‘ಲಿಂಕ್​ ಬಂದ ತಕ್ಷಣ ಓಪನ್​ ಮಾಡಿ ಅದನ್ನು ನೋಡಬೇಡಿ’: ಪ್ರೇಕ್ಷಕರಲ್ಲಿ ಮನವಿ ಮಾಡಿದ ಆಲ್​ ಓಕೆ

|

Updated on: Jul 31, 2023 | 6:36 PM

Baang Movie Trailer: ‘ಬ್ಯಾಂಗ್​’ ಸಿನಿಮಾದ ಒಂದು ಹಾಡಿಗೆ ರ‍್ಯಾಪರ್​ ಆಲ್​ ಓಕೆ (ಅಲೋಕ್​) ಧ್ವನಿ ನೀಡಿದ್ದಾರೆ. ರಿತ್ವಿಕ್​ ಮುರಳೀಧರ್​ ಅವರು ಸಂಗೀತ ನೀಡಿದ್ದಾರೆ. ಆಗಸ್ಟ್​ 18ರಂದು ಈ ಸಿನಿಮಾ ತೆರೆಕಾಣಲಿದೆ.

ರಘು ದೀಕ್ಷಿತ್​, ಶಾನ್ವಿ ಶ್ರೀವಾಸ್ತವ (Shanvi Srivastava), ರಿತ್ವಿಕ್​ ಮುರಳೀಧರ್​, ನಾಟ್ಯರಂಗ, ಸುನೀಲ್​ ಗುಜ್ಜಾರ್​, ಸಾತ್ವಿಕಾ ಮುಂತಾದವರು ನಟಿಸಿದ ‘ಬ್ಯಾಂಗ್​’ (Baang Movie) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಆಗಸ್ಟ್​ 18ರಂದು ಈ ಸಿನಿಮಾ ತೆರೆಕಾಣಲಿದೆ. ಈ ಚಿತ್ರದ ಒಂದು ಹಾಡಿಗೆ ಆಲ್​ ಓಕೆ ಅವರು ಧ್ವನಿ ನೀಡಿದ್ದಾರೆ. ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಬಂದಿದ್ದ ಅವರು ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದರು. ‘ಕನ್ನಡ ಸಿನಿಮಾಗಳು ಚೆನ್ನಾಗಿ ಬರುತ್ತಿವೆ. ಆದರೆ ಜನರಿಗೆ ರೀಚ್​ ಆಗುತ್ತಿಲ್ಲ ಎಂಬ ದೂರು ಇದೆ. ಸಮಸ್ಯೆ ನಮ್ಮಲೇ ಇದೆ. ಕನ್ನಡ ಸಿನಿಮಾ ಬಂದಾಗ ಕನ್ನಡಿಗರಾದ ನಾವು ಚಿತ್ರಮಂದಿರಲ್ಲೇ ನೋಡಬೇಕು. ಪೈರಸಿ ಲಿಂಕ್​ ಬಂದ ತಕ್ಷಣ ನೋಡಬೇಡಿ. ಇಷ್ಟು ಜನರು ಕನಸು ಕಟ್ಟಿಕೊಂಡು ಒಂದು ಸಿನಿಮಾಗೆ ಕೆಲಸ ಮಾಡಿರುತ್ತಾರೆ. ಇನ್ಮುಂದೆ ಕನ್ನಡದಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳು ಬರುತ್ತವೆ’ ಎಂದು ಆಲ್​ ಓಕೆ (All Ok) ಹೇಳಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jul 31, 2023 06:27 PM