AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಯೂಟ್ಯೂಬ್ ಚಾನೆಲ್​ನಲ್ಲಿ ದಾಖಲೆ ಬರೆದ ರಾಮ್ ಚರಣ್ ಹಾಗೂ ಉಪಾಸನಾ ವಿಡಿಯೋ

Ram Charan-Upasana: ರಾಮ್ ಚರಣ್ ಹಾಗೂ ಉಪಾಸನಾ ಅವರುಗಳು ಆಸ್ಕರ್ ಯೂಟ್ಯೂಬ್ ವಿಡಿಯೋ ಒಂದು ದಾಖಲೆ ಬರೆದಿದೆ.

ವಿದೇಶಿ ಯೂಟ್ಯೂಬ್ ಚಾನೆಲ್​ನಲ್ಲಿ ದಾಖಲೆ ಬರೆದ ರಾಮ್ ಚರಣ್ ಹಾಗೂ ಉಪಾಸನಾ ವಿಡಿಯೋ
ಉಪಾಸನಾ-ರಾಮ್ ಚರಣ್
ಮಂಜುನಾಥ ಸಿ.
|

Updated on: Apr 21, 2023 | 8:30 PM

Share

ಆರ್​ಆರ್​ಆರ್ (RRR) ಸಿನಿಮಾದ ನಾಟು-ನಾಟು (Natu Natu) ಹಾಡು ಆಸ್ಕರ್ ಗೆದ್ದಿದ್ದು ಐತಿಹಾಸಿಕ ಕ್ಷಣ. ಆರ್​ಆರ್​ಆರ್ ಸಿನಿಮಾ ತಂಡದ ಪ್ರಮುಖರಾದ ರಾಜಮೌಳಿ (Rajamouli), ಜೂ ಎನ್​ಟಿಆರ್ (Jr NTR), ಕೀರವಾಣಿ, ಚಂದ್ರಭೋಸ್ ಅವರುಗಳು ತಮ್ಮ ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೆಡ್ ಕಾರ್ಪೆಟ್ ಮೇಲೆ ನಡೆದು ಹಾಲಿವುಡ್ ಸ್ಟಾರ್​ಗಳನ್ನು ಭೇಟಿ ಮಾಡಿದ್ದರು. ಅವರ ಸಂಭ್ರಮದ ಹಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದರಲ್ಲಿಯೂ ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana) ಅವರುಗಳ ವಿಡಿಯೋ ಹಾಗೂ ಚಿತ್ರಗಳು ತುಸು ಹೆಚ್ಚಾಗಿಯೇ ವೈರಲ್ ಆಗಿದ್ದವು.

ಆಸ್ಕರ್ ಅಂಗಳದಲ್ಲಿ ರಾಮ್ ಹಾಗೂ ಪತ್ನಿ ಉಪಾಸನಾ ನಡೆದುಕೊಂಡ ರೀತಿ, ಡ್ರೆಸ್ಟಿಂಗ್ ಸ್ಟೈಲ್ ಎಲ್ಲವೂ ನೋಡುಗರ ಗಮನಸೆಳೆದಿತ್ತು. ವಿದೇಶಿ ನೆಲದಲ್ಲಿ ಭಾರತೀಯ ಧರಿಸು ಸೀರೆಯಲ್ಲಿ ಉಪಾಸನಾ, ರಾಜಮೌಳಿ ಪತ್ನಿ ಎಲ್ಲರೂ ಕಂಗೊಳಿಸಿದ್ದರು. ಪ್ರತಿಷ್ಠಿತ ಆಸ್ಕರ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ರಾಮ್ ಉಪಾಸನಾ ಜೋಡಿ ಕಾರ್ಯಕ್ರಮಕ್ಕೆ ತಯಾರಾದ ವಿಡಿಯೋವೊಂದನ್ನು ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.

ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಆಸ್ಕರ್ ಗೂ ಮೊದಲು ಹೇಗೆಲ್ಲಾ ರೆಡಿಯಾದರೂ ಎಂಬುದನ್ನು ತೋರಿಸಲಾಗಿತ್ತು. ರಾಮ್ ಬಟ್ಟೆಗಳನ್ನು ಹೇಗೆಲ್ಲಾ ತಯಾರಿಸಲಾಗಿದೆ. ಬಟ್ಟೆಯ ಗುಣಮಟ್ಟ ವಿನ್ಯಾಸ, ರೆಡಿಯಾಗಿ ದೇವರಿಗೆ ನಮಸ್ಕರಿಸುವ ಪದ್ದತಿ ಎಲ್ಲದರ ವಿಡಿಯೋ ತುಣುಕಿನಲ್ಲಿ ತೋರಿಸಲಾಗಿತ್ತು. ಈ ವಿಡಿಯೋ ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ 6.5 ಮಿಲಿಯನ್ಸ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ. ಈ ಯೂಟ್ಯೂಬ್ ಚಾನೆಲ್ ನಲ್ಲಿ ಅತಿ ಹೆಚ್ಚು ವೀವ್ಸ್ ಪಡೆದಿರುವುದು ಇದೇ ವಿಡಿಯೋ ಅನ್ನೋದೇ ವಿಶೇಷ.

ರಾಮ್ ಚರಣ್ ಕಪ್ಪು ಬಣ್ಣದ ಉಡುಗೆ ತೊಟ್ಟು ಮಿಂಚಿದ್ದರೆ, ಉಪಾಸನಾ ಬಿಳಿ ಬಣ್ಣದ ಸಿಲ್ಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು, ವಿದೇಶಿ ನೆಲದಲ್ಲಿ ಈ ಜೋಡಿ ದೇವರಿಗೆ ನಮಸ್ಕರಿಸಿ ಹೊರಟ ಬಗೆಗೆ ಬಹಳ ಮೆಚ್ಚುಗೆ ಸಿಕ್ಕಿತ್ತು, ಇದೀಗ ರಾಮ್-ಉಪಾಸನಾ ದಂಪತಿಯ ಆಸ್ಕರ್ ವಿಡಿಯೋ ದಾಖಲೆ ಬರೆದಿದೆ. ಇದು ರಾಮ್ ಚರಣ್ ಜನಪ್ರಿಯತೆಗೆ ಉದಾಹರಣೆ.

ಆರ್​ಆರ್​ಆರ್ ತಂಡವು ವಿದೇಶದ ಹಲವು ನ್ಯೂಸ್ ಚಾನೆಲ್​ಗಳು ಜನಪ್ರಿಯ ಯೂಟ್ಯೂಬ್ ಚಾನೆಲ್​ಗಳಿಗೆ ವಿಡಿಯೋ ಸಂದರ್ಶನಗಳನ್ನು ನೀಡಿದ್ದವು. ವ್ಯಾನಿಟಿ ಚಾನೆಲ್​ಗಾಗಿ ರಾಜಮೌಳಿ ಅವರು ವಿಶೇಷ ಸಂದರ್ಶನ ನೀಡಿ, ಆಸ್ಕರ್ ಗೆದ್ದ ನಾಟು-ನಾಟು ಹಾಡಿನ ಹಿನ್ನೆಲೆ ಬಗ್ಗೆ ಹಾಡಿನ ವಿಡಿಯೋ ಸಹಿತ ಮಾಹಿತಿ ನೀಡಿದ್ದರು. ಆ ವಿಡಿಯೋ ಸಹ ಸಖತ್ ವೈರಲ್ ಆಗಿತ್ತು ಮತ್ತು ಹಲವು ನಾಟು-ನಾಟು ಹಾಡಿನ ಬಗ್ಗೆ ಹಲವು ಹೊಸ ಮಾಹಿತಿಗಳನ್ನು ಅವರು ಅದರಲ್ಲಿ ಹೊರಹಾಕಿದ್ದರು.

ರಾಮ್ ಚರಣ್ ಹಾಗೂ ಉಪಾಸನಾ ಪ್ರಸ್ತುತ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾದ 11 ವರ್ಷದ ಬಳಿಕ ಈ ದಂಪತಿ ಪೋಷಕರಾಗುತ್ತಿದ್ದಾರೆ. ಇನ್ನು ರಾಮ್ ಚರಣ್ ಆರ್​ಆರ್​ಆರ್ ಸಿನಿಮಾದ ಬಳಿಕ ಇದೀಗ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್​ನ ಕಿಯಾರಾ ಅಡ್ವಾಣಿ ಈ ಸಿನಿಮಾದ ನಾಯಕಿ. ಅದಾದ ಬಳಿಕ ಹಾಲಿವುಡ್ ಸಿನಿಮಾ ಒಂದರಲ್ಲಿ ರಾಮ್ ಚರಣ್ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ