ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ದೇವಿ ನೆಲೆಸಿರಬೇಕೇ? ಹಾಗಾದರೆ ತಪ್ಪದೇ ಈ ವಿಧಾನಗಳನ್ನು ಅನುಸರಿಸಿ
ಲಕ್ಷ್ಮೀ ವಾಸಕ್ಕೆ ಶಾಂತಿ ಮತ್ತು ಸ್ವಚ್ಛತೆ ಅತ್ಯಗತ್ಯ. ಕೋಪ, ಜಗಳ, ಮತ್ತು ಸುಳ್ಳು ಲಕ್ಷ್ಮಿಯನ್ನು ದೂರವಿಡುತ್ತದೆ. ಬ್ರಾಹ್ಮಿ ಮುಹೂರ್ತ, ಅಭಿಜಿತ್ ಮುಹೂರ್ತ, ಮತ್ತು ಗೋಧೂಳಿ ಮುಹೂರ್ತಗಳಲ್ಲಿ ಜಗಳ ಮಾಡುವುದು ಅಶುಭ. ಮಕ್ಕಳು, ಹಿರಿಯರು, ಮತ್ತು ಅನಾರೋಗ್ಯಸ್ಥರ ಎದುರು ಜಗಳ ಮಾಡಬಾರದು. ಪರಿಶುಭ್ರತೆ, ಸತ್ಯತೆ, ಮತ್ತು ದೇವಭಕ್ತಿ ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಎನ್ನುತ್ತಾರೆ ಡಾ ಬಸವರಾಜ ಗುರೂಜಿ.
ಲಕ್ಷ್ಮೀ ಅಂದ ತಕ್ಷಣ ಶುಭ್ರತೆ, ಸತ್ಯ ಮನಃಪಟಲದಲ್ಲಿ ಹಾದುಹೋಗುತ್ತದೆ. ಸ್ವಚ್ಛತೆ, ಒಳ್ಳೆಯ ಹೃದಯ ಇರುವಲ್ಲಿ ಲಕ್ಷ್ಮೀ ಇರುತ್ತಾಳೆ. ಸ್ವಚ್ಛತೆ ಇರುವ ಕಡೆ ಲಕ್ಷ್ಮೀ ಇರುತ್ತಾಳೆ. ಶುಭ್ರತೆ ಇರುವ ಕಡೆ, ಮೋಸ ಇಲ್ಲದೆ ಇರುವ ಕಡೆ, ಸುಳ್ಳು ಹೇಳದೆ ಇರುವ ಕಡೆ, ಬೆಳಕು ಇರುವ ಕಡೆ ಲಕ್ಷ್ಮೀ ಇದ್ದೇ ಇರುತ್ತಾಳೆ. ಲಕ್ಷ್ಮೀ ಎಂದರೆ ಏನು? ಲಕ್ಷ್ಯಯತಿ ಇತಿ ಸದಾ ಸರ್ವಂ ಲಕ್ಷ್ಮೀ. ಜಗಳ ಆಡುವವರು ಇರುವಲ್ಲಿ ಮಹಾಲಕ್ಷ್ಮೀ ಇರ್ತಾರಾ? ಮಹಾಲಕ್ಷ್ಮೀ ಎಲ್ಲೆಲ್ಲಿ ಇರುತ್ತಾಳೆ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.
Published on: Mar 13, 2025 07:01 AM