AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ

ರಾಮ್ ಚರಣ್ ಜೊತೆ ಮದುವೆಯಾದಾಗ ಅನುಭವಿಸಿದ್ದ ನಿಂದನೆ, ಮೂದಲಿಕೆಗಳನ್ನು ಉಪಾಸನಾ ಕಮ್ಮಿನೇನಿ ನೆನಪಿಸಿಕೊಂಡಿದ್ದಾರೆ.

ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ
ರಾಮ್ ಚರಣ್-ಉಪಾಸನಾ
ಮಂಜುನಾಥ ಸಿ.
|

Updated on:Apr 02, 2023 | 8:24 PM

Share

ಉಪಾಸನಾ (Upasana Kammineni) ಹಾಗೂ ರಾಮ್ ಚರಣ್ (Ram Charan) ಮದುವೆಯಾಗಿ ಹತ್ತು ವರ್ಷಗಳಾಗಿವೆ. ಈ ಜೂನ್ ತಿಂಗಳಲ್ಲಿ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಇದೀಗ ಇಬ್ಬರೂ ಪೋಷಕರಾಗಲಿದ್ದು, ಉಪಾಸನಾ ಹಾಗೂ ರಾಮ್ ಚರಣ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2012 ರಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ ವಿವಾಹವಾದಾಗ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ತಮ್ಮ ಮದುವೆ ಸಂದರ್ಭದಲ್ಲಿ ತಾವು ಎದುರಿಸಿದ ಟೀಕೆಗಳ ಬಗ್ಗೆ ಉಪಾಸನಾ ಕಮ್ಮಿನೇನಿ ಇದೀಗ ಮಾತನಾಡಿದ್ದಾರೆ.

ನಾನು ಹಾಗೂ ರಾಮ್ ಚರಣ್ ಕಾಮನ್ ಫ್ರೆಂಡ್ ಒಬ್ಬರಿಂದಾಗಿ ಮೊದಲ ಭಾರಿ ಭೇಟಿ ಆದೆವು, ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ವಿವಾಹವಾದೆವು. ನಮ್ಮಿಬ್ಬರ ಹಿನ್ನೆಲೆ ಬೇರೆ-ಬೇರೆ ಆಗಿದ್ದರೂ ಸಹ ಪರಸ್ಪರರ ಮೇಲಿರುವ ಪ್ರೀತಿ, ಗೌರವ ಹಾಗೂ ನಂಬಿಕೆಗಳಿಂದಾಗಿ ನಾವು ಮದುವೆಯಾಗಲು ನಿಶ್ಚಯಿಸಿದೆವು. ನಮ್ಮ ಮದುವೆಯಲ್ಲಿ ನಮ್ಮ ಆಂಟಿ ಹಾಗೂ ಸಹೋದರಿ ಬಹಳ ಪ್ರಮುಖ ಪಾತ್ರವಹಿಸಿದರು ಎಂದು ನೆನಪು ಮಾಡಿಕೊಂಡಿದ್ದಾರೆ ಉಪಾಸನಾ.

ಮದುವೆಯಾದ ಹೊಸತರಲ್ಲಿ ನಾನು ಬಹಳಷ್ಟು ಅಪಮಾನಗಳನ್ನು ಎದುರಿಸಬೇಕಾಯಿತು. ಹಲವರು ನನ್ನ ಬಾಡಿಶೇಮಿಂಗ್ ಮಾಡಿದರು. ದಪ್ಪಗಿದ್ದಾಳೆ, ಸುಂದರವಾಗಿಲ್ಲ ಎಂದು ಹೇಳಿದರು. ಮಾತ್ರವಲ್ಲ, ರಾಮ್ ಚರಣ್, ಹಣಕ್ಕಾಗಿ ನನ್ನನ್ನು ವಿವಾಹವಾಗಿದ್ದಾರೆ ಎಂದರು. ಆದರೆ ಅದನ್ನೆಲ್ಲ ನಾವು ಸಹಿಸಿಕೊಂಡೆವು. ಆಗ ನಮ್ಮನ್ನು ಟೀಕಿಸಿದವರ ಅಭಿಪ್ರಾಯ ಈಗ ಬದಲಾಗಿದೆ. ಆದರೆ ಆಗ ಎಲ್ಲವನ್ನೂ ಸಹಿಸಿಕೊಂಡು ಮುಂದೆ ನಡೆದಿದ್ದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಚಾಂಪಿಯನ್ ಎನಿಸುತ್ತಿದೆ ಎಂದಿದ್ದಾರೆ ಉಪಾಸನಾ.

ನಾವಿಬ್ಬರೂ ಬಹಳ ಪ್ರಾಕ್ಟಿಕಲ್ ವ್ಯಕ್ತಿಗಳು, ಪ್ರಾಕ್ಟಿಕಲ್ ಆಗಿ ಆಲೋಚಿಸುತ್ತೇವೆ. ಪರಸ್ಪರರ ಬಗ್ಗೆ ಗೌರವ, ಪ್ರೀತಿ ಹೊಂದಿದ್ದೇವೆ. ಒಬ್ಬರಿಗೊಬ್ಬರು ಚಾಲೆಂಜ್​ಗಳನ್ನು ಹಾಕಿಕೊಳ್ಳುತ್ತಾ ಬೆಳೆಯಲು ಯತ್ನಿಸುತ್ತೇವೆ” ಎಂದಿರುವ ಉಪಾಸನಾ, ಆಸ್ಕರ್ ಸಮಾರಂಭದ ಬಗ್ಗೆ ಮಾತನಾಡುತ್ತಾ, ಆಸ್ಕರ್ ಸಮಾರಂಭದ ದಿನ ರಾಮ್ ಚರಣ್ ಬಹಳ ಒತ್ತಡದಲ್ಲಿದ್ದರು, ನಿಜಕ್ಕೂ ಅವರ ಕೈ ನಡುಗುತ್ತಿತ್ತು, ಅವರಿಗೆ ಬೆಂಬಲದ ಅವಶ್ಯಕತೆ ಬಹಳ ಇತ್ತು, ನಾನು ಅವರಿಗೆ ಅಂದು ಬೆಂಬಲವಾಗಿದ್ದೆ. ನನಗೂ ಸಹ ಅದು ಬಹಳ ಎಮೋಷನಲ್ ಆದ ಸಮಯವಾಗಿತ್ತು ಎಂದಿದ್ದಾರೆ ಉಪಾಸನಾ.

ಉಪಾಸನಾ ಆಂಧ್ರದ ಶ್ರೀಮಂತ ಕುಟುಂಬದ ಮಗಳು. ರಾಷ್ಟ್ರದ ಹಲವು ನಗರಗಳಲ್ಲಿರುವ ಅಪೋಲೊ ಆಸ್ಪತ್ರೆ ಅವರ ಕುಟುಂಬದ ಒಡೆತನದಲ್ಲಿದೆ. ಸ್ವತಃ ಉದ್ಯಮಿ ಆಗಿರುವ ಉಪಾಸನಾ ಅಪೋಲೊ ಆಸ್ಪತ್ರೆ ಚೇನ್​ನ ವೈಸ್ ಚೇರ್​ಮೆನ್ ಆಗಿದ್ದಾರೆ. ಜೊತೆಗೆ ಯುಆರ್ ಲೈಫ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಎಚ್​ಎಫ್​ಪಿಎಲ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಹ ಆಗಿದ್ದಾರೆ. ಇನ್ನು ರಾಮ್ ಚರಣ್ ಭಾರತದ ಟಾಪ್ ನಟರಲ್ಲಿ ಒಬ್ಬರಾಗಿದ್ದು, ಇದೀಗ ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಹಾಲಿವುಡ್ ಸಿನಿಮಾ ಒಂದರಲ್ಲಿಯೂ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Sun, 2 April 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!