ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅನರ್ಹಕ್ಕೆ ಯಾವ್ಯಾವ ಕೇಸ್ಗಳು ಗೊತ್ತಾ? ವಕೀಲರು ಹೇಳಿದ್ದಿಷ್ಟು
ಹೈಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅಸಿಂಧುಗೊಳಿಸಿ ತೀರ್ಪು ವಿಚಾರ ಹಾಸನದಲ್ಲಿ ವಕೀಲ, ದೂರುದಾರ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮಾತನಾಡಿ ‘ಹಲವಾರು ಆಮೀಷಗಳು ಬಂದರೂ ನನ್ನಲ್ಲಿ ಗುರಿಯಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಗೆ ನ್ಯಾಯ ಸಿಕ್ಕಿದೆ ಎಂದಿದ್ದಾರೆ.
ಹಾಸನ, ಸೆ.07 : ಹೈಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸಂಸದ ಸ್ಥಾನ ಅಸಿಂಧುಗೊಳಿಸಿ ತೀರ್ಪು ವಿಚಾರ ಹಾಸನ (Hassan) ದಲ್ಲಿ ವಕೀಲ, ದೂರುದಾರ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮಾತನಾಡಿ ‘ಹಲವಾರು ಆಮೀಷಗಳು ಬಂದರೂ ನನ್ನಲ್ಲಿ ಗುರಿಯಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಗೆ ನ್ಯಾಯ ಸಿಕ್ಕಿದೆ. ನಾವು ಈ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಗೆದ್ದಿದ್ದೀವಿ. ಮುಂದೆ ತೀರ್ಪು ಏನಾದರೂ ಆಗಬಹುದು. ತೀರ್ಪು ಪ್ರಕಟವಾದ ದಿವನೇ ಅವರು ಒಂದು ಅಪ್ಲಿಕೇಶನ್ ಹಾಕಬೇಕಿತ್ತು. ಯಾವ ಕಾರಣಾಂತರದಿಂದ ಹಾಕಲಿಲ್ಲ ಗೊತ್ತಿಲ್ಲ. ಮೊನ್ನೆ ಹೈಕೋರ್ಟ್‌ಗೆ ತೀರ್ಪು ಅಮಾನತಿಗೆ ಮೊರೆ ಹೋಗಿದ್ದಾರೆ. ಮೂವತ್ತು ದಿನದೊಳಗೆ ಸುಪ್ರೀಂಕೋರ್ಟ್‌ಗೂ ಹೋಗಬಹುದು. ಈಗಾಗಲೇ ನಾನು ಸುಪ್ರೀಂಕೋರ್ಟ್‌ನಲ್ಲಿ ಕೇವಿಯೆಟ್ ಫೈಲ್ ಮಾಡಿದ್ದೇನೆ ಎಂದರು.
ಯಾವ್ಯಾವ ಕೇಸ್ಗಳು?
ಅವರ ಆಸ್ತಿಯ ವಿವರಣೆಯನ್ನು ಸರಿಯಾಗಿ ಸ್ಪಷ್ಟಪಡಿಸದೇ ಇರುವುದು.
ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡಿರುವುದು.
ವಿದ್ಯಾಭ್ಯಾಸದ ಸಂದರ್ಭದಲ್ಲೇ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ರಿಜಿಸ್ಟರ್ ಮಾಡಿಕೊಂಡಿರುವುದು
ಹೀಗೆ ಹತ್ತು ಹಲವು ಕೇಸ್ಗಳು ಹಾಕಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ