AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಜನಿಸುವುದಕ್ಕೂ ಮುನ್ನ ಮಾಲ್ಡೀವ್ಸ್​ನಲ್ಲಿ ಸಮಯ ಕಳೆದ ಉಪಾಸನಾ-ರಾಮ್ ಚರಣ್

ರಾಮ್ ಚರಣ್ ತಂದೆ ಆಗುತ್ತಿರುವ ಖುಷಿಯಲ್ಲಿದ್ದಾರೆ. ಅದಕ್ಕೂ ಮೊದಲು ಪತ್ನಿ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಅವರು ಮಾಲ್ಡೀವ್ಸ್​​ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಗು ಜನಿಸುವುದಕ್ಕೂ ಮುನ್ನ ಮಾಲ್ಡೀವ್ಸ್​ನಲ್ಲಿ ಸಮಯ ಕಳೆದ ಉಪಾಸನಾ-ರಾಮ್ ಚರಣ್
ಉಪಾಸನಾ-ರಾಮ್ ಚರಣ್
ರಾಜೇಶ್ ದುಗ್ಗುಮನೆ
|

Updated on: Apr 12, 2023 | 8:10 AM

Share

ರಾಮ್ ಚರಣ್ ಹಾಗೂ ಉಪಾಸನಾ ಬಾಳಲ್ಲಿ ಸಂತಸ ಹೆಚ್ಚಿದೆ. ರಾಮ್ ಚರಣ್ ನಟನೆಯ ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಬಂತು. ಈಗ ರಾಮ್ ಚರಣ್ (Ram Charan) ಅವರ ಬಾಳಲ್ಲಿ ಹೊಸ ಅಧ್ಯಾಯ ಶುರುವಾಗುತ್ತಿದೆ. ಶೀಘ್ರವೇ ಅವರು ತಂದೆ ಆಗಲಿದ್ದಾರೆ. ಅದಕ್ಕೂ ಮುನ್ನ ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಮಾಲ್ಡೀವ್ಸ್ ತೆರಳಿದ್ದಾರೆ. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಅನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ರಾಮ್ ಚರಣ್ ಪಕ್ಕಾ ಫ್ಯಾಮಿಲಿಮ್ಯಾನ್. ಅವರು ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಂಡ ಚಿತ್ರದ ಕೆಲಸದ ಜೊತೆ ಕುಟುಂಬಕ್ಕೂ ಹೆಚ್ಚು ಸಮಯ ನೀಡುತ್ತಾರೆ. ಈಗ ಅವರು ತಂದೆ ಆಗುತ್ತಿರುವ ಖುಷಿಯಲ್ಲಿದ್ದಾರೆ. ಅದಕ್ಕೂ ಮೊದಲು ಪತ್ನಿ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಅವರು ಮಾಲ್ಡೀವ್ಸ್​​ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ (ಏಪ್ರಿಲ್ 11) ರಾಮ್ ಚರಣ್ ಅವರು ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ಯಾವುದೇ ಕ್ಯಾಪ್ಶನ್ ನೀಡಿಲ್ಲ. ಬದಲಿಗೆ ನೀಲಿ ಬಣ್ಣದ ಹಾರ್ಟ್ ಎಮೋಜಿ ಹಾಕಿದ್ದಾರೆ. ಈ ಮೂಲಕ ಸಮುದ್ರ ತೀರವನ್ನು ಎಂಜಾಯ್ ಮಾಡುತ್ತಿರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.

ಕುಟುಂಬದವರು ಹಾಗೂ ಗೆಳೆಯರ ಜೊತೆ ದುಬೈನಲ್ಲಿ ಇತ್ತೀಚೆಗೆ ಉಪಾಸನಾಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಈ ಫೋಟೋಗಳನ್ನು ರಾಮ್ ಚರಣ್ ಹಂಚಿಕೊಂಡಿದ್ದರು. ದೊಡ್ಡ ಕೇಕ್​ನ ತಂದು ಕತ್ತರಿಸಲಾಗಿತ್ತು. ರಾಮ್ ಚರಣ್ ಹಾಗೂ ಉಪಾಸನಾ ಮುಖದಲ್ಲಿ ಸಂತಸ ಮನೆ ಮಾಡಿರೋದು ಫೋಟೋದಲ್ಲಿ ಕಂಡು ಬಂದಿತ್ತು. ಈಗ ಈ ದಂಪತಿ ದುಬೈನಿಂದ ನೇರವಾಗಿ ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿದ್ದಾರೆ.

ಇದನ್ನೂ ಓದಿ: Allu Arjun: ರಾಮ್ ಚರಣ್ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಗೈರಾಗಿದ್ದೇಕೆ?

ರಾಮ್​ ಚರಣ್​ ಮತ್ತು ಉಪಾಸನಾ ಅವರು ಮದುವೆ ಆಗಿದ್ದು 2012ರ ಜೂನ್​ 14ರಂದು. ವೈವಾಹಿಕ ಜೀವನಕ್ಕೆ ಕಾಲಿಟ್ಟು 10 ವರ್ಷಗಳ ಬಳಿಕ ಅವರು ಮೊದಲ ಮಗು ಪಡೆಯಲು ನಿರ್ಧರಿಸಿದರು. ಸದ್ಯದಲ್ಲೇ ಅವರ ಕುಟುಂಬದಿಂದ ಗುಡ್​ ನ್ಯೂಸ್​ ಸಿಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ

ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಮಗು ಜನಿಸಿದ ಬಳಿಕ ಅವರು 6 ತಿಂಗಳ ಕಾಲ ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಜೀವನದಲ್ಲಿ ಇದು ಮಹತ್ವದ ಹಂತ ಆಗಿರುವುದರಿಂದ ಅವರು ಬ್ರೇಕ್ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ