Farmers in distress: ಅಕಾಲಿಕ ಮತ್ತು ಆಲಿಕಲ್ಲು ಮಳೆಯಿಂದ ಟೊಮೆಟೊ ಬೆಳೆ ನಾಶ, ತೀವ್ರ ಸಂಕಷ್ಟದಲ್ಲಿ ಹರಿಯಾಣ ರೈತ, ಪರಿಹಾರಕ್ಕಾಗಿ ಆಗ್ರಹ

Farmers in distress: ಅಕಾಲಿಕ ಮತ್ತು ಆಲಿಕಲ್ಲು ಮಳೆಯಿಂದ ಟೊಮೆಟೊ ಬೆಳೆ ನಾಶ, ತೀವ್ರ ಸಂಕಷ್ಟದಲ್ಲಿ ಹರಿಯಾಣ ರೈತ, ಪರಿಹಾರಕ್ಕಾಗಿ ಆಗ್ರಹ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 22, 2023 | 1:46 PM

ತೀವ್ರ ಹತಾಷರಾಗಿರುವ ಹರಿಯಾಣ ರೈತರು ತಮಗೆ ಯೋಗ್ಯವಾದ ಪರಿಹಾರ ಧನ ನೀಡಬೇಕೆಂದು ಸರ್ಕರವನ್ನು ಆಗ್ರಹಿಸುತ್ತಿದ್ದಾರೆ.

ಹರಿಯಾಣದ ರೈತರು ಕಂಗಾಲಾಗಿದ್ದಾರೆ. ಮೊದಲು ಕೆಟ್ಟ ಹವಾಮಾನ (bad weather) ಅವರನ್ನು ಕಾಡಿದರೆ ಈಗ ಪಾತಾಳ ತಲಪಿರುವ ಟೊಮೆಟೊ ಬೆಲೆ (tomato price) ಅವರ ಜೀವ ಹಿಂಡುತ್ತಿದೆ. ಕಳೆದೊಂದು ತಿಂಗಳಿಂದ ಸುರಿಯತ್ತಿರುವ ಆಕಾಲಿಕ ಮತ್ತು ಆಲಿಕಲ್ಲು ಮಳೆಯಿಂದಾಗಿ (hailstorm) ಟೊಮೆಟೊ ಸೇರಿದಂತೆ ಬೇರೆ ಬೆಳೆಗಳು ಸಹ ನಾಶವಾಗಿವೆ. ಟೊಮೆಟೊ ಬೆಳೆಗೆ ಮಾರುಕಟ್ಟೆಯಲ್ಲಿ ಕನಿಷ್ಟ ಬೆಲೆಯೂ ಸಿಗದ ಕಾರಣ ಬೆಳೆಗಾರರು ಫಸಲನ್ನು ಅಕ್ಷರಶಃ ರಸ್ತೆಗೆ ಬಿಸಾಡುತ್ತಿದ್ದಾರೆ. ಟೊಮೊಟೊ ಬೆಳೆಯಲು ಮಾಡಿದ ವೆಚ್ಚದ ಮಾತು ಹಾಗಿರಲಿ, ತೋಟದಿಂದ ಮಾರುಕಟ್ಟೆಗೆ ಸಾಗಿಸಿದ ಸಾರಿಗೆ ವೆಚ್ಚ ಕೂಡ ಉತ್ಪತ್ತಿಯಾಗುತ್ತಿಲ್ಲ ಎಂದು ರೈತರು ಗೋಳಿಡುತ್ತಿದ್ದಾರೆ.

‘ನಾವು ಬೆಳೆದ ಟೊಮೆಟೊ ಸ್ಥಿತಿಯನ್ನೊಮ್ಮೆ ನೋಡಿ. ಆಲಿಕಲ್ಲು ಮಳೆಯಿಂದಾಗಿ ಅವುಗಳನ್ನು ಕೈಯಲ್ಲಿ ಹಿಡಿಯುವುದು ಕೂಡ ಸಾಧ್ಯವಿಲ್ಲ.  25 ಕೇಜಿ ಟೊಮೆಟೊ ಮಾರುಕಟ್ಟೆಗೆ ಒಯ್ದರೆ ನಮಗೆ ರೂ. 100 ಸಿಗುತ್ತಿದೆ. ಕೆಲವು ಸಲ ನಾವು ತೆಗೆದುಕೊಂಡ ಹೋದ ಟೊಮೆಟೊಗಳನ್ನು ಮಾರದೆ ವಾಪಸ್ಸು ತರುವ ಇಲ್ಲವೇ ರಸ್ತೆಯ ಮೇಲೆ ಬಿಸಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ನಮ್ಮ ಸಂಕಟ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾವು ಮಾಡಿಕೊಳ್ಳುವ ಒಂದೇ ಒಂದು ನಿವೇದನೆಯೆಂದರೆ, ಸರ್ಕಾರದ ಪ್ರತಿನಿಧಿಗಳು ಹಳ್ಳಿಗಳಿಗೆ ಭೇಟಿ ನೀಡಿ ಒಂದು ಸಮೀಕ್ಷೆ ನಡೆಸಲಿ. ಸರ್ಕಾರ ನಮಗೆ ಪರಿಹಾರ ಧನ ನೀಡಲೇಬೇಕು. ಸಾಸಿವೆ ಮತ್ತು ಗೋಧಿ ಬೆಳೆ ಸಹ ನಾಶವಾಗಿವೆ,’ ಎಂದು ಟೊಮೆಟೊ ಬೆಳೆಗಾರ ರಾಜೇಶ್ ಹೇಳುತ್ತಾರೆ.

ಇದನ್ನೂ ಓದಿ: ವಿದೇಶಿ ಯೂಟ್ಯೂಬ್ ಚಾನೆಲ್​ನಲ್ಲಿ ದಾಖಲೆ ಬರೆದ ರಾಮ್ ಚರಣ್ ಹಾಗೂ ಉಪಾಸನಾ ವಿಡಿಯೋ

ತೀವ್ರ ಹತಾಷರಾಗಿರುವ ಹರಿಯಾಣ ರೈತರು ತಮಗೆ ಯೋಗ್ಯವಾದ ಪರಿಹಾರ ಧನ ನೀಡಬೇಕೆಂದು ಸರ್ಕರವನ್ನು ಆಗ್ರಹಿಸುತ್ತಿದ್ದಾರೆ.

‘ಸರ್ಕಾರ ರೈತರ ಎದುರಿಸುತ್ತಿರುವ ಸ್ಥಿತಿಯ ಬಗ್ಗೆಯೂ ಒಂದು ಸಮೀಕ್ಷೆ ನಡೆಸಬೇಕು. ಟೊಮೆಟೊ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ಪ್ರತಿನಿಧಿಗಳು ಹಾಳಾಗಿರುವ ಬೆಳೆಗಳನ್ನು ಕಣ್ಣಾರೆ ನೋಡಬೇಕು. ತೋಟಗಾರಿಕೆಯಲ್ಲಿ ತೊಡಗಿರುವವರು ಕಂಗಾಲಾಗಿದ್ದಾರೆ. ನಮ್ಮನ್ನು ಆಳುವವರು ಸ್ಥಳಗಳಿಗೆ ಭೇಟಿ ನೀಡಿ ನಮ್ಮ ಹಾಳಾದ ಟೊಮೆಟೊ ಫಸಲು ನೋಡಿ ಪರಿಹಾರ ಘೋಷಿಸಲೇಬೇಕು,’ ಎಂದು ರಾಜ್ಪಾಲ್ ಸಿಂಗ್ ಹೆಸರಿನ ರೈತ ಹೇಳುತ್ತಾರೆ.

ಇದನ್ನೂ ಓದಿ: ಚೀನಾದ ಶಿಯೋಮಿಗೆ ಭಾರೀ ಹಿನ್ನಡೆ; 5551 ಕೋಟಿ ರೂ. ಜಪ್ತಿ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್​​

ರಾಜ್ಯ ಕೃಷಿ ಇಲಾಖೆಯ ಅಧಿಕಾರಿಗಳು ಫಸಲು ನಾಶದ ಬಗ್ಗೆ ಒಂದು ವರದಿಯನ್ನು ತಮ್ಮ ಮೇಲಧಿಕಾರಿಗಳಿಗೆ ಕಳಿಸಿರುವುದಾಗಿ ಹೇಳುತ್ತಾರೆ. ವಿಷಯ ಬಹಳ ಗಂಭೀರವಾಗಿರುವುದರಿಂದ ಸರ್ಕಾರ ಕೂಡಲೇ ಕಾರ್ಯೋನ್ಮುಖಗೊಂಡು ಪರಿಹಾರ ವಿತರಿಸುತ್ತದೆ ಎಂಬ ಭಾವನೆಯನ್ನು ರೈತರು ತಳೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ