Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸೇರುವಂತೆ ಜೆಡಿಎಸ್ ಪಕ್ಷದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ, ಆದರೆ ಯಾರೂ ಪಕ್ಷ ಬಿಡೋದಿಲ್ಲ: ಸಮೃದ್ಧಿ ಮಂಜುನಾಥ್, ಜೆಡಿಎಸ್ ಶಾಸಕ

ಕಾಂಗ್ರೆಸ್ ಸೇರುವಂತೆ ಜೆಡಿಎಸ್ ಪಕ್ಷದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ, ಆದರೆ ಯಾರೂ ಪಕ್ಷ ಬಿಡೋದಿಲ್ಲ: ಸಮೃದ್ಧಿ ಮಂಜುನಾಥ್, ಜೆಡಿಎಸ್ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 24, 2023 | 10:40 AM

ತನ್ನ ಮೇಲೆ ದೆಹಲಿಗೆ ಬರುವಂತೆ ಒತ್ತಡ ಹೇರಲಾಗಿತ್ತು, ಆದರೆ ಅವರ ಆಹ್ವಾನವನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು. ಜೆಡಿಎಸ್ ಪಕ್ಷದ 19 ಶಾಸಕರಲ್ಲಿ ಯಾರೂ ಕಾಂಗ್ರೆಸ್ ಸೇರುತ್ತಿಲ್ಲ, ಇಷ್ಟರಲ್ಲೇ ಎಲ್ಲ 19 ಶಾಸಕರನ್ನು ಒಂದೇ ವೇದಿಕೆ ಮೇಲೆ ಕೂರಿಸಿ ಒಂದು ಕಾರ್ಯಕ್ರಮದ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.

ಕೋಲಾರ: ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಬಗ್ಗೆ ವದಂತಿಗಳು ಕೇಳಿಬರುತ್ತಿವೆ. ಜಿಲ್ಲೆಯ ಮುಳುಬಾಗಿಲು (Mulbagal) ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ (Samrudhi Manjunath) ಗುರುವಾರ ಬೆಳಗ್ಗೆ ನೀಡಿರುವ ಹೇಳಿಕೆ ವದಂತಿಗಳನ್ನು ಪುಷ್ಠೀಕರಿಸುತ್ತದೆ. ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿರುವ ಮಂಜುನಾಥ್, ಲೋಕ ಸಭೆ ಚುನಾವಣೆಯಲ್ಲಿ (Lok Sabha polls) ಕನಿಷ್ಟ 20 ಸೀಟುಗಳನ್ನು ಕರ್ನಾಟಕದಿಂದ ಗೆಲ್ಲಲೇಬೇಕು ಅಂತ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನಾಯಕರಿಗೆ ಅಣತಿ ನೀಡಿರುವುದರಿಂದ ಬೇರೆ ಪಕ್ಷಗಳ ಶಾಸಕರನನ್ನು ಸೆಳೆಯುವ ಪ್ರಯತ್ನ ಅವರು ಮಾಡುತ್ತಿದ್ದಾರೆ. ತನ್ನ ಮೇಲೆ ದೆಹಲಿಗೆ ಬರುವಂತೆ ಒತ್ತಡ ಹೇರಲಾಗಿತ್ತು, ಆದರೆ ಅವರ ಆಹ್ವಾನವನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು. ಜೆಡಿಎಸ್ ಪಕ್ಷದ 19 ಶಾಸಕರಲ್ಲಿ ಯಾರೂ ಕಾಂಗ್ರೆಸ್ ಸೇರುತ್ತಿಲ್ಲ, ಇಷ್ಟರಲ್ಲೇ ಎಲ್ಲ 19 ಶಾಸಕರನ್ನು ಒಂದೇ ವೇದಿಕೆ ಮೇಲೆ ಕೂರಿಸಿ ಒಂದು ಕಾರ್ಯಕ್ರಮದ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ