ಡಿಕೆ ಶಿವಕುಮಾರ್ ಪತ್ನಿ ಆಗಮಿಸಿದ್ದ ಹೆಲಿಕಾಪ್ಟರ್ ತಪಾಸಣೆಗೆ ಅಡ್ಡಿ, ಮಾತಿನ ಚಕಮಕಿ

|

Updated on: Apr 22, 2023 | 3:50 PM

ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರು ಕರಾವಳಿ ಭಾಗದಲ್ಲಿ ಟೆಂಬಪ್ ರನ್ ಆರಂಭಿಸಿದ್ದು, ಇಂದು ಡಿಕೆ ಶಿವಕುಮಾರ್ ಅವರು ಧರ್ಮಸ್ಥಳಕ್ಕೆ ಕುಟುಂಬ ಸಹಿತರಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಮಂಗಳೂರು: ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರು ಕರಾವಳಿ ಭಾಗದಲ್ಲಿ ಟೆಂಬಪ್ ರನ್ ಆರಂಭಿಸಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಧರ್ಮಸ್ಥಳಕ್ಕೆ ಕುಟುಂಬ ಸಹಿತರಾಗಿ ಆಗಮಿಸಿದ್ದಾರೆ. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಡಿಕೆಶಿ ಕುಟುಂಬಸ್ಥರು ಆಗಮಿಸಿದ್ದ ಹೆಲಿಕಾಪ್ಟರ್​ ತಪಾಸಣೆಗೆ ಚುನಾವಣಾಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಪೈಲಟ್, ಇದು ಖಾಸಗಿ ಹೆಲಿಕಾಪ್ಟರ್, ಪರಿಶೀಲಿಸಲು ಅವಕಾಶವಿಲ್ಲವೆಂದು ಮಾತಿಗೆ ಇಳಿದಿದ್ದಾರೆ. ಪೈಲಟ್ ರಾಮದಾಸ್ ಹಾಗೂ ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಹೆಲಿಕಾಪ್ಟರ್ ತಪಾಸಣೆ ಮಾಡಲಾಯಿತು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್​ ಮಾರಾಟ ಮಾಡಿಕೊಂಡಿದ್ದಾರೆ; ಮೊಯ್ದೀನ್ ಬಾವಾ ಗಂಭೀರ ಆರೋಪ

ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 22, 2023 03:50 PM