ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಈಡಿ ನೋಟೀಸ್ ಮತ್ತು ಸಮನ್ಸ್ಗಳು ತಮಗೆ ಹೊಸದೇನೂ ಅಲ್ಲ ಇದಕ್ಕೂ ಮೊದಲು ಸಲ ಹಲವು ಸಲ ತನಗೆ ಮತ್ತು ಸುರೇಶ್ಗೆ ಈಡಿಯಿಂದ ಬುಲಾವ್ ಬಂದಿದೆ, ಕರೆದಾಗೆಲ್ಲ ಹೋಗಿ ವಿಚಾರಣೆ ಎದುರಿಸಿದ್ದೇವೆ, ಆಸಲಿಗೆ ಐಶ್ವರ್ಯ ಗೌಡ ವಂಚನೆ ಪ್ರಕರಣವನ್ನು ತನಿಖೆ ಮಾಡಿ ಅಂತ ಹೇಳಿದ್ದೇ ಸುರೇಶ್, ಜಾರಿ ನಿರ್ದೇಶನಾಲಯದ ತನಿಖೆಗೆ ಸಂಪೂರ್ಣ ಸಹಕಾರವನ್ನು ಸುರೆಶ್ ನೀಡುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು, ಜೂನ್ 17: ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಡಿಕೆ ಸುರೇಶ್ಗೆ ಸಮನ್ಸ್ ಜಾರಿ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಐಶ್ವರ್ಯ ಗೌಡ ಪ್ರಕರಣ ಮತ್ತು ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ, ಯಾರೋ ತಮ್ಮ ಹೆಸರ ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸುತ್ತಿರುವುದು ತಮ್ಮ ಗಮನಕ್ಕೂ ಬಂದಿತ್ತು, ಈ ಬಗ್ಗೆ ಸುರೇಶ್ ದೂರನ್ನು ಕೂಡ ದಾಖಲಿಸಿದ್ದಾರೆ, ಇಂದು ಬೆಳಗ್ಗೆ ಈಡಿ ಅಧಿಕಾರಿಗಳು ನೋಟೀಸ್ ತೆಗೆದುಕೊಂಡು ಬಂದಾಗ, ಸುರೇಶ್ ಮನೆಯಲ್ಲಿರಲಿಲ್ಲ, ಅದರೆ ತಾನಿದ್ದೆ, ಸುರೇಶ್ ಈಡಿ ಕಚೇರಿಗೆ ಬಂದು ವಿಚಾರಣೆ ಎದುರಿಸುತ್ತಾರೆಂದು ಅವರಿಗೆ ಹೇಳಿ ಕಳಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾಲ್ತುಳಿತ: ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ಯಾರು? ಡಿಕೆ ಶಿವಕುಮಾರ್ ಏನಂದ್ರು ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ