ ಉಪ ಮುಖ್ಯಮಂತ್ರಿಯಾದವನು, ಆದರೆ ಅವರು ಈಗಷ್ಟೇ ಆಗಿದ್ದಾರೆ ಮತ್ತು ಮೂರು ಜನ ಅವರ ಪೈಪೋಟಿಗೆ ಬರಲಿದ್ದಾರೆ ಎಂದ ಈಶ್ವರಪ್ಪ, ತಿಹಾರ್ ಜೈಲಿಂದ ಜಾಮೀನು ಪಡೆದು ಹೊರಬಂದಾಗ ಬೆಂಗಳೂರಲ್ಲಿ ಮೆರವಣಿಗೆ ಮಾಡಿಸಿಕೊಳ್ಳಲು ಶಿವಕುಮಾರ್ ಗೆ ನಾಚಿಕೆಯಾಗಲಿಲ್ಲವೇ? ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಗೆದ್ದು ಬಂದಿದ್ರಾ ಅಂತ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 22, 2023 04:27 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More