ನಾಟು-ನಾಟು ಹಾಡನ್ನು ಮೋದಿ-ಮೋದಿ ಎಂದು ಬದಲಾಯಿಸಿದ ಬಿಜೆಪಿ, ಪ್ರಚಾರ ಬಲುಜೋರು

ನಾಟು-ನಾಟು ಹಾಡನ್ನು ಮೋದಿ-ಮೋದಿ ಎಂದು ಬದಲಾಯಿಸಿ ಬಿಜೆಪಿಯು ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಸಚಿವ ಸುಧಾಕರ್ ಸೇರಿದಂತೆ ಇನ್ನೂ ಕೆಲವರು ಹಾಡನ್ನು ಹಂಚಿಕೊಂಡಿದ್ದಾರೆ.

ನಾಟು-ನಾಟು ಹಾಡನ್ನು ಮೋದಿ-ಮೋದಿ ಎಂದು ಬದಲಾಯಿಸಿದ ಬಿಜೆಪಿ, ಪ್ರಚಾರ ಬಲುಜೋರು
ನರೇಂದ್ರ ಮೋದಿ
Follow us
ಮಂಜುನಾಥ ಸಿ.
|

Updated on: Apr 11, 2023 | 4:59 PM

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಘೋಷಣೆಯಾಗಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಬಿರುಸಿನ ಪ್ರಚಾರ ಮಾಡುತ್ತಿವೆ. ಚುನಾವಣೆ ವೇಳೆ ಪಕ್ಷಗಳು ತಮ್ಮ ಪರವಾಗಿ ಮತ ಕೇಳಲು, ತಮ್ಮ ಸಾಧನೆಗಳನ್ನು ತಿಳಿಸಲು ವಿಡಿಯೋಗಳನ್ನು, ಹಾಡುಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಈ ಬಾರಿಯೂ ಈ ರೀತಿಯ ಹಾಡುಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಬಿಜೆಪಿಯು ಆಸ್ಕರ್ ವಿಜೇತ ನಾಟು-ನಾಟು (RRR Movie) ಹಾಡನ್ನು ತಮ್ಮ ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಂಡಿದೆ. ಹಾಡಿನ ಸಾಹಿತ್ಯವನ್ನು ನಾಟು-ನಾಟು ಬದಲಿಗೆ ಮೋದಿ-ಮೋದಿ ಎಂದು ಬದಲಾಯಿಸಿ ಮೋದಿಯ ಗುಣಗಾನ ಮಾಡುವ ಸಾಲುಗಳನ್ನು ಸೇರಿಸಿದೆ. ಹಾಡಿನ ವಿಡಿಯೋವನ್ನು ಸಚಿವ ಸುಧಾಕರ್ ಸೇರಿದಂತೆ ಇನ್ನೂ ಕೆಲವರು ಹಂಚಿಕೊಂಡಿದ್ದಾರೆ.

ಹಾಡಿನಲ್ಲಿ ಕರ್ನಾಟಕ್ಕೆ ಪ್ರಧಾನಿ ಮೋದಿ ನೀಡಿದ ಯೋಜನೆಗಳನ್ನು, ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಲಾಗಿದೆ. ಹಾಡಿನಲ್ಲಿ ಮೋದಿಯ ಹೊರತಾಗಿ ಇನ್ಯಾವುದೇ ಬಿಜೆಪಿ ನಾಯಕರ ಹೆಸರುಗಳು, ಸಾಧನೆಗಳ ವಿವರಗಳು ಇಲ್ಲ. ರಾಜ್ಯ ಸರ್ಕಾರದ ಸಾಧನೆಗಳ ಉಲ್ಲೇಖವೂ ಇಲ್ಲ. ಈ ಹಾಡನ್ನು ಭಾರತೀಯ ಜನತಾ ಯುವಮೋರ್ಚ ವತಿಯಿಂದ ಮಾಡಲಾಗಿದೆ.

ದೇವಸ್ಥಾನದ ಹಿನ್ನೆಯೆಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಇಬ್ಬರು ಯುವಕರು, ಇಬ್ಬರು ಯುವತಿಯರು ಮೋದಿ-ಮೋದಿ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ನಾಟು-ನಾಟು ಹಾಡಿನಲ್ಲಿ ಜೂ ಎನ್​ಟಿಆರ್-ರಾಮ್ ಚರಣ್ ಹಾಕಿದ್ದ ಸ್ಟೆಪ್​ಗಳನ್ನೇ ಮೋದಿ-ಮಾದಿ ಹಾಡಿಗೆ ಯುವಕ-ಯುವತಿಯರು ಹಾಕಿದ್ದಾರೆ. ಹಾಡಿನಲ್ಲಿ ಕೆಲವು ವೃದ್ಧರನ್ನು ಸಹ ಬಳಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಹಾಡು ಚೆನ್ನಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಾಡು ವೈರಲ್ ಆಗುತ್ತಿದೆ. ಹಾಡನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸುಧಾಕರ್, ‘ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ ನೇತೃತ್ವದಲ್ಲಿ ನಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪರ್ವವನ್ನು ಅದ್ಭುತವಾದ ಹಾಡಿನ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಯುವಮೋರ್ಚಾ ಪ್ರಯತ್ನ ಶ್ಲಾಘನೀಯ’ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕ ಬಿಜೆಪಿಯು ಕಳೆದ ತಿಂಗಳು ಅಧಿಕೃತವಾಗಿ ಹಾಡೊಂದನ್ನು ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಪ್ರಧಾನಿ ಮೋದಿ ಹಾಗೂ ರಾಜ್ಯ ಬಿಜೆಪಿಯ ಸಾಧನೆಗಳನ್ನು ಉಲ್ಲೇಖಿಸಲಾಗಿತ್ತು. ‘ಕನ್ನಡಿಗರ ಕಣ ಕಣದಲ್ಲೂ ಮೊಳಗಲಿದೆ ಬಿಜೆಪಿ’ ಎಂಬ ಆ ಹಾಡು ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಬಿಜೆಪಿಯ ಅಧಿಕೃತ ಹಾಡಾಗಿದೆ.

ಇದನ್ನೂ ಓದಿ: ಡ್ಯಾನ್ಸ್ ಟೀಚರ್ ಆಗಿದ್ದವನ ಆಸ್ಕರ್ ವರೆಗೆ ಕೊಂಡೊಯ್ದ ರಾಜಮೌಳಿ: ನಾಟು-ನಾಟು ಕೊರಿಯೋಗ್ರಾಫರ್ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನು ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷವು ಕೆಜಿಎಫ್ ಸಿನಿಮಾದ ಹಿನ್ನೆಲೆ ಸಂಗೀತವನ್ನು ಬಳಸಿಕೊಂಡಿದ್ದಕ್ಕೆ ಆ ಸಂಗೀತದ ಹಕ್ಕು ಹೊಂದಿದ ಸಂಸ್ಥೆಯೊಂದು ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದೀಗ ಬಿಜೆಪಿ ನಾಟು-ನಾಟು ಹಾಡನ್ನು ಬಳಸಿಕೊಂಡಿದೆ. ಹಕ್ಕುಗಳನ್ನು ಪಡೆದೇ ಹಾಡು ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ