ದೆಹಲಿಗೆ ದಿಢೀರ್ ಭೇಟಿ ನೀಡಿ ಕುತೂಹಲ ಮೂಡಿಸಿರುವ ಡಿಕೆ ಶಿವಕುಮಾರ ಕೇಳಿದ ಪ್ರಶ್ನೆಗಳಿಗೆ ಅನ್ಯಮನಸ್ಕರಾಗಿ ಉತ್ತರಿಸಿದರು
ಆಪರೇಶನ್ ಕಮಲದ ಮೂಲಕ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ಕಾರ್ಯಕರ್ತರನ್ನು ಸೆಳೆದುಕೊಳ್ಳುವುದು ಹೆಚ್ಚುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ಶಿವಕುಮಾರ, ಅವರು ಮಾಡಿಕೊಳ್ಳಲಿ, ಕೆಪಿಸಿಸಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
Delhi: ಕರ್ನಾಟಕ ಪ್ರದೇಶ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ (DK Shivakumar) ಅವರ ದಿಢೀರ್ ದೆಹಲಿ ಭೇಟಿ (Delhi visit) ರಾಜ್ಯ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಯಾಕೆಂದರೆ ಕೆಲವೇ ದಿನಗಳ ಹಿಂದೆ ರಾಜಸ್ತಾನದ ಉದಯಪುರನಲ್ಲಿ ನಡೆದ ಚಿಂತನ್ ಶಿವಿರ್ ನಲ್ಲಿ (Chinthan Shivir) ಹೈಕಮಾಂಡ್ನ ಎಲ್ಲ ಸದಸ್ಯರನ್ನು ಭೇಟಿಯಾಗಿದ್ದರು ಮತ್ತು ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಧಾನ ಪರಿಷತ್ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಭೇಟಿ ಕುತೂಹಲ ಮೂಡಿಸಿದ್ದು, ಟಿವಿ9 ಕನ್ನಡ ವಾಹಿನಿ ದೆಹಲಿ ವರದಿಗಾರ ಹರೀಷ್, ಶಿವಕುಮಾರರನ್ನು ಮಾತಾಡಿಸಿದರು. ಹಿಂದೆ ಸಿದ್ದರಾಮಯ್ಯನವರ ಜೊತೆ ಬಂದಿದ್ದ ಅವರು, ಈಗ ಒಬ್ಬರೇ ಎ ಫಾರ್ಮ್ ಗಳನ್ನು ತೆಗೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿದರು.
ದೆಹಲಿಯಲ್ಲಿ ತಮ್ಮ ಪಕ್ಷದ ಸದಸ್ಯರು ಇಲ್ಲದ ಕಾರಣ ಮತ್ತು ಬೇರೆ ಯಾರನ್ನೂ ಕಳಿಸುವುದು ಸಾಧ್ಯವಿರಲಿಲ್ಲವಾದ್ದರಿಂದ ತಾವೇ ಬಂದಿದ್ದಾಗಿ ಶಿವಕುಮಾರ ಹೇಳಿದರು. ಹಿಂದಿನ ಭೇಟಿಯಲ್ಲಿ ಅವಸರದಿಂದ ವಾಪಸ್ಸು ಹೋಗಬೇಕಾಗಿ ಬಂದ ವಿಷಯವನ್ನೂ ಅವರು ತಿಳಿಸಿದರು. ಎಐಸಿಸಿ ಎಲ್ಲ ರಾಜ್ಯಗಳಲ್ಲಿ ಜೂನ್ ಒಂದರಂದು ಚಿಂತನ್ ಶಿವಿರ್ ಗಳನ್ನು ನಡೆಸುವಂತೆ ಸೂಚನೆ ನೀಡಿದೆ, ಶಿವಕುಮಾರ್ ಜೂನ್ 9ರ ನಂತರ ಆಯೋಜಿಸಿಕೊಂಡಿದ್ದರಂತೆ.
ಅವರ ಮನವಿಯನ್ನು ಹೈಕಮಾಂಡ್ ಕಡೆಗಣಿಸಿ ಒಂದನೇ ತಾರೀಖಿನಂದೇ ನಡೆಸುವಂತೆ ಹೇಳಿರುವುದರಿಂದ ಮತ್ತು ತಾವು ಸಂಘಟನಾ ಸಮಿತಿಯ ಭಾಗವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಒಂದು ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವುದಾಗಿ ಹೇಳಿದರು,
ಚುನಾವಣೆ ವರ್ಷದಲ್ಲಿ ಆಪರೇಶನ್ ಕಮಲದ ಮೂಲಕ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ಕಾರ್ಯಕರ್ತರನ್ನು ಸೆಳೆದುಕೊಳ್ಳುವುದು ಹೆಚ್ಚುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ಶಿವಕುಮಾರ, ಅವರು ಮಾಡಿಕೊಳ್ಳಲಿ, ಕೆಪಿಸಿಸಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಹಾಗೆಯೇ, ಮಾಗಡಿ ಕ್ಷೇತ್ರದಲ್ಲಿ ಟಿಕೆಟ್ ಕುರಿತು ಎಚ್ ಎಮ್ ರೇವಣ್ಣ ಮತ್ತು ಹೆಚ್ ಎನ್ ಬಾಲಕೃಷ್ಣ ನಡುವೆ ತಲೆದೋರಿರುವ ಅಸಮಾಧಾನದ ವಿಷಯವಾಗಿಯೂ ಅವರು ಅನ್ಯಮನಸ್ಕರಾಗಿ ಉತ್ತರಿಸಿದರು.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಪರಿಷತ್ ಟಿಕೆಟ್ಗಾಗಿ ಜೋರಾದ ಫೈಟ್: ಮತ್ತೆ ದೆಹಲಿಗೆ ಹಾರಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್