ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ರಾಕೆಟ್ ಸ್ಪೀಡ್ನಲ್ಲಿ ಇಸ್ರೋ ಕಚೇರಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಚಂದ್ರಯಾಣ 3 ಸಕ್ಸಸ್ ಆದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಕೇಟ್ ಸ್ಪೀಡ್ನಲ್ಲೇ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿ ಭೇಟಿ ನೀಡಿ ವಿಜ್ಞಾನಿಗಳ ತಂಡಕ್ಕೆ ಸನ್ಮಾನಿಸಿ ಅಭಿನಂದನೆ ತಿಳಿಸಿದ್ದಾರೆ.
ಬೆಂಗಳೂರು. (ಆಗಸ್ಟ್ 23): ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಲ್ಯಾಂಡ್ ಆಗಿದೆ. ಬುಧವಾರ ಸಂಜೆ ನಿಗಧಿತ 6:04ರ ಸಮಯದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ಈಗಾಗಲೇ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ನೌಕೆ ಕೆಲವು ಫೋಟೋಗಳನ್ನು ತೆಗೆದಿದ್ದು, ಅವುಗಳನ್ನ ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಿಂದ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಚಂದ್ರಯಾಣ 3 ಸಕ್ಸಸ್ ಆದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಕೆಟ್ ಸ್ಪೀಡ್ನಲ್ಲೇ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿ ಭೇಟಿ ನೀಡಿ ವಿಜ್ಞಾನಿಗಳ ತಂಡಕ್ಕೆ ಸನ್ಮಾನಿಸಿ ಅಭಿನಂದನೆ ತಿಳಿಸಿದ್ದಾರೆ. ಇನ್ನು ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿ ಹಿನ್ನೆಲೆ ಇಂದು ಇಸ್ರೋ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ ವಿಜ್ಞಾನ & ತಂತ್ರಜ್ಞಾನ ಸಚಿವ ಬೋಸರಾಜು ಸಾಥ್ ನೀಡಲಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ