Vijay: ಇನ್ಸ್ಟಾಗ್ರಾಂಗೆ ಕಾಲಿಟ್ಟ ವಿಜಯ್, ನಾಲ್ಕು ಗಂಟೆಯಲ್ಲಿ 25 ಲಕ್ಷ ಫಾಲೋವರ್ಸ್!
ತಮಿಳಿನ ಖ್ಯಾತ ನಟ ವಿಜಯ್ ಇನ್ಸ್ಟಾಗ್ರಾಂಗೆ ಕಾಲಿಟ್ಟಿದ್ದು ಕೇವಲ ನಾಲ್ಕು ಗಂಟೆಯಲ್ಲಿ 25 ಲಕ್ಷ ಜನ ಫಾಲೋವರ್ಗಳನ್ನು ಸಂಪಾದಿಸಿದ್ದಾರೆ.

ಅತಿ ಹೆಚ್ಚು ಅಭಿಮಾನಿಗಳನ್ನು (Fan) ಹೊಂದಿರುವ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿರುವ ತಮಿಳಿನ ವಿಜಯ್ (Vijay) ಸಾಮಾಜಿಕ ಜಾಲತಾಣಗಳಿಂದ (Social Media) ತುಸು ದೂರವೇ ಇರುತ್ತಾರೆ. ಈಗಾಗಲೇ ಅವರು ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಇದ್ದಾದರೂ ಹೆಚ್ಚು ಟ್ವೀಟ್ ಮಾಡುವುದಿಲ್ಲ. ಆದರೆ ಅವರು ಟ್ವೀಟ್ ಮಾಡಿದರೆಂದರೆ ಅದು ವೈರಲ್ ಆಗುವುದು ನಿಶ್ಚಯ. ಇನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಒಂದವನ್ನು ಮಾಡಿ ವರ್ಷಗಳೇ ಆಗಿಬಿಟ್ಟಿವೆ. ಅದೇಕೋ ಇನ್ಸ್ಟಾಗ್ರಾಂನಿಂದ ದೂರವಿದ್ದ ನಟ ವಿಜಯ್ ಇಂದಷ್ಟೆ ಇನ್ಸ್ಟಾಗ್ರಾಂ (Instagram) ಖಾತೆ ತೆರೆದಿದ್ದು, ಇನ್ಸ್ಟಾಗ್ರಾಂಗೆ ಕಾಲಿಟ್ಟ ಕೇವಲ ನಾಲ್ಕು ಗಂಟೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಪಡೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಆಕ್ಟರ್ ವಿಜಯ್ ಹೆಸರೊಂದಿಗೆ ಖಾತೆ ತೆರೆದಿರುವ ವಿಜಯ್ ತಮ್ಮ ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಲೋ ಗೆಳೆಯ-ಗೆಳತಿಯರೇ ಎಂದು ಬರೆದುಕೊಂಡಿದ್ದಾರೆ. ಚಿತ್ರ ಹಂಚಿಕೊಂಡ ನಾಲ್ಕು ಗಂಟೆಯಲ್ಲಿಯೇ 25 ಲಕ್ಷ ಲೈಕ್ಗಳು ಬಂದಿದ್ದು, 25 ಲಕ್ಷಕ್ಕೂ ಹೆಚ್ಚು ಮಂದಿ ವಿಜಯ್ ಅವರನ್ನು ಫಾಲೋ ಮಾಡಿದ್ದಾರೆ. ವರ್ಷಗಳಿಂದ ಇನ್ಸ್ಟಾಗ್ರಾಂನಲ್ಲಿರುವ ಹಲವು ನಟ-ನಟಿಯರಿಗೆ ಈಗಲೂ 25 ಲಕ್ಷ ಫಾಲೋವರ್ಗಳಿಲ್ಲ ಇನ್ಸ್ಟಾಗ್ರಾಂನಲ್ಲಿ ಆದರೆ ವಿಜಯ್ಗೆ ಕೇವಲ ನಾಲ್ಕು ಗಂಟೆಯಲ್ಲಿ 25 ಲಕ್ಷ ಮಂದಿ ಫಾಲೋವರ್ಗಳು ದೊರಕಿದ್ದಾರೆ.
ಟ್ವಿಟ್ಟರ್ನಲ್ಲಿ ತುಸುವಷ್ಟೆ ಸಕ್ರಿಯವಾಗಿರುವ ನಟ ವಿಜಯ್ ಆಗಾಗ್ಗೆ ತಮ್ಮ ಸಿನಿಮಾದ ಪೋಸ್ಟರ್, ಟ್ರೈಲರ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರ ಹೊರತಾಗಿ ತಮ್ಮ ಅಭಿಮಾನಿಗಳು ಬಹುಮುಖ್ಯ ಸಂದೇಶವೊಂದನ್ನು ತಲುಪಿಸಲು ಮಾತ್ರವೇ ಟ್ವಿಟ್ಟರ್ ಅನ್ನು ಬಳಸುತ್ತಾರೆ. ವರ್ಷವೊಂದಕ್ಕೆ ಬೆರಳಿಕೆಯ ಟ್ವೀಟ್ಗಳನ್ನಷ್ಟೆ ವಿಜಯ್ ಮಾಡುತ್ತಾರೆ, ಆದರೆ ಅವರು ಮಾಡುವ ಟ್ವೀಟ್ಗಳೆಲ್ಲ ವೈರಲ್ ಆಗಿಬಿಡುತ್ತವೆ. 2020 ರಲ್ಲಿ ತಮ್ಮ ಅಭಿಮಾನಿಗಳೊಟ್ಟಿಗೆ ವಿಜಯ್ ಸೆಲ್ಫಿಯೊಂದನ್ನು ತೆಗೆದುಕೊಂಡು ಅದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು, ಅದು ಆ ವರ್ಷದ ಅತಿ ಹೆಚ್ಚು ಲೈಕ್ಸ್ ಪಡೆದ ರೀಟ್ವೀಟ್ ಆದ ಚಿತ್ರವೆಂದು ದಾಖಲೆಯಾಗಿತ್ತು.
ವಿಜಯ್ಗೆ ಟ್ವಿಟ್ಟರ್ನಲ್ಲಿ 44 ಲಕ್ಷ ಫಾಲೋವರ್ಗಳಿದ್ದಾರೆ, ಆದರೆ ವಿಜಯ್ ಯಾರನ್ನೂ ಫಾಲೋ ಮಾಡುವುದಿಲ್ಲ. ಇನ್ನು ಫೇಸ್ಬುಕ್ನಲ್ಲಿ 78 ಲಕ್ಷ ಜನ ಫಾಲೋವರ್ಗಳಿದ್ದಾರೆ. ಇದೀಗ ಇನ್ಸ್ಟಾಗ್ರಾಂನಲ್ಲಿ ನಾಲ್ಕೇ ಗಂಟೆಯಲ್ಲಿ 25 ಲಕ್ಷ ಮಂದಿ ಫಾಲೋವರ್ಗಳನ್ನು ಗಳಿಸಿದ್ದು, ಮುಂದೆ ಈ ಸಂಖ್ಯೆ ಹತ್ತು ಕೋಟಿ ಮುಟ್ಟಿದರೂ ಆಶ್ಚರ್ಯವಿಲ್ಲ. ಅಂದಹಾಗೆ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ವ್ಯಕ್ತಿ ವಿರಾಟ್ ಕೊಹ್ಲಿ, ಅವರನ್ನು 24 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡುತ್ತಾರೆ.
ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ವಿಜಯ್ ನಟಿಸಿರುವ ವಾರಿಸು ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ಲೋಕೇಶ್ ಕನಗರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಜೊತೆಗೆ ಶಾರುಖ್ ಖಾನ್ ನಟಿಸುತ್ತಿರುವ ಜವಾನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.




