ನಿತ್ಯ ಭಕ್ತಿ: ಪೂಜೆ ಮಾಡುವ ವೇಳೆ ಘಂಟೆ ಬಾರಿಸುವುದು ಯಾಕೆ ಗೊತ್ತಾ

|

Updated on: Feb 02, 2024 | 6:53 AM

ಘಂಟೆಯು ಪೂಜಾದಿಕಾಲಗಳಲ್ಲಿ ಬಾರಿಸುವ ಒಂದು ಬಗೆಯ ಶೋಭನ ವಾದ್ಯ. ಶುದ್ಧ ಕಂಚಿನಿಂದಾದ ಇದನ್ನು ಬಾರಿಸಿದಾಗ ಓಂಕಾರ ಸ್ಫುರಿಸುತ್ತದೆಂದು ಹೇಳಲಾಗಿದೆ. ಘಂಟೆ ಎಂಬುದು ಸಂಸ್ಕೃತದ ಘಂಟಾ ಎಂಬುದರ ತದ್ಭವ ರೂಪ. ಯಾವೊಂದು ಶುಭಕಾರ್ಯವನ್ನು ಘಂಟಾನಾದವಿಲ್ಲದೆ ಪ್ರಾರಂಭಿಸುವಂಸತಿಲ್ಲ. ಹಾಗಾದರೆ ಪೂಜೆ ಮಾಡುವ ವೇಳೆ ಘಂಟೆ ಏಕೆ ಬಾರಿಸಬೇಕು? ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.

ಘಂಟೆಯು ಪೂಜಾದಿಕಾಲಗಳಲ್ಲಿ ಬಾರಿಸುವ ಒಂದು ಬಗೆಯ ಶೋಭನ ವಾದ್ಯ. ಶುದ್ಧ ಕಂಚಿನಿಂದಾದ ಇದನ್ನು ಬಾರಿಸಿದಾಗ ಓಂಕಾರ ಸ್ಫುರಿಸುತ್ತದೆಂದು ಹೇಳಲಾಗಿದೆ. ಘಂಟೆ ಎಂಬುದು ಸಂಸ್ಕೃತದ ಘಂಟಾ ಎಂಬುದರ ತದ್ಭವ ರೂಪ. ಘಂಟೆಯ ನಾಲಗೆಯಲ್ಲಿ ಸರಸ್ವತಿಯೂ, ಮುಖದಲ್ಲಿ ಬ್ರಹ್ಮನೂ, ಹೊಟ್ಟೆಯಲ್ಲಿ ರುದ್ರನೂ, ದಂಡದಲ್ಲಿ ವಾಸುಕಿಯೂ ಮತ್ತು ತುದಿಯಲ್ಲಿ ಚಕ್ರವೂ ಅಧಿದೇವತೆಗಳಾಗಿ ನೆಲಸಿದ್ದಾರೆ. ಘಂಟಾಸ್ವನವನ್ನು ನಾದಬ್ರಹ್ಮವೆಂದು ಸಂಬೋಧಿಸಲಾಗಿದೆ. ಘಂಟೆಯಮೇಲೆ ಹನುಮಂತ ಚಕ್ರ, ಗರುಡ, ವೃಷಭಶೂಲ, ಕಮಲ ಇತ್ಯಾದಿ ಚಿಹ್ನೆಗಳಿರುವುದುಂಟು. ಯಾವೊಂದು ಶುಭಕಾರ್ಯವನ್ನು ಘಂಟಾನಾದವಿಲ್ಲದೆ ಪ್ರಾರಂಭಿಸುವಂಸತಿಲ್ಲ. ಹಾಗಾದರೆ ಪೂಜೆ ಮಾಡುವ ವೇಳೆ ಘಂಟೆ ಏಕೆ ಬಾರಿಸಬೇಕು? ಎಲ್ಲಿದೆ ಉತ್ತರ..