Ram Charan: ನಿಜಕ್ಕೂ ಆಸ್ಕರ್ ಸಮಾರಂಭದಲ್ಲಿ ನಡೆದಿದ್ದು ಏನು? ಬಹುದಿನಗಳ ಬಳಿಕ ಬಾಯ್ಬಿಟ್ಟ ರಾಮ್ ಚರಣ್
Naatu Naatu Song: ಮಾರ್ಚ್ 12ರಂದು ಲಾಸ್ ಏಂಜಲಿಸ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ಹೆಜ್ಜೆ ಹಾಕಲು ರಾಮ್ ಚರಣ್ ಸಿದ್ಧರಾಗಿದ್ದರು. ಆದರೆ ಅವಕಾಶ ಸಿಗಲಿಲ್ಲ.
ಭಾರತದ ಸಿನಿಮಾಗಳು ಆಸ್ಕರ್ ಗೆಲ್ಲಬೇಕು ಎಂಬುದು ಭಾರತೀಯರ ಬಹು ವರ್ಷಗಳ ಕನಸಾಗಿತ್ತು. ಆ ಕನಸನ್ನು ‘ಆರ್ಆರ್ಆರ್’ ಸಿನಿಮಾ ನನಸು ಮಾಡಿತು. ಈ ಸಿನಿಮಾದ ‘ನಾಟು ನಾಟು..’ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ (Oscar Awards) ಸಿಕ್ಕಿದ್ದು ಭಾರತೀಯರಿಗೆ ಹೆಮ್ಮೆ ತಂದಿದೆ. ಆದರೆ ಈ ಪ್ರಶಸ್ತಿ ಪಡೆದಿದ್ದರ ಹಿಂದೆ ಲಾಬಿ ಇದೆಯೇ ಎಂದು ಕೂಡ ಕೆಲವರು ಅನುಮಾನ ವ್ಯಕ್ತಪಡಿಸಿದ್ದುಂಟು. ಇನ್ನು, ಆಸ್ಕರ್ ವೇದಿಕೆಯಲ್ಲಿ ‘ನಾಟು ನಾಟು..’ (Naatu Naatu Song) ಹಾಡಿಗೆ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರು ಡ್ಯಾನ್ಸ್ ಮಾಡುತ್ತಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಗೆ ಅಲ್ಲಿ ಡ್ಯಾನ್ಸ್ ಮಾಡಲು ಯಾಕೆ ಅವಕಾಶ ಸಿಗಲಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈಗ ಆ ಪ್ರಶ್ನೆಗೆ ರಾಮ್ ಚರಣ್ ಉತ್ತರ ನೀಡಿದ್ದಾರೆ. ‘ನಮ್ಮನ್ನು ಆಸ್ಕರ್ ವೇದಿಕೆಗೆ ಕರೆಯುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರು ಕರೆಯಲೇ ಇಲ್ಲ’ ಎಂದು ರಾಮ್ ಚರಣ್ (Ram Charan) ಹೇಳಿದ್ದಾರೆ. ಆದರೆ ಈ ಮೊದಲು ಜೂನಿಯರ್ ಎನ್ಟಿಆರ್ ನೀಡಿದ ಹೇಳಿಕೆಯೇ ಬೇರೆ ರೀತಿ ಇತ್ತು.
‘ಶೇ.100ರಷ್ಟು ರೆಡಿಯಾಗಿದ್ದೆ’ ಎಂದ ರಾಮ್ ಚರಣ್:
ಮಾರ್ಚ್ 12ರಂದು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ಹೆಜ್ಜೆ ಹಾಕಲು ರಾಮ್ ಚರಣ್ ಸಿದ್ಧರಾಗಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ‘ಅವರು ನಮ್ಮನ್ನು ಕರೆಯುತ್ತಾರೆ ಅಂತ ನಾನು ಶೇ.100ರಷ್ಟು ರೆಡಿಯಾಗಿದ್ದೆ. ಆದರೆ ನಿಜಕ್ಕೂ ಏನಾಯಿತೋ ನನಗೆ ತಿಳಿದಿಲ್ಲ. ಅವರು ನಮ್ಮನ್ನು ಕರೆಯಲಿಲ್ಲ. ಆ ಬಗ್ಗೆ ಈಗ ಮಾತನಾಡೋದು ಬೇಡ. ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ ತಂಡದವರು ತುಂಬ ಚೆನ್ನಾಗಿ ಮಾಡಿದರು. ನಮಗಿಂತಲೂ ಚೆನ್ನಾಗಿ ಡ್ಯಾನ್ಸ್ ಮಾಡಿದರು’ ಎಂದು ರಾಮ್ ಚರಣ್ ಹೇಳಿದ್ದಾರೆ.
ಇದನ್ನೂ ಓದಿ: Yentamma Song: ಪಂಚೆ ಎತ್ತಿಕಟ್ಟಿ ಕುಣಿದ ಸಲ್ಮಾನ್ ಖಾನ್, ರಾಮ್ ಚರಣ್, ವೆಂಕಟೇಶ್; ಧೂಳೆಬ್ಬಿಸಿದ ‘ಯೆಂಟಮ್ಮಾ’ ಹಾಡು
‘ತಯಾರಿ ಮಾಡಿಕೊಂಡಿರಲಿಲ್ಲ’ ಎಂದಿದ್ದ ಜೂ. ಎನ್ಟಿಆರ್:
ಆಸ್ಕರ್ ವೇದಿಕೆಯಲ್ಲಿ ‘ನಾಟು ನಾಟು..’ ಹಾಡಿಗೆ ಯಾಕೆ ಡ್ಯಾನ್ಸ್ ಮಾಡಿಲ್ಲ ಎಂಬುದಕ್ಕೆ ಜ್ಯೂನಿಯರ್ ಎನ್ಟಿಆರ್ ಅವರು ಬೇರೆಯದೇ ಕಾರಣ ನೀಡಿದ್ದರು. ಸೂಕ್ತ ತಯಾರಿ ಮಾಡಿಕೊಳ್ಳದ ಕಾರಣ ತಾವು ಡ್ಯಾನ್ಸ್ ಮಾಡಿಲ್ಲ ಎಂದು ಅವರು ಹೇಳಿದ್ದರು. ‘ನಾನು ಡ್ಯಾನ್ಸ್ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ರಿಹರ್ಸಲ್ ಮಾಡಲು ನಮಗೆ ಸಮಯ ಸಿಕ್ಕಿಲ್ಲ. ನಾವು ಸೂಕ್ತ ತಯಾರಿ ಮಾಡಿಕೊಳ್ಳದೇ ಜಗತ್ತಿನ ಅತಿ ದೊಡ್ಡ ವೇದಿಕೆ ಏರಲು ಆಗುವುದಿಲ್ಲ. ನಾನು ಬ್ಯುಸಿ ಆಗಿದ್ದೆ. ರಾಮ್ ಚರಣ್ ಕೂಡ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಬ್ಯುಸಿ ಆಗಿದ್ದರು. ರಿಹರ್ಸಲ್ ಮಾಡಿಲ್ಲದ ಕಾರಣ ನಾವು ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಪರ್ಫಾರ್ಮ್ ಮಾಡುವುದಿಲ್ಲ’ ಅಂತ ಜೂ. ಎನ್ಟಿಆರ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.